/newsfirstlive-kannada/media/media_files/2025/11/06/farmers_protest-2025-11-06-07-39-42.jpg)
ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಹೆಚ್.​ಕೆ ಪಾಟೀಲ್ ಸಂಧಾನ ಸಭೆ ವಿಫಲವಾಗಿದೆ. ಈ ಬೆನ್ನಲ್ಲೇ ಕಾರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ ಸ್ಫೋಟ ಆಯ್ತು. ಇತ್ತ ಕ್ಯಾಬಿನೆಟ್​​​ನಲ್ಲಿ ಇವತ್ತು ಶುಗರ್​​ ಚರ್ಚೆ ಆಗಲಿದ್ದು, ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಂಜೆ ತನಕ ಸರ್ಕಾರಕ್ಕೆ ರೈತರು ಡೆಡ್​ಲೈನ್​ ನೀಡಿದ್ದಾರೆ.
ನವೆಂಬರ್​​ ಕ್ರಾಂತಿ ಕ್ರಾಂತಿ, ಪವರ್​​ ಶೇರಿಂಗ್​​​ ಸದ್ದ ಗದ್ದಲದ ನಡುವೆ ರಾಜ್ಯದಲ್ಲಿ ರೈತರ ಕ್ರಾಂತಿಯ ಕಹಳೆ ಮೊಳಗಿದೆ. ಕಬ್ಬಿಗಾಗಿ ಕಿಚ್ಚೆದ್ದ ಅನ್ನದಾತರು, ರಾಜ್ಯ ಸರ್ಕಾರದ ವಿರುದ್ಧ ಬೆಲೆ ನಿಗದಿಗಾಗಿ ದಂಗೆ ಎದ್ದಿದ್ದಾರೆ. ಉತ್ತರದಲ್ಲಿ ಎದ್ದ ಈ ಕ್ರಾಂತಿಯ ಕಿಚ್ಚು, ದಶದಿಕ್ಕಲ್ಲೂ ಧಗಧಗಿಸ್ತಿದ್ದು, ವಿದ್ಯಾರ್ಥಿ ಶಕ್ತಿಯ ಬಲ ಸಿಕ್ಕಿದೆ. ಇತ್ತ ಸಂಧಾನಕ್ಕೆ ಹೋದ ಹೆಚ್.​ಕೆ ಪಾಟೀಲ್​​ ಅವರು ಬರಿಗೈಯಲ್ಲಿ ವಾಪಸ್​​ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/11/06/hk_patil-2025-11-06-07-41-24.jpg)
ಕಬ್ಬಿಗೆ ಬೆಲೆ ನಿಗದಿ ಮಾಡಲು ಅಹೋರಾತ್ರಿ ಹೋರಾಟ!
ಮೂಡಲಗಿ ಕಡೆ ರಾಜ್ಯದ ಮೂಡೇ ತಿರುಗಿದೆ. ಗುರ್ಲಾಪುರ ಕ್ರಾಸ್ ಬಳಿಯ ಹೋರಾಟಕ್ಕೆ ರೈತ ಸೇನೆ ಬಲ ಸಿಕ್ಕಿದೆ. ಸರ್ಕಾರದ ಪ್ರತಿನಿಧಿ ಆಗಿ ಆಗಮಿಸಿ ಸಚಿವ ಹೆಚ್.ಕೆ ಪಾಟೀಲ್​, ಕಬ್ಬಿನ ದರ ನಿಗದಿ ಒಂದೇ ಅಲ್ಲ, ಎಂಟು ಬೇಡಿಕೆ ಇಟ್ಟಿದ್ದೀರಿ, ಇದನ್ನ ಒಬ್ಬರೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ ಅಂತ ಇಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಗೆ ಆಹ್ವಾನಿಸಿದ್ದರು.
ರೈತರ ಬೇಡಿಕೆಗಳು ಒಂದಲ್ಲ, 8 ಅಂಶಗಳು ಇವೆ. ಇದನ್ನು ಒಬ್ಬರು ನಿರ್ಧಾರ ಮಾಡೋದು ಅಲ್ಲವೇ ಎಲ್ಲ. ಸಿಎಂ ಹತ್ತಿರ ಹೋಗಿ ಮಾತನಾಡಿ ಎಂದರೆ ಅದು ಆಗೋದು ಅಲ್ಲ. ಮೊದಲು ನಿಮ್ಮ ಜೊತೆ ಮಾತನಾಡಿ, ಆ ಮೇಲೆ ಕಾರ್ಖಾನೆಯವರ ಜೊತೆ ಮಾತನಾಡಬೇಕು. ಎಫ್​ಆರ್​ಪಿ. ಎಂಎಸ್​ಪಿ, ಶುಗರ್ ರೇಟ್ ಇದರ ಸಲುವಾಗಿ ಕೇಂದ್ರದ ಬಳಿ ಹೋಗಬೇಕು. ರಾಜ್ಯ ಸರ್ಕಾರ ಏನು ಮಾಡೋಕೆ ಆಗುತ್ತದೆ. ಸಿಎಂ ಅವರನ್ನು ಮೀಟ್ ಮಾಡಿ ಈ ಬಗ್ಗೆ ಹೇಳುತ್ತೇನೆ. ನೀವು 10 ಜನ ಬರಬೇಕು.
ಹೆಚ್​.ಕೆ ಪಾಟೀಲ್​​, ಕಾನೂನು ಸಚಿವ
ಇವತ್ತು ಸಂಜೆ ತನಕ ಸರ್ಕಾರಕ್ಕೆ ಡೆಡ್​​ಲೈನ್​
ಇನ್ನು, ಸಚಿವ ಹೆಚ್.ಕೆ.ಪಾಟೀಲ್ ನಡೆಸಿದ ಸಭೆ ವಿಫಲವಾಗ್ತಿದ್ದಂತೆ ರೈತರು ರೊಚ್ಚಿಗೆದ್ದರು. ಸಚಿವ ಹೆಚ್​ಕೆ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಕಾರಿಗೆ ಅಡ್ಡಬಿಳ್ಳಲು ಯತ್ನಿಸಿದ ರೈತರನ್ನ ಕರೆದೊಯ್ಯಲು ಪೊಲೀಸರು ಹರಸಾಹಸಪಟ್ಟರು.
ಈ ಮಧ್ಯೆ ನಾವು ಸಿಎಂ ಸಿದ್ದರಾಮಯ್ಯ ಕರೆಯುವ ಸಭೆಗೆ ಬರುವುದಿಲ್ಲ ಎಂದಿರುವ ರೈತರು, ಸಚಿವರಾಗಿ ನೀವೇ ಸಿಎಂ ಜೊತೆಗೆ ಮಾತುಕತೆ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿ ಅಂತ ಹೇಳಿದ್ದಾರೆ. ಸಂಜೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಇಲ್ಲವಾದ್ರೆ ನವೆಂಬರ್ 7 ಅಂದ್ರೆ ನಾಳೆ ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡುವುದು ಖಚಿತ ಎಂಬ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ವೋಟಿಂಗ್ ಆರಂಭ.. ಎಷ್ಟು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ?
/filters:format(webp)/newsfirstlive-kannada/media/media_files/2025/11/06/farmer_protest-2025-11-06-07-41-36.jpg)
ಸಿಎಂ ಸಿದ್ದರಾಮಯ್ಯರ ಜೊತೆಗಿನ ಸಭೆಗೆ ನಾವು ಹೋಗೋಕೆ ಬರಲ್ಲ. ಸಾವಿರೋ, 5 ಸಾವಿರ ರೈತರು ಹೋರಾಟ ಮಾಡುತ್ತಿಲ್ಲ. ಲಕ್ಷಂತಾರ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸಮಸ್ಯೆ ಬಗೆಹರಿಸೋದು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಪರಿಹಾರ ನಾನು ಹೇಳುವುದಕ್ಕೆ ಬರಲ್ಲ. ಒಬ್ಬ ಪ್ರತಿನಿಧಿನ ಕಳಿಸೋದು ತಪ್ಪು. ಸಿಎಂ ಅವರೇ ನಿರ್ಧಾರ ಮಾಡಬೇಕು.
ಚೂನಪ್ಪ ಪೂಜಾರಿ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ
ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದ ರೈತರು, ವೇದಿಕೆ ಪಕ್ಕದಲ್ಲೇ ನಿದ್ದೆಗೆ ಜಾರಿದ್ದಾರೆ.. ರೈತರ ಹೋರಾಟ ಇವತ್ತು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.. ಇತ್ತ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಷ ಸೇವಿಸಿದ್ದ ರೈತನ ಆರೋಗ್ಯ ವಿಚಾರಿಸಿದ್ದಾರೆ..
ದಿಢೀರ್​​ ಅಂತ ಹೊತ್ತಿದ ಕಬ್ಬಿನ ಕಿಚ್ಚು ಸದ್ಯಕ್ಕೆ ಆರುವ ಲಕ್ಷಣಗಳೇ ಕಾಣಿಸ್ತಿಲ್ಲ.. ಇವತ್ತು ಸರ್ಕಾರಕ್ಕೆ ಡೆಡ್​ಲೈನ್​ ನೀಡಲಾಗಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಹೋರಾಟದ ಭವಿಷ್ಯ ತೀರ್ಮಾನ ಆಗಲಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us