Advertisment

ಬಿಹಾರ ವಿಧಾನಸಭಾ ಚುನಾವಣೆಗೆ ವೋಟಿಂಗ್ ಆರಂಭ.. ಎಷ್ಟು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ?

ಅತ್ಯಂತ ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತಾ ದೃಷ್ಟಿಯಿಂದ ವೋಟಿಂಗ್ ಸಂಜೆ 5 ಗಂಟೆಗೆ ಮುಕ್ತಾಯಗೊಳಿಸಲಾಗುತ್ತದೆ. ಇದರಲ್ಲಿ ಸಿಮ್ರಿ ಭಕ್ತಿಯಾರ್‌ಪುರ್, ಮಹಿಷಿ, ತಾರಾಪುರ, ಮುಂಗೇರ್, ಜಮಾಲ್‌ಪುರ, ಮತ್ತು ಸೂರ್ಯಗರ್ಹಾ ವಿಧಾನಸಭಾ ಕ್ಷೇತ್ರಗಳು ಸೇರಿವೆ.

author-image
Bhimappa
BIHAR_ELECTIONS
Advertisment

ಪಾಟ್ನಾ: ಬಿಹಾರದ ವಿಧಾಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಪ್ರಾರಂಭವಾಗಿದೆ. ಒಟ್ಟು 243 ವಿಧಾನ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ವೋಟಿಂಗ್ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6ಗಂಟೆ ವರೆಗೆ ನಡೆಯಲಿದೆ.

Advertisment

121 ಕ್ಷೇತ್ರಗಳ ಪೈಕಿ 3.75 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು 1,314 ಅಭ್ಯರ್ಥಿಗಳ ಭವಿಷ್ಯ ಏನೆಂಬುದನ್ನು ನಿರ್ಧರಿಸಲಿದ್ದಾರೆ. ಎನ್​ಡಿಎ, ಇಂಡಿಯಾ ಕೂಟ ಹಾಗೂ ಪ್ರಶಾಂತ್ ಕಿಶೋರ್ ಅವರ ಜನ್ ಸುರಕ್ಷಾ ಪಕ್ಷ ಭರ್ಜರಿಯಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದವು. ಪ್ರಚಾರದ ನಂತರ ಮತದಾರರು ಉತ್ಸಾಹದಿಂದ ವೋಟಿಂಗ್​ನಲ್ಲಿ ಭಾಗಿಯಾಗುತ್ತಿದ್ದಾರೆ. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಮಾತ್ರ ನವೆಂಬರ್ 6 ರ ನಂತರ ಗೊತ್ತಾಗಲಿದೆ. 

ಬಿಹಾರದ ರಾಜಧಾನಿ ಪಾಟ್ನಾ, ವೈಶಾಲಿ, ನಳಂದ, ಭೋಜ್​ಪುರ್, ಮುಂಗೇರ್, ಸರಾನ್, ಸಿವಾನ್, ಗೋಪಾಗಂಜ್, ಮುಜಫರ್​ಪುರ ಸೇರಿ ಒಟ್ಟು 18 ಜಿಲ್ಲೆಗಳಲ್ಲಿ ಇವತ್ತು ಮೊದಲ ಹಂತದಲ್ಲಿ ವೋಟಿಂಗ್ ನಡೆಯುತ್ತಿದೆ. ಜೊತೆಗೆ 45,341 ಮತದಾನ ಕೇಂದ್ರಗಳಿದ್ದು ಮತದಾನ ಪ್ರಕ್ರಿಯೆ ಮೇಲ್ವಿಚಾರಣೆಗಾಗಿ ವೆಬ್​ಕಾಸ್ಟಿಂಗ್ ಕೂಡ ಮಾಡಲಾಗುತ್ತದೆ. 

ಇದನ್ನೂ ಓದಿ:ಆರ್​​ಸಿಬಿಗೆ ಹೊಸ ಕೋಚ್​.. ಸಿಎಸ್​​ಕೆಗೆ ನೆಹ್ರಾ ಬೌನ್ಸರ್​​​..!

ಬಿಹಾರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್..!

121 ಕ್ಷೇತ್ರಗಳಲ್ಲಿ ಮತದಾನವು ಈಗಾಗಲೇ ಆರಂಭವಾಗಿದ್ದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಆದರೆ ಅತ್ಯಂತ ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತಾ ದೃಷ್ಟಿಯಿಂದ ವೋಟಿಂಗ್ ಸಂಜೆ 5 ಗಂಟೆಗೆ ಮುಕ್ತಾಯಗೊಳಿಸಲಾಗುತ್ತದೆ. ಇದರಲ್ಲಿ ಸಿಮ್ರಿ ಭಕ್ತಿಯಾರ್‌ಪುರ್, ಮಹಿಷಿ, ತಾರಾಪುರ, ಮುಂಗೇರ್, ಜಮಾಲ್‌ಪುರ, ಮತ್ತು ಸೂರ್ಯಗರ್ಹಾ ವಿಧಾನಸಭಾ ಕ್ಷೇತ್ರದ 56 ಮತಗಟ್ಟೆಗಳಲ್ಲಿ 5 ಗಂಟೆಗೆ ವೋಟಿಂಗ್ ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ.  

Advertisment

ನವೆಂಬರ್​ 11 ರಂದು ಉಳಿದ ಕ್ಷೇತ್ರಗಳಿಗೆ ಅಂದರೆ 122 ಸ್ಥಾನಗಳಿಗೆ 2ನೇ ಹಂತದ ಮತದಾನ ನಡೆಯಲಿದೆ. ವೋಟಿಂಗ್ ಕೌಂಟಿಂಗ್ ನವೆಂಬರ್​ 14 ರಂದು ನಡೆಯಲಿದ್ದು ಜಯಭೇರಿ ಯಾರದ್ದು ಎಂದು ಗೊತ್ತಾಗಲಿದೆ. ಸಂಪೂರ್ಣ ಫಲಿತಾಂಶ ನವೆಂಬರ್ 16ರಂದು ತಿಳಿದು ಬರಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bihar election Bihar News
Advertisment
Advertisment
Advertisment