Advertisment

RCB ಪುರುಷ, ಮಹಿಳಾ ಟೀಮ್​ ಸೇಲ್​.. ಈ ಎರಡು ತಂಡಕ್ಕೂ 2026ರ ಮಾರ್ಚ್​ ವೇಳೆಗೆ ಹೊಸ ಓನರ್!

ಮುಂದಿನ ವರ್ಷ ಅಂದರೆ 2026ರ ಮಾರ್ಚ್​​ 31ರ ಒಳಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಅಲ್ಲದೇ ಆರ್​ಸಿಬಿ ಎರಡು ಟೀಮ್​ಗಳಿಗೆ ಹೊಸ ಮಾಲೀಕರು ಬರುಬಹುದು. ಮಾರಾಟದ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಜೊತೆ ಡಿಯಾಜಿಯೊ ಕಂಪನಿ ಮಾತುಕತೆ ನಡೆಸಿದೆ.

author-image
Bhimappa
rcb cares
Advertisment

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯವೇ. ಲಂಡನ್ ಮೂಲದ ಆಲ್ಕೋಹಾಲ್ ಕಂಪನಿ ಡಿಯಾಜಿಯೊ ಆರ್​ಸಿಬಿಯ ಮಹಿಳಾ ಹಾಗೂ ಪುರುಷ ಎರಡೂ ಟೀಮ್​ಗಳನ್ನು ಮಾರಾಟ ಮಾಡಲು ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. 

Advertisment

ಡಿಯಾಜಿಯೊ ಕಂಪನಿ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಅಂದರೆ 2026ರ ಮಾರ್ಚ್​​ 31ರ ಒಳಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಅಲ್ಲದೇ ಆರ್​ಸಿಬಿ ಎರಡು ಟೀಮ್​ಗಳಿಗೆ ಹೊಸ ಮಾಲೀಕರು ಬರುಬಹುದು. ಮಾರಾಟದ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಜೊತೆ ಡಿಯಾಜಿಯೊ ಕಂಪನಿ ಮಾತುಕತೆ ನಡೆಸಿದರಲ್ಲಿ ಈ ಸಂಬಂಧ ಉಲ್ಲೇಖ ಮಾಡಿದೆ ಎನ್ನಲಾಗಿದೆ. 

ಇದನ್ನೂ ಓದಿ: ನವೆಂಬರ್ ಕ್ರಾಂತಿ ಏನಾಗುತ್ತೋ.. 14ಕ್ಕೆ CM ದೆಹಲಿಗೆ, ಅಂದೇ ರಾಹುಲ್ ಗಾಂಧಿ ವಿದೇಶಕ್ಕೆ.!

RCB_TEAM (1)

ರಾಯಲ್ ಚಾಲೆಂಜರ್ಸ್​ ಸ್ಪೋರ್ಟ್ಸ್​ ಪವೇಟ್​ ಲಿಮಿಟೆಡ್​ನಲ್ಲಿ ಇದು ಹೂಡಿಕೆಯ ಕಾರ್ಯತಂತ್ರ ವಿಮರ್ಶೆ ಆಗಿದೆ. ಅಲ್ಲದೇ ಯುನಿಟೆಡ್​ ಸ್ಪಿರಿಟ್​ ಲಿಮಿಟೆಡ್​ ಇದು ಡಿಯಾಜಿಯೊ ಕಂಪನಿಯ ಅಂಗಸಂಸ್ಥೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ, ಮಹಿಳೆಯರ ತಂಡದ ಮಾಲೀಕತ್ವವನ್ನು ರಾಯಲ್ ಚಾಲೆಂಜರ್ಸ್​ ಸ್ಪೋರ್ಟ್ಸ್​ ಪವೇಟ್​ ಲಿಮಿಟೆಡ್​ ಹೊಂದಿದೆ. ಹೀಗಾಗಿ ಮುಂದಿನ ವರ್ಷದ ಮಾರ್ಚ್​ 31ರ ಒಳಗೆ ಎರಡು ತಂಡಗಳ ಮಾರಾಟ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

Advertisment

ಮೊಟ್ಟ ಮೊದಲ ಬಾರಿಗೆ ಟ್ರೋಫಿ ಗೆದ್ದಿದ ಆರ್​ಸಿಬಿ ಟೀಮ್ ವಿಜಯೋತ್ಸವ ಸಂಭ್ರಮ, ಜೂನ್ 4 ರಂದು ದುರಂತವೊಂದು ನಡೆಯಿತು. ಚಿನ್ನಸ್ವಾಮಿಯಲ್ಲಿನ ವಿಜಯೋತ್ಸವ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಸೇರಿ 11 ಜನರು ಕಾಲ್ತುಳಿತದಲ್ಲಿ ಬಲಿಯಾದರು. ಈ ಘಟನೆಯಿಂದಲೇ ಡಿಯಾಜಿಯೊ ಆರ್​ಸಿಬಿನ ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

RCB CARES RCB
Advertisment
Advertisment
Advertisment