/newsfirstlive-kannada/media/media_files/2025/09/11/team-india-12-2025-09-11-10-15-02.jpg)
ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಈಗಾಗಲೇ ಆಸಿಸ್​ಗೆ 2 ಜಯ ಗಳಿಸಿದ್ರೆ, ಭಾರತ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಹೀಗಾಗಿ ಇವತ್ತಿನ 4ನೇ ಮ್ಯಾಚ್​, ಸೂರ್ಯಕುಮಾರ್​ ಪಡೆಗೆ ಅತ್ಯಂತ ಮುಖ್ಯವಾಗಿದೆ. ಈ ಮ್ಯಾಚ್​ ಗೆದ್ದರೇ ಸರಣಿ ಜೀವಂತವಾಗಿರಲಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ಟೀಮ್​ಗೆ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಟಿ20 ಸರಣಿ ಈಗಾಗಲೇ ನಿರ್ಣಾಯಕ ಹಂತಕ್ಕೆ ಬಂದಿದ್ದು ಇಂದು ಭಾರತ ತಂಡ ಗೆದ್ದರೇ ಸರಣಿ ಜೀವಂತ ಆಗಿರಲಿದೆ. ಒಂದು ವೇಳೆ ಆಸ್ಟ್ರೇಲಿಯಾ ಗೆಲುವು ಪಡೆದರೆ ಸೂರ್ಯಕುಮಾರ್ ಸೇನೆ ಸರಣಿ ಸೋತಂತೆ ಆಗಲಿದೆ. ಇವತ್ತಿನ ಪಂದ್ಯ ಭಾರತಕ್ಕೆ ಅತ್ಯಂತ ಮುಖ್ಯವಾಗಿದ್ದು ಗೆಲ್ಲಲೇಬೇಕು. ಆದರೆ ಅತ್ತ ಆಸಿಸ್​ಗೆ ಮ್ಯಾಕ್ಸ್​ವೆಲ್ ಆಗಮಿಸುತ್ತಿರುವುದು ತುಸು ಡೇಂಜರ್ ಎಂದು ಹೇಳಬಹುದು.
/filters:format(webp)/newsfirstlive-kannada/media/media_files/2025/11/06/glenn_maxwell_return_to_australia-2025-11-06-09-45-44.jpg)
ಆಶಸ್​ ಟ್ರೋಫಿಯತ್ತ ಗಮನ ಹರಿಸಿರುವ ಆಸ್ಟ್ರೇಲಿಯಾ ತಂಡ ಈಗಾಗಲೇ ಹಲವು ಆಟಗಾರರು ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಗ್ಲೆನ್ ಮ್ಯಾಕ್ಸ್​ವೆಲ್​ಗೆ ಅವಕಾಶ ಕೊಡಲಾಗುತ್ತಿದೆ. 36 ವರ್ಷವಾದರೂ ಮ್ಯಾಕ್ಸ್​ವೆಲ್, ಆಸಿಸ್​ ನೆಲದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಬಲ್ಲರು. ಬೌಲಿಂಗ್​ನಲ್ಲೂ ಭಾರತಕ್ಕೆ ಪರಿಣಾಮಕಾರಿಯಾಗಿ ತೋರಬಲ್ಲರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ನ್ಯೂಜಿಲೆಂಡ್ ಜೊತೆಗಿನ ಟಿ20 ಸರಣಿಗಾಗಿ ನೆಟ್​ನಲ್ಲಿ ಅಭ್ಯಾಸ ಮಾಡುವಾಗ ಮ್ಯಾಕ್ಸ್​ವೆಲ್ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಮಿಚೆಲ್​ ಓವನ್ ಬಾರಿಸಿದ್ದ ಬಾಲ್ ಮ್ಯಾಕ್ಸಿ ಅಂಗೈಗೆ ಬಿದ್ದು ಆಸ್ಪತ್ರೆ ಪಾಲಾಗಿದ್ದರು. ಹೀಗಾಗಿ ಮ್ಯಾಕ್ಸ್​ವೆಲ್ ಇಂಜುರಿಗೆ ಒಳಗಾದ ಮೇಲೆ ಕಳೆದ ಸೆಪ್ಟೆಂಬರ್​ನಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಆದರೆ ಈಗ ಮ್ಯಾಕ್ಸ್​ವೆಲ್ ಚೇತರಿಸಿಕೊಂಡಿದ್ದು ಅತ್ತ ಉಳಿದ ಪ್ಲೇಯರ್ಸ್​ ಆಶಸ್​ಗೆ ಕಠಿಣ ಅಭ್ಯಾಸ ನಡೆಸುತ್ತಿದ್ದರಿಂದ ಇಂದಿನ ಭಾರತದ ಜೊತೆಗಿನ 4ನೇ ಟಿ20 ಪಂದ್ಯದಲ್ಲಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಗಾಡವಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us