Advertisment

ಖ್ಯಾತ ಪತ್ರಕರ್ತ, ಲೇಖಕ, ಅಂಕಣಕಾರ TJS ಜಾರ್ಜ್ ನಿಧನ.. ಸಿಎಂ ಸಿದ್ದರಾಮಯ್ಯ ಸಂತಾಪ

ಜಾರ್ಜ್ ಅವರು ಪ್ರತಿಕೋದ್ಯಮಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಸಂಪಾದಕೀಯ ಸಲಹೆಗಾರರಾಗಿ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರ್ಜ್​ ಧ್ವನಿ ಎತ್ತಿದ್ದರು.

author-image
Bhimappa
TJS_George_1
Advertisment

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಟಿಜೆಎಸ್ ಜಾರ್ಜ್ (97) ಅವರು ಇಂದು ಸಂಜೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಂಪಾದಕರು, ಅಂಕಣಕಾರರಾಗಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸುತ್ತಿದ್ದ ಜಾರ್ಜ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಅಂಕಣ ಬರೆಯುತ್ತಿದ್ದರು. ಸದ್ಯ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. 

Advertisment

ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್​ ಖಾತೆ ಮೂಲಕ ಸಂತಾಪ ಸೂಚಿಸಿದ್ದಾರೆ. ಜಾರ್ಜ್​ ಕೊನೆಯುಸಿರೆಳೆದಿರುವುದು ತೀವ್ರ ದುಃಖ ತರಿಸಿದೆ. ಹರಿತವಾದ ಲೇಖನಿ ಹಾಗೂ ರಾಜೀಗೊಳ್ಳದ ಧ್ವನಿಯಿಂದ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದರು. ಓದುಗರನ್ನು ತೊಡಗಿಸಿಕೊಳ್ಳುವಂತೆ, ಯೋಚನೆ ಮಾಡುವಂತೆ ಮಾಡಿದ ನಿಜವಾದ ಬುದ್ಧಿಜೀವಿ ಎಂದು ಸಿಎಂ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.

TJS_George

ಟಿಜೆಎಸ್​ ಜಾರ್ಜ್​ ಅವರ ಪೂರ್ಣ ಹೆಸರು ಥೈಲ್ ಜಾಕೋಬ್ ಸೋನಿ ಜಾರ್ಜ್ ಅಂತ. ಇವರು ಪ್ರತಿಕೋದ್ಯಮಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಸಂಪಾದಕೀಯ ಸಲಹೆಗಾರರಾಗಿ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರ್ಜ್​ ಧ್ವನಿ ಎತ್ತಿದ್ದರು. ಸಾಪ್ತಾಹಿಕ ಅಂಕಣ ಪಾಯಿಂಟ್ ಆಫ್ ವ್ಯೂ 25 ವರ್ಷಗಳ ಕಾಲ ಬರೆದಿರುವುದು ದಾಖಲೆ ಎನ್ನಬಹುದು. 

ಪಾಯಿಂಟ್ ಆಫ್ ವ್ಯೂ ಅಂಕಣಕ್ಕೆ ಜೂನ್ 2022 ರಲ್ಲಿ ಕೊನೆಯ ಬಾರಿ ಬರೆದು ಪೂರ್ಣ ವಿರಾಮ ಹೇಳಿದರು. ಇದೇ ಅಂಕಣ ಕನ್ನಡಪ್ರಭದಲ್ಲಿ ನೇರಮಾತು ಹೆಸರಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿತ್ತು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಾಗೂ ಸಾಹಿತ್ಯ, ಶಿಕ್ಷಣಕ್ಕೆ ಇವರು ನೀಡಿದ ಅತ್ಯುತ್ತಮ ಕೊಡುಗೆಗಳನ್ನ ಪರಿಗಣಿಸಿ 2011 ರಲ್ಲಿ ಭಾರತ ಸರ್ಕಾರವೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 

Advertisment

ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರು 1928 ಮೇ 7 ರಂದು ಕೇರಳದಲ್ಲಿ ಜನಿಸಿದರು. ಇವರ ತಂದೆ ಥಾಮಸ್ ಜಾಕೋಬ್ ಮ್ಯಾಜಿಸ್ಟ್ರೇಟ್ ಆಗಿದ್ದರು. ತಾಯಿ ಚಾಚಿಮ್ಮ ಅವರು ಗೃಹಿಣಿಯಾಗಿದ್ದರು. ಥಾಮಸ್ ಜಾಕೋಬ್ ಮತ್ತು ಚಾಚಿಮ್ಮ ದಂಪತಿಯ 8 ಮಕ್ಕಳಲ್ಲಿ ಟಿಜೆಎಸ್ ಜಾರ್ಜ್ ಅವರು ನಾಲ್ಕನೇ ಮಗನಾಗಿದ್ದರು. 

ಇದನ್ನೂ ಓದಿ:ವಿದ್ಯಾರ್ಥಿ ಯಲ್ಲಾಲಿಂಗ ಕೇಸ್ ನಲ್ಲಿ ಎಲ್ಲ ಆರೋಪಿಗಳು ಖುಲಾಸೆ: ಇದು ಕೊಲೆಯಲ್ಲ, ಆತ್ಮಹತ್ಯೆ ಎಂದು ಕೋರ್ಟ್ ತೀರ್ಪು

TJS_George_2

ಇವರ ಕುಟುಂಬವೆಲ್ಲ ಕೇರಳದ ತುಂಪಮೊನ್​ನಲ್ಲಿ ನೆಲಸಿದ್ದರೇ, ಟಿಜೆಎಸ್ ಜಾರ್ಜ್ ತನ್ನ ಹೆಂಡತಿ ಅಮ್ಮು ಜಾರ್ಜ್​ ಜೊತೆ ಬೆಂಗಳೂರು ಹಾಗೂ ಕೊಯಮತ್ತೂರಲ್ಲಿ ವಾಸಿಸುತ್ತಿದ್ದರು. ಟಿಜೆಎಸ್ ಜಾರ್ಜ್ ಅವರಿಗೆ ಶೇಬಾ ಥೈಲ್ ಎಂಬ ಮಗಳು ಹಾಗೂ ಜೀತ್ ಥೈಲ್ ಎಂಬ ಮಗ ಇದ್ದಾರೆ. ಅಮೆರಿಕನ್ ದೂರದರ್ಶನದ ಪತ್ರಕರ್ತ ರಾಜ್ ಮಥಾಯಿ ಅವರು ಟಿಜೆಎಸ್ ಜಾರ್ಜ್ ಅವರ ಸೋದರಳಿಯ ಆಗಿದ್ದಾರೆ. 

Advertisment

ಹಾಂಗ್ ಕಾಂಗ್‌ನಿಂದ ಪ್ರಕಟವಾಗುವ ಏಷ್ಯಾವೀಕ್‌ನ ಸ್ಥಾಪಕ ಸಂಪಾದಕರಾಗುವ ಮೊದಲು ಅವರು ದಿ ಸರ್ಚ್‌ಲೈಟ್, ಇಂಟರ್ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ಮತ್ತು ಫಾರ್ ಈಸ್ಟರ್ನ್ ಎಕನಾಮಿಕ್ ರಿವ್ಯೂನಲ್ಲಿ ಕೆಲಸ ಮಾಡಿದ್ದರು.

ಚೆನ್ನೈನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ಸ್ ಪದವಿ ಪಡೆದರು. ಇದಾದ ಮೇಲೆ 1950 ರಲ್ಲಿ ಫ್ರೀ ಪ್ರೆಸ್​ ಜರ್ನಲ್​, ಮುಂಬೈನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ​ಟಿಜೆಎಸ್ ಜಾರ್ಜ್ ಅವರು ತಮ್ಮ ಪುಸ್ತಕಗಳೊಂದಿಗೆ ವೃತ್ತಿಪರ ಲೇಖಕರಾಗಿ, ಜೀವನಚರಿತ್ರೆಕಾರರಾಗಿ ಹಾಗೂ ಗಂಭೀರ ರಾಜಕೀಯ ಅಂಕಣಕಾರರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.

ಕನ್ನಡ ಪತ್ರಿಕೋದ್ಯಮಕ್ಕೂ ಟಿಜೆಎಸ್​ ಜಾರ್ಜ್ ಅವರು ಭಾರೀ ಕೊಡುಗೆ ನೀಡಿದ್ದಾರೆ. ಕನ್ನಡಪ್ರಭ ಪತ್ರಿಕೆಯನ್ನು ರೂಪಿಸಿ ಬೆಳೆಸುವಲ್ಲಿ ಟಿಜೆಎಸ್​ ಜಾರ್ಜ್ ಅವರ ಕೊಡುಗೆ ಇದೆ. ಕನ್ನಡಪ್ರಭದ ಈಗಿನ ಸಂಪಾದಕರಾದ ರವಿ ಹೆಗಡೆ, ಕನ್ನಡಪ್ರಭದ ಹಿಂದಿನ ಸಂಪಾದಕರಾದ ಹೆಚ್​​.ಆರ್ ರಂಗನಾಥ್, ಶಿವಸುಬ್ರಹ್ಮಣ್ಯ ಸೇರಿದಂತೆ ಅನೇಕ ಸಂಪಾದಕರು ಟಿಜೆಎಸ್​ ಜಾರ್ಜ್​ ಅವರ ಗರಡಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಬೆಳೆದವರು. ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಿದವರು. ಮುಂದಿನ ತಲೆ ಮಾರಿಗೂ ಪತ್ರಿಕೋದ್ಯಮವನ್ನು ಬೆಳೆಸಿದವರು ಟಿಜೆಎಸ್ ಜಾರ್ಜ್​ ಎನ್ನುವುದು ವಿಶೇಷ. 

Advertisment

ಟಿಜೆಎಸ್​ ಜಾರ್ಜ್ ಅವರ ಬಗ್ಗೆ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರು ಹೇಳಿದ್ದು ಏನು?

ಇವತ್ತು ನಾನು ಏನಾಗಿದ್ದರೂ ಆಗಿದ್ದರೇ ಅದು ಟಿಜೆಎಸ್​ ಜಾರ್ಜ್​ ಅವರಿಂದಲೇ. ಕನ್ನಡ ಪತ್ರಿಕೋದ್ಯಮದಲ್ಲಿ ನಮ್ಮ ಯೋಚನೆ ಹೇಗಿರಬೇಕು, ಹೊಸತನ ಹೇಗಿರಬೇಕು, ಯಾವ ಮಾರ್ಗದಲ್ಲಿ ಹೋಗಬೇಕು ಎಂದು ವಿಶ್ವೇಶ್ವರ ಭಟ್​, ರಂಗನಾಥ್, ಕಲಾವಿದ ಸುಧಾಕರ್ ದರ್ಬೆ, ಜೋಗಿ (ಗಿರೀಶ್ ರಾವ್ ಹತ್ವಾರ್), ಡಿಜಿಟಲ್​ನಲ್ಲಿ ಶ್ಯಾಮ್​ ಸುಂದರ್ ಇವರಿಗೆಲ್ಲ ಗೈಡ್​ ಮಾಡಿದ್ದೇ ಟಿಜೆಎಸ್​ ಜಾರ್ಜ್.

ಎಡಿಟರ್ ಆಗಿದ್ದರೂ ಟೀಚರ್​ ಅಂತೆ ಇದ್ದರು. ಕನ್ನಡ ಹಾಗೂ ಇಂಗ್ಲಿಷ್​ ಪತ್ರಿಕೋದ್ಯಮದಲ್ಲಿ ಹೊಸ ತಲೆ ಮಾರಿನ ಚಿಂತನೆ ಪ್ರಕ್ರಿಯೆ ಬೇಕೆಂದು ಏಷ್ಯಾನ್ ಕಾಲೇಜ್ ಆಫ್ ಜರ್ನಲಿಸಂ ಅನ್ನು ಪ್ರಾರಂಭಿಸಿದರು. ಮುಂದಿನ ದಿನಗಳಿಗೆ ಪತ್ರಿಕೋದ್ಯಮ ಟೆಲಿವಿಷನ್​, ಡಿಜಿಟಲ್​ಗೆ ಹೇಗೆ ಒಗ್ಗಿಕೊಳ್ಳಬೇಕು ಎಂದು ನಮಗೆ ದಾರಿ ತೋರಿಸಿದ್ದು ಟಿಜೆಎಸ್​ ಜಾರ್ಜ್. 

Advertisment

ಸಂಪಾದಕ ಆಗಬೇಕು ಎಂದರೆ ವಯಸ್ಸು ಜಾಸ್ತಿ ಆಗಿರಬೇಕು, ಬಿಳಿ ತಲೆ ಆಗಿರಬೇಕು ಎನ್ನುವ ಯೋಚನೆ ಇತ್ತು. ಆದರೆ ಅವರು ನಮ್ಮನ್ನು ಎಡಿಟರ್ ಮಾಡಿದಾಗ 32 ರಿಂದ 35 ವರ್ಷಗಳು ನಮಗೆ ಆಗಿದ್ದವು ಅಷ್ಟೇ. ಯುವ ವಯಸ್ಸಿನಲ್ಲೇ ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಿ ನಮ್ಮ ಕೈ ಬಿಡಲಿಲ್ಲ. ಅದರ ತಕ್ಕನಾಗೆ ಮಾರ್ಗದರ್ಶನ ಮಾಡಿ ಮುಂದೆ ನಡೆಸಿದರು. 

ಅವರು ಪಾಯಿಂಟ್ ಆಫ್ ವ್ಯೂವ್ ಸ್ಟಾಪ್ ಮಾಡಿದರು. ಆದರೆ ನಾವು ಅವಾಗ ಅವಾಗ ಹೋಗಿ ಅವರನ್ನು ಭೇಟಿ ಮಾಡುತ್ತಿದ್ದೇವು. ಕೊನೆಯದಾಗಿ ಅವರನ್ನು ಹುಟ್ಟುಹಬ್ಬದಂದು ಬೋರಿಂಗ್ ಇನ್​ಸ್ಟಿಟ್ಯೂಟ್​ಗೆ ಕರೆದುಕೊಂಡು ಹೋಗಿ 97ನೇ ಬರ್ತ್​​ಡೇ ಅನ್ನು ಆಚರಣೆ ಮಾಡಿದ್ದೇವು. ಇದೇ ಅವರ ನಮ್ಮ ಕೊನೆಯ ಭೇಟಿ ಆಗಿತ್ತು. 

ರವಿ ಹೆಗಡೆ, ಕನ್ನಡಪ್ರಭದ ಪ್ರಧಾನ ಸಂಪಾದಕರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Bangalore TJS George
Advertisment
Advertisment
Advertisment