ನವೆಂಬರ್ ಕ್ರಾಂತಿ ಏನಾಗುತ್ತೋ.. 14ಕ್ಕೆ CM ದೆಹಲಿಗೆ, ಅಂದೇ ರಾಹುಲ್ ಗಾಂಧಿ ವಿದೇಶಕ್ಕೆ.!

ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇದೇ ನೆಪದಲ್ಲೇ ಪಕ್ಷದ ಹೈಕಮಾಂಡ್​​ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಸುರ್ಜೇವಾಲ ಭೇಟಿಗೆ ಟೈಂ ಕೇಳಿದ್ದು, ನಾಯಕತ್ವ ಬದಲಾವಣೆಗೆ ಒತ್ತಡ ಹೇರಲಿದ್ದಾರೆ.

author-image
Bhimappa
CM_SIDDARAMAIAH_RAHUL_GANDHI_DELHI
Advertisment

ಬಿಹಾರ ಎಲೆಕ್ಷನ್​​ ಬಳಿಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಫಲಿತಾಂಶಕ್ಕೂ ಮೊದಲೇ ರಾಹುಲ್​​​ ಯಾತ್ರೆ ಕುತೂಹಲಕ್ಕೆ ಕಾರಣ ಆಗಿದೆ. ನವೆಂಬರ್ 14ರಂದು ಸಂಜೆ ವಿದೇಶಕ್ಕೆ ತೆರಳುವ ಲೋಕಸಭೆ ವಿಪಕ್ಷ ನಾಯಕ ರಾಹುಲ್​​, 22ರ ವರೆಗೆ ಫಿನ್ ಲ್ಯಾಂಡ್​ನಲ್ಲಿರಲಿದ್ದಾರೆ. ಇತ್ತ, ರಾಜ್ಯದ ಕುರ್ಚಿ ಕ್ರಾಂತಿಗೂ ಈ ಪ್ರವಾಸ ಬ್ರೇಕ್​​​ ಹಾಕಿಸಲಿದೆ.

ಅಕ್ಟೋಬರ್​​ ಇಲ್ಲ, ನವೆಂಬರ್​ ಇಲ್ಲ, ಕಾಂಗ್ರೆಸ್​ನಲ್ಲಿ ಕ್ರಾಂತಿ ಕಣ್ಮರೆ ಆಗ್ತಿದ್ದು, ಸಿದ್ದರಾಮಯ್ಯ ಮೊಗದಲ್ಲಿ ಕಾಂತಿ ಹೊಳೆಯುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಮನದ ಕಡಲಲ್ಲಿ ಮಾತ್ರ ಅಶಾಂತಿ. ಸಿಎಂ ಕುರ್ಚಿ ಪಾಲಿಟಿಕ್ಸ್​ನಲ್ಲಿ ಈಗ ಸಂಕ್ರಾಂತಿ ಕಾಲ. ಭ್ರಾಂತಿಗಳು ಮರೆಯಾಗಿದ್ದು, ಸಿದ್ದು ನೆಮ್ಮದಿಯ ನಿಟ್ಟುಸಿರಿಗೆ ಜಾರಿದ್ದಾರೆ. ಈ ಕುರ್ಚಿ ಕದನದ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್, ನಿನ್ನೆ ಸಂಜೆ ದೆಹಲಿಗೆ ತೆರಳಿದ್ದಾರೆ.

dk shivakumar (6)
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ

ದೆಹಲಿಗೆ ಹಾರಿದ ಡಿಸಿಎಂ, ಕುರ್ಚಿ ಆಟಕ್ಕೆ ರೆಕ್ಕೆಪುಕ್ಕ!

ಮೇಕೆದಾಟು ತೀರ್ಪು ನೆಪದಲ್ಲಿ ಡಿ.ಕೆ ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇದೇ ನೆಪದಲ್ಲೇ ಪಕ್ಷದ ಹೈಕಮಾಂಡ್​​ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಸುರ್ಜೇವಾಲ ಭೇಟಿಗೆ ಟೈಂ ಕೇಳಿದ್ದು, ನಾಯಕತ್ವ ಬದಲಾವಣೆಗೆ ಒತ್ತಡ ಹೇರಲಿದ್ದಾರೆ. ಇನ್ನು, ಬಿಹಾರ ಎಲೆಕ್ಷನ್​ ಪ್ರಚಾರಕ್ಕೆ ತೆರಳುವ ಡಿ.ಕೆ ಶಿವಕುಮಾರ್, ನಾಳೆ ಮತ್ತು ನಾಡಿದ್ದು ಪ್ರಚಾರ ಕಣದಲ್ಲಿ ಅಬ್ಬರಿಸಲಿದ್ದಾರೆ. 

ಇನ್ನು, ನವೆಂಬರ್​ 14 ರಂದು ಸಿಎಂ ಸಿದ್ದರಾಮಯ್ಯ ಸಹ ದೆಹಲಿಗೆ ಪ್ರಯಾಣಿಸ್ತಿದ್ದಾರೆ. ನ.15 ಮತ್ತು 16ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್​​ ಭೇಟಿ ಆಗುವ ನಿರೀಕ್ಷೆ ಇದೆ. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ಒತ್ತಡ ಹೇರುವ ಸಾಧ್ಯತೆ ಇದೆ. ಆದ್ರೆ, ಸಿಎಂ, ಡಿಸಿಎಂ ಲೆಕ್ಕಾಚಾರಗಳನ್ನೇ ರಾಹುಲ್​ ಗಾಂಧಿ ಪಲ್ಟಿ ಮಾಡಿದ್ದಾರೆ.

ಸಂಪುಟ ಪುನಾರಚನೆ ಮತ್ತು ನಾಯಕತ್ವದ ಚರ್ಚೆಗೆ ಬ್ರೇಕ್​

ಡಿಸಿಎಂ ಕ್ಯಾಂಪ್​​​, ನಾಯಕತ್ವ ಬದಲಾವಣೆ ಚರ್ಚೆ ಮುಂದಿಡ್ತಿದೆ. ಆದ್ರೆ, ಸಿಎಂ ಕ್ಯಾಂಪ್​​​ಸಂಪುಟ ಪುನಾರಚನೆ ದಾಳ ಉರುಳಿಸ್ತಿದೆ. ಕರ್ನಾಟಕದ ಕದನ ಗಮನಿಸ್ತಿರುವ ರಾಹುಲ್​​​ ಗಾಂಧಿ, ಬಿಹಾರ ರಿಸಲ್ಟ್​​ ಬರುವ ದಿನವೇ ವಿದೇಶಕ್ಕೆ ಹಾರ್ತಿದ್ದಾರೆ.

ಕ್ರಾಂತಿ ಕಿಚ್ಚಿಗೆ ರಾಹುಲ್​ ಬ್ರೇಕ್​​

  • ಸದ್ಯ ಕರ್ನಾಟಕ ಪ್ರವಾಸವನ್ನ ಮುಂದೂಡಿರುವ ರಾಹುಲ್​​ 
  • ನವೆಂಬರ್​ 14 ರಿಂದ 22ರವರೆಗೆ ರಾಹುಲ್​ ವಿದೇಶ ಯಾತ್ರೆ 
  • ಯುರೋಪ್​ನ ಫಿನ್​ಲ್ಯಾಂಡ್​ಗೆ ರಾಹುಲ್​ ಗಾಂಧಿ ಪ್ರವಾಸ
  • ರಾಜ್ಯದ ನ.20ರ ಕಾರ್ಯಕ್ರಮ ಮುಂದೂಡುವಂತೆ ಸೂಚನೆ
  • ರಾಹುಲ್​ ಆಗಮನ ತನಕ ಕುರ್ಚಿ ಕ್ರಾಂತಿಗೆ ಅಲ್ಪ ವಿರಾಮ
  • ನವೆಂಬರ್​​ 23ರ ಬಳಿಕ ಕುರ್ಚಿ ಕ್ರಾಂತಿಗೆ ಸ್ಪಷ್ಟತೆ ಸಿಗಲಿದೆ 

ಇದನ್ನೂ ಓದಿ: ಕಬ್ಬು ಬೆಳೆಗಾರರಿಂದ ಸರ್ಕಾರಕ್ಕೆ ಡೆಡ್​ಲೈನ್.. ಸಚಿವ HK ಪಾಟೀಲ್​ ಜೊತೆಗಿನ ಸಂಧಾನ ಸಭೆ ಏನಾಯಿತು?

ರಾಹುಲ್ ಗಾಂಧಿ- ಸಿದ್ದರಾಮಯ್ಯ

ಈ ನಡುವೆ ನವೆಂಬರ್​​​ 14ರಂದು ದೆಹಲಿಗೆ ತೆರಳುವ ಸಿಎಂ ಮತ್ತು ಡಿಸಿಎಂ ಭೇಟಿಗೆ ರಾಹುಲ್​​​ ಟೈಂ ನೀಡಿಲ್ಲ ಅನ್ನೋದು ಗೊತ್ತಾಗಿದೆ. ಆದ್ರೆ, ವಿಪಕ್ಷ ಬಿಜೆಪಿ ಮಾತ್ರ ಚಳಿಗಾಲ ಅಧಿವೇಶನಕ್ಕೆ ಹೊಸ ಸಿಎಂ ಅಂತ ಕಾಂಗ್ರೆಸ್​ನ ಕಾಲೆಳೆಯೋದ್ರಲ್ಲಿ ನಿರತರಾಗಿದ್ದಾರೆ.

ರಾಹುಲ್ ವಿದೇಶಿ ಪ್ರಯಾಣ ಹೊಸದೇನಲ್ಲ, ಆದ್ರೆ, ಪ್ರಮುಖ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ವಿದೇಶಕ್ಕೆ ತೆರಳ್ತಿರೋದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಎಲೆಕ್ಷನ್​​ ರಿಸಲ್ಟ್​​ ದಿನವೇ ಫಿನ್​​ಲ್ಯಾಂಡ್​​​ಗೆ ಹೋಗ್ತಿರೋದು ಜವಾಬ್ದಾರಿಗೆ ಬೆನ್ನು ತೋರಿಸ್ತಿದ್ದಾರಾ ಅನ್ನೋ ಚರ್ಚೆ ಹುಟ್ಟುಹಾಕಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar
Advertisment