/newsfirstlive-kannada/media/media_files/2025/11/05/kohli-rcb-2025-11-05-11-17-07.jpg)
ವಿರಾಟ್​ ಕೊಹ್ಲಿ... ಈ ಹೆಸರಿಗಿರೋ ಶಕ್ತಿನೇ ಬೇರೆ.. ಕ್ರಿಕೆಟ್​ ಮೈದಾನದಲ್ಲಿ ದಾಖಲೆಗಳ ಶೂರ.. ಆಫ್​ ದ ಫೀಲ್ಡ್​ನಲ್ಲಿ ಅಸಂಖ್ಯ ಅಭಿಮಾನಿಗಳ ಸರದಾರ.. ಈ ಕಿಂಗ್​ ಕೊಹ್ಲಿಗಿಂದು ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟಿರೋ ಕೊಹ್ಲಿ ಶುಭಾಶಯಗಳ ಸುನಾಮಿಯೇ ಹರಿದು ಬರ್ತಿದೆ. ವಿಶ್ವದ ಯಾವ ಮೂಲೆಗೆ ಹೋದ್ರೂ ಕಿಂಗ್​ ಕೊಹ್ಲಿಯನ್ನ ಆರಾಧಿಸೋ ಅಸಂಖ್ಯ ಅಭಿಮಾನಿಗಳು ನಿಮಗೆ ಸಿಗದೇ ಇರಲ್ಲ. ಮಾರ್ಡನ್​ ಡೇ ಎರಾನಲ್ಲಿ ಕೊಹ್ಲಿಯಷ್ಟು ಸೆಲಬ್ರೇಟೆಡ್​ ಕ್ರಿಕೆಟರ್​ ಇನ್ನೊಬ್ಬ ಇಲ್ಲ. ಅದಕ್ಕೆ ಕಾರಣಗಳು ಹಲವು.
ಇದನ್ನೂ ಓದಿ:ಜೆಮಿಮಾ ಅನುಭವಿಸಿದ್ದು ನೋವು, ಹತಾಶೆ, ಅಳು.. ಕೊಹ್ಲಿಯ ಹೃದಯ ತುಂಬಿ ಮಾತುಗಳೇ ಶಕ್ತಿ!
/filters:format(webp)/newsfirstlive-kannada/media/media_files/2025/10/12/kohli-2025-10-12-12-36-38.jpg)
ಎಲ್ಲವನ್ನ ಸಾಧಿಸಬಲ್ಲ ರಿಯಲ್​ ‘ಫೈಟರ್’​
ವಿರಾಟ್​​ ಕೊಹ್ಲಿ ಒಬ್ಬ ರಿಯಲ್​ ಫೈಟರ್​​. ಕೊಹ್ಲಿಯ ಫೈಟಿಂಗ್​ ಸ್ಪಿರಿಟ್​​​ ಎಂತವರಿಗೂ ಸ್ಫೂರ್ತಿ. ಮೈದಾನ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ.. ಸಂದರ್ಭ ಹೇಗೆ ಇರಲಿ.. ಗೆಲುವೊಂದೇ ಕಿಂಗ್​ ಕೊಹ್ಲಿಯ ಗುರಿಯಾಗಿರುತ್ತೆ. ಬಿಗ್​ ಸ್ಟೇಜ್​ಗಳಲ್ಲಿ ಒತ್ತಡದ ನಡುವೆ ಕೂಲ್ ಅಂಡ್ ಕಾಮ್​ ಆಗಿ ಬ್ಯಾಟಿಂಗ್​ ನಡೆಸಿದ ಹಲವು ಉದಾಹರಣೆಗಳಿವೆ. 2022ರ ವಿಶ್ವಕಪ್​ನ ಪಾಕ್​ ವಿರುದ್ಧದ ಪಂದ್ಯದಲ್ಲಿ ಏಕಾಂಗಿಯಾಗಿ ತಂಡವನ್ನ ಗೆಲ್ಲಿಸಿದ್ದಕ್ಕಿಂತ ಬೆಸ್ಟ್​​ ಎಕ್ಸಾಂಪಲ್​ ಬೇಕಾ?
ಇದನ್ನೂ ಓದಿ:ಒಂದು ಅರ್ಧ ಶತಕ.. ಒಂದೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಕೊಟ್ಟ ಸಂದೇಶಗಳು ಎಷ್ಟು..?
/filters:format(webp)/newsfirstlive-kannada/media/media_files/2025/10/25/virat-kohli-1-2025-10-25-15-03-19.jpg)
'ವಿರಾಟ' ರೂಪ ಫಿಕ್ಸ್​.!
ವಿರಾಟ್​​ ಕೊಹ್ಲಿ ಮೈದಾನಕ್ಕಿಳಿದ್ರೆ ಇಂಟೆಟ್​ ಬೇರೆನೇ ಇರುತ್ತೆ.. ತಂಡವನ್ನ ಗೆಲ್ಲಿಸಬೇಕು ಅನ್ನೋದೊಂದೇ ಗುರಿಯಾಗಿರುತ್ತೆ. ಇಂತಾ ಸಂದರ್ಭದಲ್ಲಿ ಯಾರಾದ್ರೂ ಕೆಣಕಿದ್ರೆ ಮುಗೀತು ಕಥೆ. ಕೊಹ್ಲಿಯ ಫೈಟಿಂಗ್​ ಸ್ಪಿರಿಟ್​​ ಡಬಲ್​ ಆಗಿ ಬಿಡುತ್ತೆ. ಆ ಬಳಿಕ ದಂಡ ದಶಗುಣಂ ಫಿಕ್ಸ್​. ಕೊಹ್ಲಿಯ ಉಗ್ರಾವತಾರ ಸಹಿಸಿಕೊಳ್ಳಲಾಗದೇ ಎದುರಾಳಿಗಳು ನಡುಗಿದ ಅದೆಷ್ಟೋ ಉದಾಹರಣೆಗಳಿವೆ. ಇದೂ ಫ್ಯಾನ್ಸ್​ ಕಿಕ್​ನ ಜಾಸ್ತಿ ಮಾಡುತ್ತೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಕೊಹ್ಲಿ, ರೋಹಿತ್ ಯಾಕೆ ಇನ್ನೂ ಬೇಕು..? ಓದಲೇಬೇಕಾದ ಸ್ಟೋರಿ..
/filters:format(webp)/newsfirstlive-kannada/media/media_files/2025/10/15/virat_kohli-1-2025-10-15-20-10-09.jpg)
ಮೈದಾನಕ್ಕಿಳಿದ್ರೆ ಕಿಂಗ್​ ಕೊಹ್ಲಿಯ ಎಷ್ಟು ಅಗ್ರೆಸ್ಸೀವ್​ ಇರ್ತಾರೋ ಆಫ್​ ದ ಫೀಲ್ಡ್​ನಲ್ಲಿ ಅಷ್ಟೇ ಕೂಲ್​ & ಕಾಮ್​. ಎಲ್ಲರನ್ನೂ ಪ್ರೀತಿಸೋ, ಗೌರವಿಸೋ ಹೃದಯವಂತ.. ಬದ್ಧವೈರಿ ಪಾಕ್​ ಪಡೆಯ ಆಟಗಾರರೇ ಆಗಿರಲಿ.. ಅಥವಾ ಬೇರೆ ಯಾರೆ ಆಗಿರಲಿ.. ಮೈದಾನದಲ್ಲಿ ಮಾತ್ರ ಕೊಹ್ಲಿಗೆ ಎದುರಾಳಿಗಳು.. ಹೊರಗಡೆ ಬೆಸ್ಟ್​​ ಫ್ರೆಂಡ್ಸ್​​..!
ವಿಶ್ವದ ದೊಡ್ಡ ಸೂಪರ್​ ಸ್ಟಾರ್​, ಕಿಂಗ್​ ಕೊಹ್ಲಿ ತಲೆ ಬಾಗೋದು ಫ್ಯಾನ್ಸ್​ಗೆ ಮಾತ್ರ. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನ ಹೊಂದಿರೋ ಕೊಹ್ಲಿ, ಎಂದಿಗೂ ಬೇಸರ ತರಿಸಿದವರಲ್ಲ.. ಎಷ್ಟೇ ಒತ್ತಡದಲ್ಲಿದ್ರೂ ಅಭಿಮಾನಿಗಳಿಗೆ ಸಮಯ ನೀಡೇ ನೀಡ್ತಾರೆ.
ಕುಟುಂಬವೇ ಸರ್ವಸ್ವ, ಪತ್ನಿ - ಮಕ್ಕಳೇ ಶಕ್ತಿ..!
ಮೈದಾನದಿಂದ ಹೊರ ಬಂದ್ರೆ ಮುಗೀತು.. ವಿರಾಟ್​​ ಕೊಹ್ಲಿ ಕಂಪ್ಲೀಟ್​​ ಫ್ಯಾಮಿಲಿ ಮ್ಯಾನ್​.. ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ನನ್ನ ಶಕ್ತಿ ಎಂದೇ ನಂಬಿರೋ ವಿರಾಟ್​, ಕುಟುಂಬದೊಂದಿಗೆ ಸಮಯ ಕಳೆಯೊದಕ್ಕೆ ಹೆಚ್ಚು ಇಷ್ಟ ಪಡ್ತಾರೆ.. ಬ್ಯೂಸಿ ಶೆಡ್ಯೂಲ್​ನಿಂದ ಬೇಸತ್ತಾಗ, ಮಾನಸಿಕ ಕುಗ್ಗಿ ಹೋದಾಗೆಲ್ಲಾ ಕೊಹ್ಲಿ ಪಾಲಿನ ಬೂಸ್ಟರ್​ ಡೋಸ್​ ಕುಟುಂಬವೇ ಆಗಿದೆ.
/filters:format(webp)/newsfirstlive-kannada/media/media_files/2025/08/28/kohli-and-anushka-sharma-2025-08-28-16-41-47.jpg)
ತನ್ನ ಪ್ರತಿ ನಡೆಯಿಂದ ಕೊಟ್ಯಂತರ ಅಭಿಮಾನಿಗಳ ಸಂಪಾದಿಸಿರುವ ವಿರಾಟ್​ ಕೊಹ್ಲಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೊಸ ಹೊಸ ಸವಾಲುಗಳೂ ಕೂಡ ಈಗ ಕೊಹ್ಲಿ ಮುಂದಿವೆ. ಟೆಸ್ಟ್​, ಟಿ20ಗೆ ಗುಡ್​ ಬೈ ಹೇಳಿರೋ ಏಕದಿನ ವಿಶ್ವಕಪ್​ ಆಡೋ ಮಹದಾಸೆ ಹೊಂದಿದ್ದು, ಅದು ಸಾಧ್ಯವಾಗಬೇಕಂದ್ರೆ ಹಲವು ಸವಾಲುಗಳನ್ನ ಗೆಲ್ಲಬೇಕಿದೆ. ಆ ಚಾಲೆಂಜಸ್​​ ಗೆಲ್ಲೋ ಶಕ್ತಿಯನ್ನ ದೇವರು ಕರುಣಿಸಲಿ. ಮುಂದೆಯೂ ಫ್ಯಾನ್ಸ್ ಅನ್ನ ಹೀಗೆ ರಂಜಿಸಲಿ.. ತಮ್ಮ ನಡೆ ನುಡಿಯಿಂದ ಎಲ್ಲರಿಗೂ ಮಾದರಿಯಾಗಲಿ.. ಹ್ಯಾಪಿ ಬರ್ತ್​ ಡೇ ಕಿಂಗ್​ ಕೊಹ್ಲಿ.
ವಿಶೇಷ ವರದಿ: ವಸಂತ್​ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us