/newsfirstlive-kannada/media/media_files/2025/09/13/gill_style-2025-09-13-18-51-24.jpg)
ಇಂಡೋ-ಆಸಿಸ್​​ 4ನೇ ಟಿ20 ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಹೊಸ ಟೆನ್ಶನ್​ ಶುರುವಾಗಿದೆ. ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಪರ್ಫಾಮೆನ್ಸ್​​ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿದೆ. ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​ನ ಸೈಡ್​ಲೈನ್​ ಮಾಡಿ ಗಿಲ್​ನ​ ಬ್ಯಾಕ್​ ಮಾಡಿದ್ದ ಗಂಭೀರ್​​​ ಇದೀಗ ವಾರ್ನಿಂಗ್​ ಕೊಟ್ಟಿದ್ದಾರೆ. ಗಿಲ್​ ಈಗ ಡು ಆರ್​​ ಡೈ ಕಣದಲ್ಲಿದ್ದಾರೆ.
ಇಂಡೋ-ಆಸಿಸ್​​​ 4ನೇ ಟಿ20 ಫೈಟ್​ಗೆ ಕೌಂಟ್​​ಡೌನ್​​ ಆರಂಭವಾಗಿದೆ. ಸರಣಿಯಲ್ಲಿ ಸಮಬಲ ಸಾಧಿಸಿರೋ ಉಭಯ ತಂಡಗಳು ಮುನ್ನಡೆ ಸಾಧಿಸಲು ಇಂದು ಹೋರಾಟ ನಡೆಸಲಿವೆ. ಕ್ವಿನ್ಸ್​ಲ್ಯಾಂಡ್​ ಕರಾರ ರಣಕಣದಲ್ಲಿ ಮದಗಜಗಳು ಜಿದ್ದಿಗೆ ಬಿದ್ದು ಸೆಣೆಸಾಡಲು ಸಜ್ಜಾಗಿದ್ದು, ಕ್ರಿಕೆಟ್​ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/26/shubman-gill-2025-10-26-16-37-14.jpg)
ಮ್ಯಾನೇಜ್​ಮೆಂಟ್​ ಟೆನ್ಶನ್​ ಹೆಚ್ಚಿಸಿದ ಗಿಲ್ ಫಾರ್ಮ್​.!
ಹೋಬಾರ್ಟ್​​ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಆದ್ರೆ, ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ತಂಡದಲ್ಲಿರೋ ಮೊದಲ ಸಮಸ್ಯೆ ಓಪನರ್​ ಶುಭ್​ಮನ್​ ಗಿಲ್​. ಏಕದಿನ ತಂಡದ ನಾಯಕ, ಟಿ20 ತಂಡದ ಉಪನಾಯಕನ ಕಳಪೆ ಫಾರ್ಮ್​ ಟೀಮ್​ ಮ್ಯಾನೇಜ್​ಮೆಂಟ್​​ನ ಟೆನ್ಶನ್​ ಹೆಚ್ಚಿಸಿದೆ.
ಆಸಿಸ್​ ಪ್ರವಾಸದಲ್ಲಿ ಗಿಲ್​ ಫೇಲ್..ಫೇಲ್..ಫೇಲ್​.!
ನಾಯಕನ ಜವಾಬ್ದಾರಿಯನ್ನ ಹೊತ್ತು ಆಸ್ಟ್ರೇಲಿಯಾ ಫ್ಲೈಟ್​ ಹತ್ತಿದ ಶುಭ್​ಮನ್​ ಗಿಲ್ ಮೇಲೆ ಅಪಾರ ನಿರೀಕ್ಷೆಯಿತ್ತು. ಆದ್ರೆ, ಕಾಂಗರೂ ನಾಡಲ್ಲಿ ಆಗಿದ್ದು ಬರೀ ನಿರಾಸೆ. ನಾಯಕನಾಗಿ ಕಣಕ್ಕಿಳಿದ ಮೊದಲ ಸರಣಿಯಲ್ಲೇ ಗಿಲ್​ ಫ್ಲಾಪ್​ ಪ್ರದರ್ಶನ ನೀಡಿದ್ರು. ಪರ್ತ್​​​, ಅಡಿಲೇಡ್​ನಲ್ಲಿ ಅಟ್ಟರ್​ಫ್ಲಾಪ್​ ಆದ ಶುಭ್​ಮನ್​ ಗಿಲ್​ ಸಿಡ್ನಿಯಲ್ಲಿ ಒಳ್ಳೆ ಸ್ಟಾರ್ಟ್​ ಪಡೆದ್ರೂ ಬಿಗ್​ ಸ್ಕೋರ್​ ಆಗಿ ಕನ್ವರ್ಟ್​ ಮಾಡುವಲ್ಲಿ ಫೇಲ್​ ಆದ್ರು.
ಏಕದಿನ ಸರಣಿಯಲ್ಲಿ ಗಿಲ್​
ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿ 3 ಪಂದ್ಯಗಳಿಂದ ಗಿಲ್​ ಕೇವಲ 43 ರನ್​ಗಳಿಸಿದ್ರು. ಕೇವಲ14.33ರ ಸರಾಸರಿಯಲ್ಲಿ ರನ್​ಗಳಿಸಿದ ಶುಭ್​ಮನ್​ 5 ಬೌಂಡರಿ, 1 ಸಿಕ್ಸರ್​ ಬಾರಿಸಿದ್ರಷ್ಟೇ.
T20 ಸರಣಿಯಲ್ಲೂ ಮುಂದುವರೆದ ಗಿಲ್ ವೈಫಲ್ಯ.!
ಏಕದಿನ ಸರಣಿಯಲ್ಲಿ ಫೇಲ್​ ಆದ ಶುಭ್​ಮನ್​ ಗಿಲ್​ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಆರಂಭವನ್ನೇ ಪಡೆದುಕೊಂಡರು. ಕ್ಯಾನ್​ಬೆರಾದಲ್ಲಿ ಕಿಕ್​ ಸ್ಟಾರ್ಟ್​ ಮಾಡಿದ ಗಿಲ್​ 4 ಬೌಂಡರಿ, 1 ಸಿಕ್ಸರ್​ ಬಾರಿಸಿ 20 ಎಸೆತಗಳಲ್ಲೇ ಅಜೇಯ 30 ರನ್​ಗಳಿಸಿದ್ರು. ಒಳ್ಳೆ ರಿಧಮ್​ ಕಂಡುಕೊಂಡು ಬ್ಯಾಟಿಂಗ್​ ನಡೆಸ್ತಿದ್ದ ಗಿಲ್​ಗೆ ಮಳೆ ವಿಲನ್​ ಆಯ್ತು. ಪಂದ್ಯ ರದ್ದಾಗಿದ್ರಿಂದ ಬಿಗ್​ ಇನ್ನಿಂಗ್ಸ್​ ಕಟ್ಟೋ ಕನಸು ಮಳೆಯಲ್ಲಿ ಕೊಚ್ಚಿ ಹೋಯ್ತು. ಆ ನಂತರದ 2 ಪಂದ್ಯಗಳಲ್ಲಿ ಅದೇ ರಾಗ.. ಅದೇ ಹಾಡು.. ಮೆಲ್ಬರ್ನ್​ನಲ್ಲಿ 5 ರನ್​ಗಳಿಸುವಷ್ಟರಲ್ಲಿ ಸುಸ್ತಾದ ಗಿಲ್​, ಹೊಬಾರ್ಟ್​ನಲ್ಲಿ 15 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು.
T20 ಸರಣಿಯಲ್ಲಿ ಗಿಲ್​
ಟಿ20 ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಗಿಲ್​ ಕೇವಲ 28.50ರ ಸರಾಸರಿಯಲ್ಲಿ 57 ರನ್​ ಗಳಿಸಿದ್ದಾರೆ. 3 ಇನ್ನಿಂಗ್ಸ್​ಗಳಿಂದ ಜಸ್ಟ್​ 1 ಸಿಕ್ಸರ್​, 5 ಬೌಂಡರಿ ಬಾರಿಸಿದ್ದಾರೆ.
ಗಿಲ್​ ಜೊತೆಗೆ ಕೋಚ್​ ಗಂಭೀರ್​ ಗಂಭೀರ ಚರ್ಚೆ.!
ವೈಫಲ್ಯದ​ ಸುಳಿಗೆ ಸಿಲುಕಿ ನರಳಾಡ್ತಿರೋ ಶುಭ್​ಮನ್​ ಗಿಲ್​ ಫಾರ್ಮ್​ಗೆ ಮರಳೋಕೆ ಶತಪ್ರಯತ್ನ ನಡೆಸ್ತಿದ್ದಾರೆ. ನಿನ್ನೆಯ ಪ್ರಾಕ್ಟಿಸ್​ ಸೆಷನ್​ನಲ್ಲೂ ಗಿಲ್​ ಹೆಚ್ಚು ಕಾಲ ಬ್ಯಾಟಿಂಗ್​ ಮೇಲೆ ಪೋಕಸ್​ ಮಾಡಿದ್ರು. ಹೆಡ್​ ಕೋಚ್​ ಗೌತಮ್​ ಗಂಭೀರ್​ ಜೊತೆಗೆ ಅಭ್ಯಾಸದ ಬಳಿಕ ದೀರ್ಘ ಕಾಲ ಚರ್ಚೆ ನಡೆಸಿದ್ರು. ಗಿಲ್ ಅಭ್ಯಾಸವನ್ನ ತೀರಾ ಹತ್ತಿರದಿಂದ ಗಮನಿಸಿದ ಹೆಡ್​ ಕೋಚ್​ ಗಂಭೀರ್​ ಅಗತ್ಯ ಟಿಪ್ಸ್​ಗಳನ್ನ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/10/25/gill_aus-2025-10-25-08-42-00.jpg)
ಮುಂದಿನ 2 ಪಂದ್ಯಗಳಲ್ಲಿ ವಿಶ್ವಕಪ್​ ಭವಿಷ್ಯ ನಿರ್ಧಾರ.!
ಸಾಕಷ್ಟು ವಿರೋಧದ ನಡುವೆ ಸರ್​​ಪ್ರೈಸ್​ ರೀತಿಯಲ್ಲಿ ಗಿಲ್​ಗೆ ಟಿ20 ತಂಡದ ಉಪನಾಯಕನ ಪಟ್ಟ ಕಟ್ಟಲಾಗಿತ್ತು. ಸಾಲಿಡ್​ ಫಾರ್ಮ್​ನಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಹೊರಗಿಟ್ಟು ಶುಭ್​ಮನ್​ ಗಿಲ್​ಗೆ ಸ್ಥಾನ ಕಲ್ಪಿಸಲಾಗಿತ್ತು. ಗಿಲ್​ ಎಂಟ್ರಿಯಿಂದ ಆರಂಭಿಕ ಸಂಜು ಸ್ಯಾಮ್ಸನ್​ ಸ್ಥಾನ ಕೂಡ ಪಲ್ಲಟವಾಗಿದೆ. ಆದ್ರೆ, ಸ್ಥಾನ ಗಿಟ್ಟಿಸಿಕೊಂಡ ಗಿಲ್​ ಸಾಮರ್ಥ್ಯ ನಿರೂಪಿಸುವಲ್ಲಿ ಫೇಲ್ ಆಗಿದ್ದಾರೆ. ತಂಡದ ಹೊರಗಿರೋ ಜೈಸ್ವಾಲ್, ತಂಡದಲ್ಲೇ ಇರೋ ಸಂಜು ಓಪನರ್ಸ್​ ಸ್ಥಾನ ಕಬ್ಜ ಮಾಡೋಕೆ ಕಾಯ್ತಿದ್ದಾರೆ. ಹೀಗಾಗಿ ಆಸಿಸ್​ ಪ್ರವಾಸದ ಉಳಿದ 2 ಪಂದ್ಯಗಳು ಗಿಲ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿವೆ.
ಇಂದು ನಡೆಯೋ 4 ಹಾಗೂ ಬ್ರಿಸ್ಬೆನ್​ನಲ್ಲಿ ನಡೆಯೋ 5ನೇ ಟಿ20 ಪಂದ್ಯದಲ್ಲಿ ಗಿಲ್​ ಟಿ20 ಭವಿಷ್ಯ ನಿರ್ಧಾರವಾಗೋದಂತೂ ಪಕ್ಕಾ. ಪರ್ಫಾಮ್​ ಮಾಡಿ ಗಿಲ್​ ಪ್ಲೇಸ್​ ಉಳಿಸಿಕೊಳ್ತಾರಾ.? ಫ್ಲಾಪ್​ ಆಗಿ ಟಿ20 ತಂಡದಿಂದ ಹೊರಬೀಳ್ತಾರಾ.? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us