Advertisment

ಗಿಲ್​ ಕ್ಯಾಪ್ಟನ್, ಪಂತ್ ಕಮ್​ಬ್ಯಾಕ್, ಕರುಣ್, ಶಮಿಗೆ ಬಿಗ್ ಶಾಕ್​.. ಟೆಸ್ಟ್​ಗೆ 15 ಆಟಗಾರರು ಇವರೇ!

ಇಂಗ್ಲೆಂಡ್​ ಪ್ರವಾಸದಲ್ಲಿ ರನ್​ಗಳಿಸಿ ಪರದಾಡಿದ್ದ ಕರುಣ್​ ನಾಯರ್​​ನ ವಿಂಡೀಸ್​ ಸರಣಿಯಿಂದ ಡ್ರಾಪ್ ಮಾಡಲಾಗಿತ್ತು. ಬಳಿಕ ರಣಜಿ ಟ್ರೋಫಿಯಲ್ಲಿ ಒಂದು ಶತಕ, ಒಂದು ದ್ವಿಶತಕ ಸಿಡಿಸಿದ್ದ ಕರುಣ್​ ಸ್ಥಾನದ ನಿರೀಕ್ಷೆಯಲ್ಲಿದ್ರು.

author-image
Bhimappa
KL_RAHUL_GILL
Advertisment

ಇಂಡೋ-ಆಸಿಸ್​ ಟಿ20 ಸರಣಿಯ ನಡುವೆ ಮುಂಬರುವ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ವೆಸ್ಟ್​ ಇಂಡೀಸ್​​ ವಿರುದ್ಧ ಟೆಸ್ಟ್​ ಸರಣಿಯಲ್ಲಾಡಿದ್ದ ತಂಡವೇ ಮುಂದುವರೆದಿದ್ದು, ಕೇವಲ 2 ಬದಲಾವಣೆಗಳನ್ನ ಮಾಡಲಾಗಿದೆ. ಆದ್ರೆ, ಇದೇ ವೇಳೆ ಕೆಲವು ಕ್ರಿಕೆಟರ್ಸ್​ ಕರಿಯರ್​​ಗೆ ಫುಲ್​ ಸ್ಟಾಫ್ ಇಡೋ ಸೂಚನೆಯನ್ನ ನೀಡಿದೆ. 

Advertisment

ಆಸ್ಟ್ರೇಲಿಯಾ ಪ್ರವಾಸದ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ ಬ್ಯುಸಿಯಾಗಿದೆ. ಇತ್ತ ಬಿಸಿಸಿಐ ವಲಯದಲ್ಲಿ ಮುಂಬರೋ ಸೌತ್​ ಆಫ್ರಿಕಾ ಎದುರಿನ ಟೆಸ್ಟ್​ ಸರಣಿಗೆ ಸಿದ್ಧತೆ ಆರಂಭವಾಗಿದೆ. ನವೆಂಬರ್​ 14ರಿಂದ ಆರಂಭವಾಗೋ ಟೆಸ್ಟ್​ ಸರಣಿಗೆ ಸೀನಿಯರ್​ ಸೆಲೆಕ್ಷನ್​​ ಕಮಿಟಿ ಟೀಮ್​ ಅನೌನ್ಸ್​ಮೆಂಟ್​ ಮಾಡಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಪ್ರಕಟವಾಗಿದ್ದ ತಂಡವೇ ಮುಂದುವರೆದಿದ್ದು, ಕೇವಲ 2 ಬದಲಾವಣೆಗಳನ್ನ ಮಾಡಲಾಗಿದೆ. 

GILL_AKASH

3 ತಿಂಗಳ ಬಳಿಕ ವೈಸ್​ ಕ್ಯಾಪ್ಟನ್​ ಪಂತ್​ ಕಮ್​ಬ್ಯಾಕ್.!

2 ಪಂದ್ಯಗಳ ಟೆಸ್ಟ್​ ಸರಣಿಗೆ ಒಟ್ಟು 15 ಸದಸ್ಯರ ತಂಡ ಪ್ರಕಟಿಸಲಾಗಿದೆ. ಶುಭ್​ಮನ್ ಗಿಲ್ ನಾಯಕರಾಗಿ ಮುಂದುವರೆದಿದ್ರೆ, ಇಂಗ್ಲೆಂಡ್ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ಫೀಲ್ಡ್​ನಿಂದ ದೂರ ಉಳಿದಿದ್ದ ರಿಷಭ್​ ಪಂತ್​ ಕಮ್​ಬ್ಯಾಕ್​ ಮಾಡಿದ್ದಾರೆ. ಕಮ್​ಬ್ಯಾಕ್ ಮಾಡಿರುವ ಪಂತ್​​ಗೆ​ ಉಪನಾಯಕತ್ವ ನೀಡಲಾಗಿದೆ. ವಿಂಡೀಸ್​ ಸರಣಿಯಲ್ಲಿ ಪಂತ್ ಅಲಭ್ಯತೆಯಲ್ಲಿ ​ಜವಾಬ್ಧಾರಿಯನ್ನ ರವೀಂದ್ರ ಜಡೇಜಾಗೆ ನೀಡಲಾಗಿತ್ತು. ಪಂತ್​ ಎಂಟ್ರಿಯಿಂದ ಎನ್​.ಜಗದೀಶನ್​ ತಂಡದಿಂದ ಹೊರಬಿದ್ದಿದ್ದಾರೆ. 

ಆರಂಭಿಕರಾಗಿ ಜೈಸ್ವಾಲ್, ರಾಹುಲ್ ಮುಂದುವರಿಕೆ

ಓಪನರ್​ಗಳಾಗಿ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಮುಂದುವರೆದಿದ್ದಾರೆ. ಇನ್ನು, ಇಂಗ್ಲೆಂಡ್​ ಪ್ರವಾಸದಲ್ಲಿ ರನ್​ಗಳಿಸಿ ಪರದಾಡಿದ್ದ ಕರುಣ್​ ನಾಯರ್​​ನ ವಿಂಡೀಸ್​ ಸರಣಿಯಿಂದ ಡ್ರಾಪ್ ಮಾಡಲಾಗಿತ್ತು. ಬಳಿಕ ರಣಜಿ ಟ್ರೋಫಿಯಲ್ಲಿ ಒಂದು ಶತಕ, ಒಂದು ದ್ವಿಶತಕ ಸಿಡಿಸಿದ್ದ ಕರುಣ್​ ಸ್ಥಾನದ ನಿರೀಕ್ಷೆಯಲ್ಲಿದ್ರು. ಆದ್ರೆ, ಕರುಣ್​ ನಾಯರ್​ಗೆ ನಿರಾಸೆಯಾಗಿದೆ. ಮತ್ತೊಬ್ಬ ಕನ್ನಡಿಗ ದೇವದತ್​​ ಪಡಿಕ್ಕಲ್​ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಂಡೀಸ್​ ವಿರುದ್ಧ ಪ್ರಾಮಿಸಿಂಗ್ ಪರ್ಫಾಮೆನ್ಸ್​ ನೀಡಿದ ಸಾಯಿ ಸುದರ್ಶನ್​ ಮೇಲೆ ಸೆಲೆಕ್ಟರ್ಸ್​ ಭರವಸೆಯಿಟ್ಟು ಮತ್ತೆ ಸ್ಥಾನ ನೀಡಿದ್ದಾರೆ. 

Advertisment

ಜುರೇಲ್​ ಬ್ಯಾಕ್​ಅಪ್​ ಕೀಪರ್​.. ನಿತೀಶ್​​ ರೆಡ್ಡಿಗೂ ಸ್ಥಾನ.!

ಪಂತ್​ ಅಲಭ್ಯತೆಯಲ್ಲಿ ವಿಂಡೀಸ್​ ಎದುರು ಕೀಪರ್​ ಜವಾಬ್ದಾರಿ ನಿಭಾಯಿಸಿದ್ದ ಧೃವ್​ ಜುರೇಲ್​ ಸ್ಥಾನ ಉಳಿಸಿಕೊಂಡಿದ್ದಾರೆ. ಬ್ಯಾಕ್​ ವಿಕೆಟ್​ ಕೀಪರ್ ಆಗಿ ಜುರೇಲ್​ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಫಿಟ್​ನೆಸ್​ ಸಮಸ್ಯೆಯನ್ನ ಎದುರಿಸ್ತಾ ಇದ್ರೂ, ನಿತೀಶ್​ ರೆಡ್ಡಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ನಿರೀಕ್ಷೆಯಂತೆ  ನಾಲ್ವರು ಸ್ಪಿನ್ನರ್​ಗಳಿಗೆ ಸ್ಥಾನ ಸಿಕ್ಕಿದೆ. ಸ್ಪಿನ್​​ ಆಲ್​ರೌಂಡರ್​​ಗಳಾಗಿ ರವೀಂದ್ರ ಜಡೇಜಾ, ವಾಷ್ಟಿಂಗ್ಟನ್ ಸುಂದರ್, ಅಕ್ಷರ್​​ ಪಟೇಲ್​ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್​ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ಟೀಮ್ ಇಂಡಿಯಾಗೆ ಬಿಗ್ ಶಾಕ್​.. ಎದುರಾಳಿ ಟೀಮ್​ಗೆ ಹೊಡಿಬಡಿ ಬ್ಯಾಟರ್​​ಗೆ ಚಾನ್ಸ್​..?

Shami and Gambhir

ಮೊಹಮ್ಮದ್​ ಶಮಿ ಟೆಸ್ಟ್ ಕರಿಯರ್​ ಖತಂ.?

ಫಾಸ್ಟ್​ ಬೌಲಿಂಗ್ ಡಿಪಾರ್ಟ್​ಮೆಂಟ್​​ನಲ್ಲಿ ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮುಂದುವರಿದಿದ್ದಾರೆ. ಆದ್ರೆ, ವಿಂಡೀಸ್​ ಸರಣಿಯಲ್ಲಿ ಆಡಿದ್ದ ಪ್ರಸಿದ್ಧ್​ ಕೃಷ್ಣಗೆ ಕೊಕ್​ ಕೊಡಲಾಗಿದೆ. ಪ್ರಸಿದ್ಧ್​ ಕೃಷ್ಣ ಬದಲಾಗಿ ಆಕಾಶ್ ದೀಪ್​​​ಗೆ ಮಣೆ ಹಾಕಲಾಗಿದೆ. ಕಮ್​ಬ್ಯಾಕ್​ನ ನಿರೀಕ್ಷೆಯಲ್ಲಿದ್ದ ವೇಗಿ ಮೊಹಮ್ಮದ್​ ಶಮಿಗೆ ಮತ್ತೆ ನಿರಾಸೆ ಆಗಿದೆ. ಟಚ್​ನಲ್ಲಿಲ್ಲ ಎಂಬ ಕಾರಣ ನೀಡಿ ವಿಂಡೀಸ್​ ಸರಣಿಯಿಂದ ಶಮಿಯನ್ನ ಸೆಲೆಕ್ಷನ್​ ಕಮಿಟಿ ಡ್ರಾಪ್ ಮಾಡಿತ್ತು. ಇದೀಗ ರಣಜಿ ಟ್ರೋಫಿಯಲ್ಲಿ ಆಡಿ ಪರ್ಫಾಮ್​ ಮಾಡಿದ್ರೂ ಕೂಡ ಶಮಿಯನ್ನ ಆಯ್ಕೆಗೆ ಪರಿಗಣಿಸಿಲ್ಲ. ಇದನ್ನ ಶಮಿಯನ್ನ ಬಿಟ್ಟು ನಾವು ಮುಂದೆ ಸಾಗ್ತಿದ್ದೀವಿ ಎಂಬ ಆಯ್ಕೆ ಸಮಿತಿಯ ಸಂದೇಶ ಎಂದೇ ಕ್ರಿಕೆಟ್​ ವಲಯದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. 

Advertisment

ಟೆಸ್ಟ್​ ಫಾರ್ಮೆಟ್​​ನ ವಿಶ್ವ ಚಾಂಪಿಯನ್​ ಸೌತ್​ ಆಫ್ರಿಕಾ ಎದುರಿನ ಸರಣಿಗೆ ಅಳೆದೂ-ತೂಗಿ ಬಲಿಷ್ಠ ತಂಡವನ್ನೇ ಸೀನಿಯರ್​ ಸೆಲೆಕ್ಷನ್​ ಕಮಿಟಿ ಆಯ್ಕೆ ಮಾಡಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗಗಳಲ್ಲಿ ತಂಡ ನೋಡೋದಕ್ಕೆ ಬ್ಯಾಲೆನ್ಸ್​ಡ್​ ಆಗಿದೆ. 15 ಆಟಗಾರರ ಪೈಕಿ ಆಡೋ 11 ಮಂದಿ ಯಾರು ಅನ್ನೋದು ಸದ್ಯದ ಕುತೂಹಲವಾಗಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Team India Ind vs SA
Advertisment
Advertisment
Advertisment