/newsfirstlive-kannada/media/media_files/2025/11/07/rcb-women-2025-11-07-15-28-32.jpg)
ವುಮೆನ್ಸ್ ಪ್ರೀಮಿಯರ್ ಲೀಗ್ ರಿಟೆನ್ಶನ್ ಮುಗಿದಿದೆ. ಆಟಗಾರ್ತಿಯರ ರಿಟೆನ್ಶನ್ ವಿಚಾರದಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಫ್ರಾಂಚೈಸಿಗಳು, ಮೆಗಾ ಹರಾಜಿಗೆ ರೆಡಿಯಾಗಿವೆ. ಸೂಪರ್​ಸ್ಟಾರ್ ಆಟಗಾರ್ತಿಯರಿಗೆ ಹೆಚ್ಚು ಮಣೆ ಹಾಕಿರುವ ಫ್ರಾಂಚೈಸಿಗಳು, ಕೋರ್ ಟೀಮ್​​​​​​​ ಉಳಿಸಿಕೊಂಡಿವೆ. ಹರಾಜಿನಲ್ಲಿ ಬೆಸ್ಟ್ ಪ್ಲೇಯರ್ಸ್​​ ಖರೀದಿಗೆ ಮುಂದಾಗಿವೆ.
ಇದನ್ನೂ ಓದಿ: ಶುಭ್​ಮನ್ ಗಿಲ್ ಬ್ಯಾಟಿಂಗ್​ ಎಲ್ಲರಿಗೂ ಬೇಸರ ತರಿಸಿತಾ.. ಕ್ಯಾಪ್ಟನ್ ಆಟ ಆಡಲೇ ಇಲ್ವಾ?
ಆರ್​ಸಿಬಿ ಫ್ರಾಂಚೈಸಿ​ ಯಾರನ್ನೆಲ್ಲಾ ರೀಟೇನ್ ಮಾಡ್ತು?
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ನಾಲ್ವರು ಆಟಗಾರ್ತಿಯನ್ನ ತನ್ನಲ್ಲೇ ಉಳಿಸಿಕೊಂಡಿದೆ. 3.50 ಕೋಟಿಗೆ ಸ್ಮೃತಿ ಮಂದಾನರನ್ನ ಮೊದಲ ರೀಟೇನ್ ಆಟಗಾರ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಆರ್​ಸಿಬಿ, ರಿಚಾ ಘೋಷ್​​ಗೆ 2.75 ಕೋಟಿ, ಎಲೀಸ್ ಪೆರ್ರಿಗೆ 2 ಕೋಟಿ ಮತ್ತು ಶ್ರೇಯಾಂಕಾ ಪಾಟೀಲ್​​ಗೆ 60 ಲಕ್ಷ ರೂಪಾಯಿ ನೀಡಿ ರೀಟೇನ್ ಮಾಡಿಕೊಂಡಿದೆ. ಆರ್​ಸಿಬಿ ಬಳಿ 1 RTM ಮತ್ತು ಪರ್ಸ್​​ನಲ್ಲಿ 6.15 ಕೋಟಿ ರೂಪಾಯಿ ಬ್ಯಾಲೆನ್ಸ್​ ಉಳಿದುಕೊಂಡಿದೆ.
RTMಗೆ ಆಸಕ್ತಿ ತೋರದ ಅಂಬಾನಿ ಫ್ರಾಂಚೈಸಿ
ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಸಾಲಿಡ್ ಆಟಗಾರ್ತಿಯರನ್ನೇ ಉಳಿಸಿಕೊಂಡಿದೆ. ಇಂಗ್ಲೆಂಡ್​​ನ ನಟಾಲಿ ಸೀವರ್ ಬ್ರಂಟ್​ಗೆ 3.50 ಕೋಟಿ ನೀಡಿದ್ರೆ ಹರ್ಮನ್​ಪ್ರೀತ್ ಕೌರ್​ 2.50 ಕೋಟಿ ಪಡೆದು ಎರಡನೇ ರಿಟೆನ್ಶನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಹಾಗೆ ವಿಂಡೀಸ್​​ನ ಹೇಲಿ ಮ್ಯಾಥ್ಯೂಸ್ 1.75 ಕೋಟಿ ಪಡೆದ್ರೆ ಅಮನ್​ಜೋತ್ ಕೌರ್ 1 ಕೋಟಿ ರೂಪಾಯಿ ಪಡೆದಿದ್ದಾರೆ. ಕಮಾಲಿನಿ 50 ಲಕ್ಷ ರೂಪಾಯಿ ಪಡೆದ ಅನ್​ಕ್ಯಾಪ್ಡ್ ಆಟಗಾರ್ತಿ. ಸದ್ಯ ಮುಂಬೈ ಪರ್ಸ್​ನಲ್ಲಿ 5.75 ಕೋಟಿ ಬ್ಯಾಲೆನ್ಸ್ ಇದೆ. MIಗೆ RTM ಆಪ್ಶನ್ ಇಲ್ಲ.
ಕನ್ನಡತಿಯನ್ನ ಕೈ ಬಿಡದ ಡಿಸಿ ಫ್ರಾಂಚೈಸಿ
ಆಟಗಾರ್ತಿಯರ ರಿಟೆನ್ಶನ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಮಾರ್ಟ್ ಗೇಮ್ ಆಡಿದೆ. ರೀಟೇನ್ ಮಾಡಿರುವ ಎಲ್ಲಾ ಕ್ಯಾಪ್ಡ್​​ ಪ್ಲೇಯರ್ಸ್​ಗೆ ಡಿಸಿ, ಸರಿ ಸಮ ಹಣ ನೀಡಿದೆ. ಜೆಮೀಮಾ ರಾಡ್ರಿಗ್ಸ್​, ಶಫಾಲಿ ವರ್ಮಾ, ಆನಬೆಲ್ ಸದರ್​ಲೆಂಡ್ ಮತ್ತು ಮಾರಿಝಾನ್ ಕಾಪ್​​ಗೆ ತಲಾ 2.20 ಕೋಟಿ ರೂಪಾಯಿ ನೀಡಲಾಗಿದೆ. ಕರ್ನಾಟಕದ ಅನ್​ಕ್ಯಾಪ್ಡ್ ಆಟಗಾರ್ತಿ ನಿಕ್ಕಿ ಪ್ರಸಾದ್​ಗೆ ಡಿಸಿ 50 ಲಕ್ಷ ರೂಪಾಯಿ ನೀಡಿ ಉಳಿಸಿಕೊಂಡಿದೆ.​​
ಇದನ್ನೂ ಓದಿ:ಸೂರ್ಯ ಪಡೆ T20 ಪಂದ್ಯ ಗೆಲ್ಲಲೇಬೇಕು.. ಬಲಿಷ್ಠ ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಅವಕಾಶ..?
ಗುಜರಾತ್ ಜೈಂಟ್ಸ್​​ ಸಾಕಷ್ಟು ಲೆಕ್ಕಾಚಾರ ಹಾಕಿ ಕೇವಲ ಇಬ್ಬರೇ ಇಬ್ಬರು ಆಟಗಾರ್ತಿಯನ್ನ ತಂಡದಲ್ಲಿ ಉಳಿಸಿಕೊಂಡಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಌಶ್ ಗಾರ್ಡನರ್​​​ಗೆ 3.50 ಕೋಟಿ ನೀಡಿರುವ ಗುಜರಾತ್, ಬೆಥ್ ಮೂನಿಗೆ 2.50 ಕೋಟಿ ರೂಪಾಯಿ ನೀಡಿದೆ. ಸದ್ಯ ಜೈಂಟ್ಸ್​ಗೆ ಹರಾಜಿನಲ್ಲಿ 3 ಆಟಗಾರ್ತಿಯರ RTMಗೆ ಅವಕಾಶ ಇದೆ. ಜೊತೆಗೆ ಪರ್ಸನ್​ನಲ್ಲಿ 9 ಕೋಟಿ ರೂಪಾಯಿ ಬ್ಯಾಲೆನ್ಸ್​ ಉಳಿಸಿಕೊಂಡಿದೆ.
ಯು.ಪಿ ವಾರಿಯರ್ಸ್​ ಲೆಕ್ಕಾಚಾರಕ್ಕೆ ಶಾಕ್
ಉತ್ತರ ಪ್ರದೇಶ ವಾರಿಯರ್ಸ್​ ನಡೆ ತೀವ್ರ ಕುತೂಹಲ ಕೆರಳಿಸಿದೆ. ಅನ್​ಕ್ಯಾಪ್ಡ್​​ ಪ್ಲೇಯರ್ ಶ್ವೇತಾ ಶೆರಾವತ್​ರನ್ನ ಮಾತ್ರ ರೀಟೇನ್ ಮಾಡಿಕೊಂಡಿರುವ ಯು.ಪಿ, ಹರಾಜಿನಲ್ಲಿ ಆಟಗಾರ್ತಿಯರ ಹುಡುಕಾಟಕ್ಕೆ ಮುಂದಾಗಲಿದೆ. ಯು.ಪಿ ವಾರಿಯರ್ಸ್ ಬಳಿ 4 ರೈಟ್ ಟು ಮ್ಯಾಚ್ ಆಪ್ಶನ್ ಇದೆ. ಹಾಗಿ ವಾರಿಯರ್ಸ್ ಅಕೌಂಟ್​ನಲ್ಲಿ ಬರೋಬ್ಬರಿ 14.50 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ. ಫ್ರೆಶ್ ಆಕ್ಷಗೆ ಮುಂದಾಗಿರುವ ಯು.ಪಿ, ಬಲಿಷ್ಟ ತಂಡ ಕಟ್ಟಲು ಮುಂದಾಗಿದೆ.
ಒಟ್ನಲ್ಲಿ.. ಫ್ರಾಂಚೈಸಿ ಮಾಲೀಕರು ಆಟಗಾರ್ತಿಯರ ರಿಟೆನ್ಶನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಹೋಂ ವರ್ಕ್​ ಮಾಡಿದ್ದಾರೆ. ಇದೇ ತಿಂಗಳು ನಡೆಯಲಿರುವ ಮೆಗಾ ಆಕ್ಷನ್​​​ನಲ್ಲಿ, ಭರ್ಜರಿ ಬೇಟೆಗೆ ರೆಡಿಯಾಗಿದ್ದಾರೆ.
ಇದನ್ನೂ ಓದಿ:KSCA ಚುನಾವಣೆಗೆ ಬ್ರಿಜೇಶ್ ಪಟೇಲ್ ಬಣ ರೆಡಿ..! ಚುನಾವಣಾ ಅಖಾಡಕ್ಕೆ ಪತ್ರಕರ್ತ KN ಶಾಂತಕುಮಾರ್ ಎಂಟ್ರಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us