/newsfirstlive-kannada/media/media_files/2025/10/03/hc_mahadevappa_grandson-2025-10-03-21-53-47.jpg)
ಮೈಸೂರು ದಸರಾ ಆರಂಭಕ್ಕೂ ಮುನ್ನ ಉದ್ಘಾಟನೆ ವಿಚಾರಕ್ಕೆ ವಿವಾದ ಮಾಡಿಕೊಂಡಿದ್ದ ರಾಜ್ಯ ಸರ್ಕಾರ ದಸರಾ ಮುಗಿದ್ಮೇಲೆಯೂ ವಿವಾದಕ್ಕೆ ತುತ್ತಾಗಿದೆ. ದಸರಾ ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮೊಮ್ಮಗನ ಭಾಗಿಯಾಗಿ ಶಿಷ್ಟಾಚಾರ ಉಲ್ಲಂಘಿಸಿದೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ದಸರಾ ಬೆನ್ನಲ್ಲೇ ಗಜಪಡೆಗಳು ರಿಲ್ಯಾಕ್ಸ್ ಮೂಡ್​ಗೆ ಜಾರಿವೆ.
ತೆರೆದ ಜೀಪ್​​ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಹೆಚ್​.ಸಿ ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ನಡುವೆ ವೈಟ್ ಶರ್ಟ್ ಹಾಗೂ ಕಪ್ಪು ಕ್ಲೂಲಿಂಗ್ ಗ್ಲಾಸ್ ಹಾಕಿಕೊಂಡು ನಿಂತಿರುವ ಪುಟ್ಟ ಬಾಲಕ. ಸಿಎಂ, ಡಿಸಿಎಂ ನಡುವೆ ನಿಂತಿರೋ ಇವರು ಯಾರಪ್ಪ ಅಂತ ನೆರೆದಿದ್ದವರು ಅಚ್ಚರಿಗೆ ಒಳಗಾಗಿದ್ದರು. ಮೈಸೂರು ದಸರಾದಲ್ಲಿ ರಾಜ್ಯ ಸರ್ಕಾರ ಮಾಡಿಕೊಂಡಿರೋ ಮತ್ತೊಂದು ಯಡವಟ್ಟಿನ ಕಥೆ ಇದು.
ದಸರಾ ಉತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘಿಸಿತಾ ಸರ್ಕಾರ?
ಸರ್ಕಾರಿ ಕಾರ್ಯಕ್ರಮಕ್ಕೂ, ಖಾಸಗಿ ಕಾರ್ಯಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲದಂತೆ ರಾಜ್ಯ ಕಾಂಗ್ರೆಸ್ ನಾಯಕರು ವರ್ತನೆ ಮಾಡಿರೋದು ಬಯಲಾಗಿದೆ. ನಿನ್ನೆ ಮೈಸೂರು ದಸರಾ ಮೆರವಣಿಗೆಯ ಪರೇಡ್​​ನಲ್ಲಿ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪರ ಮೊಮ್ಮಗ ಭಾಗಿಯಾಗಿರೋದು ವಿವಾದ ಸೃಷ್ಟಿಸಿದೆ. ಮೈಸೂರಿನ ಅರಮನೆ ಮುಂದೆ ನಂದಿ ಧ್ವಜ ಪೂಜೆ ಬಳಿಕ ತೆರೆದ ಜೀಪಿನಲ್ಲಿ ಸಿಎಂ ಪರೇಡ್ ಮಾಡುವ ಕಾರ್ಯಕ್ರಮವಿತ್ತು. ಸಿಎಂ ಸಿದ್ಧರಾಮಯ್ಯ ಅವರ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ತನ್ವೀರ್ ಸೇಠ್ ಕೂಡ ಜೀಪ್‌ನಲ್ಲಿದ್ದರು. ಎಲ್ಲರೂ ಕೂಡ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು. ಆದ್ರೆ, ಈ ವೇಳೆ ಎಲ್ಲರ ಕಣ್ಣು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಿಎಂ, ಡಿಸಿಎಂಗೆ ಹಿಂದೆ ನಿಂತಿರುವ ಬಾಲಕನತ್ತ ಎಲ್ಲರ ಕಣ್ಣು ನೆಟ್ಟಿತ್ತು. ಯಾರು ಈ ಬಾಲಕ ಎಂಬ ಅಚ್ಚರಿಗೂ ಕಾರಣ ಆಗಿತ್ತು.
ರಾಜ್ಯ ಸರ್ಕಾರಕ್ಕೆ ವರದಿ ಕೇಳಿದ ಹೈಕಮಾಂಡ್
ಇನ್ನು ಶಿಷ್ಟಾಚಾರ ಉಲ್ಲಂಘಿಸಿ ಮೆರವಣಿಗೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಕಲ್ಪಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ ದಸರಾ ಜಂಬೂಸವಾರಿ ದಿನದ ಒಂದು ಬೆಳವಣಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿರುವ ಕಾರಣಕ್ಕೆ ಹೈಕಮಾಂಡ್‌ಗೆ ದೂರು ಹೋಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಡಿಸಿಎಂ, ಸರ್ಕಾರ ಸಚಿವರ ಪರೇಡ್ ಸಾಮಾನ್ಯ. ಇದರಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ, ಭಾಗಿಯಾಗಿದ್ದವನು ಯಾರು ಎಂಬೆಲ್ಲಾ ಮಾಹಿತಿ ಕೇಳಿದೆ.. ಪ್ರಾಥಮಿಕ ಮಾಹಿತಿಗಳ ಪ್ರಕಾರ ಆ ಬಾಲಕ ಸಚಿವ ಹೆಚ್.ಸಿ ಮಹದೇವಪ್ಪ ಮೊಮ್ಮಗ ಅಂತ ತಿಳಿದು ಬಂದಿದೆ.
ಇದನ್ನೂ ಓದಿ: ಖ್ಯಾತ ಪತ್ರಕರ್ತ, ಲೇಖಕ, ಅಂಕಣಕಾರ TJS ಜಾರ್ಜ್ ನಿಧನ.. ಸಿಎಂ ಸಿದ್ದರಾಮಯ್ಯ ಸಂತಾಪ
ದಸರಾ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​​ ಮೂಡ್​​ನಲ್ಲಿ ಗಜಪಡೆ!
ಇತ್ತ ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ದಸರಾದಲ್ಲಿ ಭಾಗಿಯಾಗಿದ್ದ ಗಜಪಡೆಗಳು ರಿಲ್ಯಾಕ್ಸ್ ಮೂಡ್​ಗೆ ಜಾರಿವೆ. ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಗಜಪಡೆಗೆ ಅದ್ಧೂರಿ ಪೋಟೋಶೂಟ್ ನಡೆಸಲಾಗಿದೆ. ಅಧಿಕಾರಿಗಳು, ಮಾವುತರು, ಕಾವಾಡಿಗರೊಂದಿಗೆ ಗಜಪಡೆ ಪೋಟೋ ಶೂಟ್​ಗೆ ಪೋಸ್ ಕೊಟ್ಟಿವೆ. ಇನ್ನು ಗಜಪಡೆ ನೋಡಲು ನೂರಾರು ಜನರು ಆಗಮಿಸ್ತಿದ್ದು ಪೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದ್ದಾರೆ. 6ನೇ ಬಾರಿ ಜಂಬೂಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ನಾಳೆ ಅರಮನೆಯಿಂದ ಕಾಡಿನತ್ತ ಪ್ರಯಾಣ ಬೆಳೆಸಲಿವೆ.
ಬೆಂಗಳೂರಲ್ಲಿ ಆರ್​ಸಿಬಿ ವಿಜಯೋತ್ಸವ ಸಮಾರಂಭದ ವೇದಿಕೆಯಲ್ಲಿ ಸಿಎಂ- ಡಿಸಿಎಂ ಕುಟುಂಬಸ್ಥರು ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಸದ್ಯ ದಸರಾದ ಸರ್ಕಾರಿ ಕಾರ್ಯಕ್ರಮವನ್ನೂ ಕಾಂಗ್ರೆಸ್ ನಾಯಕರು ಅದೇ ರೀತಿ ಅಂದುಕೊಂಡ್ರಾ ಎಂಬಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ