/newsfirstlive-kannada/media/media_files/2025/11/07/katrina-kaife-2025-11-07-15-51-05.jpg)
ಬಾಲಿವುಡ್​ನ ಸ್ಟಾರ್​ ನಟಿ ಕತ್ರಿನಾ ಕೈಫ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ರು.
ಇಂದು ಕತ್ರಿನಾ ಕೈಫ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಕತ್ರಿನಾ ದಂಪತಿ ಸೋಶಿಯಲ್​ ಮೀಡಿಯಾದಲ್ಲಿ ತಂದೆ - ತಾಯಿ ಆದ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಮಗುವಿಗಾಗಿ ಹರಕೆ ಹೊತ್ತು ಕುಕ್ಕೆ ಸುಬ್ರಮಣ್ಯಕ್ಕೆ ಸಹ ಕತ್ರಿಕಾ ಕೈಫ್​ ಭೇಟಿ ನೀಡಿದ್ದರು.
ಕತ್ರಿನಾ ಮತ್ತು ವಿಕ್ಕಿ ಕುಶಲ್, 2021 ಡಿಸೆಂಬರ್​​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್​ನ ಸೂಪರ್ ಸ್ಟಾರ್ ಆಗಿರುವ ಇಬ್ಬರು, ಇದೀಗ ಪೋಷಕರಾಗಿರುವ ಸಂತೋಷದಲ್ಲಿದ್ದಾರೆ.
ಇದನ್ನೂ ಓದಿ: RCB ಯಾರನ್ನೆಲ್ಲಾ ಉಳಿಸಿಕೊಂಡಿದೆ? ಕನ್ನಡತಿಯನ್ನು ಕೈಬಿಡದ ಡೆಲ್ಲಿ ಕ್ಯಾಪಿಟಲ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us