Advertisment

ಆರ್​​ಸಿಬಿಗೆ ಹೊಸ ಕೋಚ್​.. ಸಿಎಸ್​​ಕೆಗೆ ನೆಹ್ರಾ ಬೌನ್ಸರ್​​​..!

IPL ಸೀಸನ್-19 ಪ್ಲೇಯರ್ಸ್ ರಿಟೆನ್ಶನ್​​​​​ ಡೆಡ್​​ಲೈನ್ ಸಮೀಪಿಸ್ತಿದೆ. ತೆರೆ ಹಿಂದೆ ಸಿಕ್ಕಾಪಟ್ಟೆ ವರ್ಕ್​ಔಟ್ ಮಾಡಿರೋ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಲಿಸ್ಟ್ ಪ್ರಕಟಿಸಲಿದೆ. ಮತ್ತೊಂದೆಡೆ ಸೂಪರ್​ಸ್ಟಾರ್ ಆಟಗಾರರ ವಲಸೆ ವಂದಂತಿ ಸುದ್ದಿಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

author-image
Ganesh Kerekuli
RCB
Advertisment

ರಿಟೈನ್, ರಿಲೀಸ್, ಟ್ರೇಡ್, ಕ್ಯಾಶ್ ಡೀಲ್ ಅಂತ ಬ್ಯುಸಿಯಾಗಿದ್ದ ಐಪಿಎಲ್ ಫ್ರಾಂಚೈಸಿಗಳಿಗೆ, ಟೆನ್ಶನ್ ಶುರುವಾಗಿದೆ. ಪ್ಲೇಯರ್ಸ್ ರಿಟೆನ್ಶನ್​​​​​ ಡೆಡ್​​ಲೈನ್​​ಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಫ್ರಾಂಚೈಸಿಗಳು, ಡೆಡ್​​ಲೈನ್​​​ಗೂ ಮುನ್ನ ಆಟಗಾರರ ಲಿಸ್ಟ್, ಫೈನಲ್ ಮಾಡಲು ಮುಂದಾಗಿವೆ. ಮತ್ತೊಂದೆಡೆ ಮುಂಬರುವ ಐಪಿಎಲ್ ಸೀಸನ್​​ಗೂ ಮುನ್ನ, ತಂಡಗಳಿಗೆ ಮೇಜರ್ ಸರ್ಜರಿ ಮಾಡಲಾಗ್ತಿದೆ.      

Advertisment

ಆರ್​​ಸಿಬಿಗೆ ಹೊಸ ಹೆಡ್ ಕೋಚ್​

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ಕ್ಕೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಾಲಿ ಕೋಚ್ ಲುಕ್ ವಿಲಿಯಮ್ಸ್​​​​​​ ಬಿಗ್​ಬ್ಯಾಷ್​​​ ಲೀಗ್​ನಲ್ಲಿ ಬ್ಯುಸಿಯಾಗಲಿರುವ ಕಾರಣ ಅಸಿಸ್ಟೆಂಟ್ ಕೋಚ್ ಮಲೋಲಾ ರಂಗರಾಜನ್​​​​​​ಗೆ ಕೋಚ್ ಆಗಿ ಪ್ರಮೋಷನ್ ನೀಡಲಾಗಿದೆ. ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ಆಟಗಾರ್ತಿ ಅನ್ಯಾ ಶ್ರಬ್‌ಸೋಲ್, ಆರ್​ಸಿಬಿ ಮಹಿಳಾ ತಂಡದ ಬೌಲಿಂಗ್ ಆಗಿ ನೇಮಕಗೊಂಡಿದ್ದಾರೆ.   

ಕ್ಲಾಸನ್ ಔಟ್

ಸೌತ್ ಆಫ್ರಿಕಾದ ಡಿಸ್ಟ್ರಕ್ಟೀವ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಹೆನ್ರಿಚ್ ಕ್ಲಾಸನ್​​​​​​​​​, ಮಿನಿ ಆಕ್ಷನ್​​ಗೆ ಎಂಟ್ರಿ ಕೊಡೊ ಸಾಧ್ಯತೆ ಹೆಚ್ಚಿದೆ. 2023ರಲ್ಲಿ ಸನ್​ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಕ್ಲಾಸನ್​​​ರನ್ನ, ಫ್ರಾಂಚೈಸಿ ರಿಲೀಸ್ ಮಾಡಲು ಮುಂದಾಗಿದೆ. ಕ್ಲಾಸನ್ ರಿಲೀಸ್​​ಗೆ ಯಾವುದು ಕಾರಣ ತಿಳಿದುಬಂದಿಲ್ಲ. ಆದ್ರೆ ಕ್ಲಾಸನ್ ರಿಲೀಸ್ ಸುದ್ದಿ ಹೊರ ಬೀಳುತ್ತಿದ್ದಂತೆ, ಇತರೆ ಫ್ರಾಂಚೈಸಿಗಳು ಆಫ್ರಿಕನ್ ಆಟಗಾರನ ಮೇಲೆ ಕಣ್ಣಿಟ್ಟಿದೆ. ಕ್ಲಾಸನ್​​ರನ್ನ ಸೆಳೆಯಲು ಮುಂದಾಗಿವೆ

ಇದನ್ನೂ ಓದಿ: ವಿರಾಟ್​ ಕೊಹ್ಲಿ ಅಂದ್ರೆ ಎಲ್ಲರಿಗೂ ಯಾಕಿಷ್ಟ..? Birthday special!

ಕನ್ನಡಿಗ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್​ ಬಿಡಲಿದ್ದಾರೆ. ಐಪಿಎಲ್ ಸೀಸನ್-19ಕ್ಕೆ ಹೊಸ ತಂಡ ಸೇರಲಿದ್ದಾರೆ ಅನ್ನೋ ಗಾಳಿ ಸುದ್ದಿ, ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ರಾಹುಲ್ ಕೊಲ್ಕತ್ತಾ ನೈಟ್​ರೈಡರ್ಸ್ ತಂಡಕ್ಕೆ ಹೋಗ್ತಾರೆ. ರಾಹುಲ್ ಮೇಲೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಒಲವು ತೋರಿಸ್ತಿದೆ ಅಂತೆಲ್ಲಾ ಹೇಳಲಾಗ್ತಿತ್ತು. ಆದ್ರೀಗ ಕ್ಯಾಪಿಟಲ್ಸ್ ಫ್ರಾಂಚೈಸಿ, ರಾಹುಲ್​ರನ್ನ ಬಿಡೋ ಮಾತೇ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ತಂಡದ ಮಾರ್ಕಿ ಪ್ಲೇಯರ್​ನನ್ನ ಬಿಡಲು ನಮಗೆ ತಲೆಕೆಟ್ಟಿಲ್ಲ ಅಂತ ಕ್ಯಾಪಿಟಲ್ಸ್ ಫ್ರಾಂಚೈಸಿ ತಿರುಗೇಟು ನೀಡಿದೆ. ​​

Advertisment

kl rahul delhi capitals (1)
ಕೆಎಲ್ ರಾಹುಲ್

ಆಲ್​ ಫಾರ್ಮ್​ ಆಲ್​ರೌಂಡರ್ ವಾಶಿಂಗ್ಟನ್ ಸುಂದರ್, ಹೋಂ ಟೀಮ್ ಚೆನ್ನೈ ಸೂಪರ್​​ಕಿಂಗ್ಸ್​ ತಂಡಕ್ಕೆ ಟ್ರೇಡ್ ಆಗ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೀಗ ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾ, ಸುಂದರ್ ಟ್ರೇಡ್ ಬಗ್ಗೆ ಕ್ಲ್ಯಾರಿಟಿ ನೀಡಿದ್ದಾರೆ. ಸುಂದರ್​ರನ್ನ ನಾವು ಯಾವುದೇ ಕಾರಣಕ್ಕೂ ಟ್ರೇಡ್ ಮಾಡಲ್ಲ. ಸುಂದರ್ ಗುಜರಾತ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಆಫ್​ಸ್ಪಿನ್ ಆಲ್​ರೌಂಡರ್​​ನನ್ನ ನಮ್ಮಲ್ಲೇ ಉಳಿಸಿಕೊಳ್ಳಲಾಗುವುದು ಅಂತ ಕ್ಲಿಯರ್ ಕಟ್​ ಆಗಿ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಪಂಜಾಬ್ ಕಿಂಗ್ಸ್​ ಮತ್ತು ಸನ್​ರೈಸರ್ಸ್ ಹೈದ್ರಾಬಾದ್​ ತಂಡಗಳ ಮಾಜಿ ಕೋಚ್ ಟಾಮ್ ಮೂಡಿ, ಲಕ್ನೋ ಸೂಪರ್​ಜೈಂಟ್ಸ್​ ಫ್ರಾಂಚೈಸಿಯ ಗ್ಲೋಬಲ್ ಡೈರೆಕ್ಟರ್ ಆಫ್ ಕ್ರಿಕೆಟ್​​​​​​​​ ಹುದ್ದೆ ಅಲಂಕರಿಸಿದ್ದಾರೆ. ಮೂಡಿ ಇದೀಗ, ಐಪಿಎಲ್​​ನ ಲಕ್ನೋ ಸೂಪರ್​​ಜೈಂಟ್ಸ್, SAT20ಯ ಡರ್ಬನ್ ಸೂಪರ್​​ಜೈಂಟ್ಸ್​ ಮತ್ತು ಮ್ಯಾಂಚೆಸ್ಟ್ ಮೂಲದ ಹಂಡ್ರೆಡ್ ಫ್ರಾಂಚೈಸಿಯ ಕಾರ್ಯವೈಖರಿ ನೋಡಿಕೊಳ್ಳಲಿದ್ದಾರೆ. ​

ಇದನ್ನೂ ಓದಿ:ಒಂದೇ ಒಂದು ಥ್ರೋನಿಂದ ಬದಲಾಯ್ತು ಅದೃಷ್ಟ.. ವಿಶ್ವಕಪ್ ಗೆದ್ದ ತಾರೆಯರ ಹಾರ್ಟ್​ ಟಚಿಂಗ್ ಸ್ಟೋರಿ..

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ipl retention IPL 2026 auction IPL
Advertisment
Advertisment
Advertisment