/newsfirstlive-kannada/media/media_files/2025/11/01/jemimah_rodrigues-2025-11-01-09-59-53.jpg)
ಒನ್​ ಡೇ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಫೈನಲ್​ಗೆ ರಾಯಲ್​ ಎಂಟ್ರಿ ಕೊಟ್ಟಿದೆ. ಚೊಚ್ಚಲ ವಿಶ್ವಕಪ್​ ಗೆಲುವಿನ ಕನಸು ಇಡೀ ಭಾರತದಲ್ಲಿ ಮನೆ ಮಾಡಿದೆ. 25 ವರ್ಷದ ಜೆಮಿಮಾ ರೋಡ್ರಿಗಸ್​​ ಇಂದು ಕೋಟ್ಯಂತರ ಭಾರತೀಯರಲ್ಲಿ ಕನಸು ಹುಟ್ಟು ಹಾಕಿದ್ದಾಳೆ. ಆಸ್ಟ್ರೇಲಿಯಾ ವಿಶ್ವದ ಬಲಾಢ್ಯರ ಎದುರು ಘರ್ಜಿಸಿದ ಲೋಕಲ್​ ಗರ್ಲ್ ಕೊಹ್ಲಿಯ ಭವಿಷ್ಯವನ್ನೂ ನಿಜ ಮಾಡಿದ್ದಾಳೆ.
2017ರ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ವೀರ ವನಿತೆಯರು ಕಪ್​ ಗೆಲ್ಲದಿದ್ರೂ, ದೇಶದ ಜನರ ಮನಸ್ಸು ಗೆದ್ದಿದ್ರು. ಅಂದು ಮುಂಬೈಗೆ ಬಂದ ಆಟಗಾರರನ್ನ ಸ್ವಾಗತಿಸೋಕೆ ಒಬ್ಬಳು ಬಾಲಕಿ ಬಂದಿದ್ದಳು. ಆಕೆ ಹೆಸರು ಜೆಮಿಮಾ ರೋಡ್ರಿಗ್ರಸ್​. ಕಾಂಗರೂಗಳನ್ನ ಸೆದೆಬಡಿದು ಟೀಮ್​ ಇಂಡಿಯಾವನ್ನ ಫೈನಲ್​ಗೆ ಕೊಂಡೊಯ್ದಿದ್ದಾಳಲ್ಲ ಅದೇ ಜೆಮಿಮಾ.
/filters:format(webp)/newsfirstlive-kannada/media/media_files/2025/10/31/ind_vs_aus_1-1-2025-10-31-07-07-18.jpg)
ಜೆಮಿಮಾ ರೋಡ್ರಿಗಸ್​, ಇನ್ನೂ 25 ವರ್ಷ, ಸಣಕಲು ದೇಹ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಬರೋಬ್ಬರಿ 339 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ್ದ ಟೀಮ್​ ಇಂಡಿಯಾ 59ಕ್ಕೆ 2 ವಿಕೆಟ್​ ಕಳೆದುಕೊಂಡಿತ್ತು. ಓಪನರ್ಸ್​​​​ ಪೆವಿಲಿಯನ್​ ಸೇರಿದ ಬಳಿಕ ಈಕೆ ಏನ್​ ಮಹಾ ಮಾಡಿ ಬಿಡ್ತಾಳೆ ಅನ್ನೋ ಆ್ಯಟಿಟ್ಯೂಡ್​ನಲ್ಲಿತ್ತು ಎದುರಾಳಿ ಆಸ್ಟ್ರೇಲಿಯಾ. ಆದ್ರೆ, ಅಂತಿಮವಾಗಿ ಬಲಾಢ್ಯ, ಸೋ ಕಾಲ್ಡ್​​ ವಿಶ್ವಕಪ್​ ಗೆಲ್ಲೋ ಹಾಟ್​ ಫೇವರಿಟ್ ಎನಿಸಿದ್ದ​​ ಆಸ್ಟ್ರೇಲಿಯಾಕ್ಕೆ ಆಗಿದ್ದು ಮುಖಭಂಗ.!
ಹೋಮ್​​ಗ್ರೌಂಡ್​ನಲ್ಲಿ ಜೆಮಿಮಾ ಜಬರ್ದಸ್ತ್​ ಆಟ.!
ಜೆಮಿಮಾ ರೋಡ್ರಿಗಸ್​.. ಸಣ್ಣ ದೇಹದ ಹುಡುಗಿಯಲ್ಲಿರೋ ಕಿಡಿ, ಬಲಾಡ್ಯರನ್ನೇ ಬೆಚ್ಚಿ ಬೀಳಿಸೋ ತಾಕತ್ತು, ಗೆದ್ದೆ ಗೆಲ್ಲಬೇಕು ಅನ್ನೋ ಛಲ ಇದೀಗ ವಿಶ್ವಕ್ಕೆ ಗೊತ್ತಾಗಿದೆ. ಹೋಮ್​ಗ್ರೌಂಡ್​​ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಕಾಂಗರೂಗಳನ್ನ ಚೆಂಡಾಡಿದ ಜೆಮಿಮಾ ಈಗ ಟಾಕ್​ ಆಫ್ ದಿ ಟೌನ್ ಆಗಿದ್ದಾಳೆ. ಜೆಮಿಮಾ ಕಟ್ಟಿದ ಕೆಚ್ಚೆದೆಯ ಇನ್ನಿಂಗ್ಸ್​​ ಆಸಿಸ್​​ ಗರ್ವಭಂಗ ಮಾಡಿದೆ. ಅಜೇಯ ಓಟಕ್ಕೆ ಬ್ರೇಕ್​ ಬಿದ್ದು ವಿಶ್ವಕಪ್​ನಿಂದ ಆಸಿಸ್​ ಹೊರಬಿದ್ರೆ, ಮಹಿಳಾ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ದಾಖಲೆಯ​ ಚೇಸ್​ ಮಾಡಿದ ಟೀಮ್​​ ಇಂಡಿಯಾ ಪೈನಲ್​ಗೆ ರಾಯಲ್​ ಎಂಟ್ರಿ ಕೊಟ್ಟಿದೆ.
ನೋವು, ಹತಾಶೆ, ಅಳು.. ಜೆಮಿಮಾ ಅನುಭವಿಸಿದ್ದು ನರಕ.!
ಹೋಮ್​​ಗ್ರೌಂಡ್​ನಲ್ಲಿ ಜೆಮಿಮಾ ನಡೆಸಿದ ಹೋರಾಟ ಕೇವಲ ಒಂದು ಇನ್ನಿಂಗ್ಸ್ ಮಾತ್ರವಲ್ಲ,​​ ಹಲವು ಸ್ಟೇಟ್​ಮೆಂಟ್ಸ್​ ಈ ಇನ್ನಿಂಗ್ಸ್​ನಲ್ಲಿ ಅಡಗಿವೆ. ಇದ್ರ ಹಿಂದೆ ನೋವು, ಅಳು, ಹತಾಶೆಯ ಕಥೆಯಿದೆ. ವಿಶ್ವಕಪ್​ ತಂಡದಲ್ಲಿ ಜೆಮಿಮಾಗೆ ಚಾನ್ಸ್​ ನೀಡಿದ್ದಕ್ಕೆ ಟೀಕೆಗಳು ಕೇಳಿ ಬಂದಿದ್ವು. ಮೊದಲ 3 ಪಂದ್ಯಗಳಲ್ಲಿ 2 ಡಕೌಟ್​ ಆದಾಗ ಟೀಕಾಕಾರರು ಮುಗಿಬಿದ್ದಿದ್ರು. ಬಳಿಕ ತಂಡದಿಂದ ಡ್ರಾಪ್​ ಆದಾಗ ಅನುಭವಿಸಿದ ಆತಂಕ, ದುಗುಡ ಅಷ್ಟಿಷ್ಟಲ್ಲ. ಪಂದ್ಯ ಗೆದ್ದ ಬಳಿಕ ಕಣ್ಣೀರು ಸುರಿಸ್ತಾ ಜೆಮಿಮಾ ಆಡಿದ ಮಾತುಗಳೇ ಆ ಕಷ್ಟ ಎಷ್ಟಿತ್ತು ಅನ್ನೋದನ್ನ ಹೇಳುತ್ವೆ.
ಜೆಮಿಮಾಗೆ ಶಹಬ್ಬಾಸ್​ ಎಂದ ಕಿಂಗ್​ ವಿರಾಟ್​ ಕೊಹ್ಲಿ.!
ಜೆಮಿಮಾ ಬ್ಯಾಟ್​ನಿಂದ ಬಂದ ಅಜೇಯ ಶತಕದ ಇನ್ನಿಂಗ್ಸ್​ಗೆ ಕ್ರಿಕೆಟ್​ ಲೋಕವೇ ಸ್ಟನ್​​ ಆಗಿದೆ. ಲೆಜೆಂಡರಿ ಆಟಗಾರರೆಲ್ಲಾ ಜೆಮಿಮಾ ಆಟವನ್ನ ಕೊಂಡಾಡ್ತಿದ್ದಾರೆ. ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ರೋಹಿತ್​ ಶರ್ಮಾ, ಯುವರಾಜ್ ಸಿಂಗ್​ ಸೇರಿದಂತೆ ಅನೇಕ ಕ್ರಿಕೆಟರ್ಸ್​ ಜೆಮಿಮಾ ಆಟವನ್ನ ಕೊಂಡಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ದಿಢೀರ್​ ಪ್ರತ್ಯಕ್ಷವಾಗಿರೋ ವಿರಾಟ್​ ಕೊಹ್ಲಿ ಕೂಡ ಜೆಮಿಮಾನ ಕೊಂಡಾಡಿದ್ದಾರೆ. ಜೆಮಿಮಾ ಇನ್ನಿಂಗ್ಸ್​​ನ resilience, belief ಮತ್ತು passionನ ಮೆಚ್ಚಿ ಶಹಬ್ಬಾಸ್​ ಎಂದಿದ್ದಾರೆ.
ಅಂದೇ ಜೆಮಿಮಾ ಬಗ್ಗೆ ಭವಿಷ್ಯ ನುಡಿದಿದ್ದ ಕೊಹ್ಲಿ.!
ಜೆಮಿಮಾ ಹಾಗೂ ಕೊಹ್ಲಿಯದ್ದು ವಿಶೇಷವಾದ ಬಂಧ. ಸೆಮಿಫೈನಲ್​ ಪಂದ್ಯದಲ್ಲಿ ಸಾಲಿಡ್​ ಆಟದ ಬಳಿಕ ಬಂದಿರೋ ಪ್ರತಿಕ್ರಿಯೆಗಳು, ಹೊಗಳಿಕೆಗಳು, ಎಮೋಷನ್​, ಸೆಂಟಿಮೆಂಟ್​ ಎಲ್ಲವನ್ನೂ ನೋಡಿದ್ವಿ. ಇವೆಲ್ಲವೂ ಸಾಧಿಸಿದ ಬಳಿಕ ಬಂದಿರೋದು. ಆದ್ರೆ, ಸಾಧಿಸೋದಕ್ಕೂ ಮುನ್ನವೇ ಜೆಮಿಮಾ ಬಗ್ಗೆ ಭವಿಷ್ಯ ನುಡಿದಿದ್ರು ಕೊಹ್ಲಿ. ಜೆಮಿಮಾಗೆ ಮಹಿಳಾ ಕ್ರಿಕೆಟ್​ನ ಬದಲಿಸೋ ತಾಕತ್ತಿದೆ ಎಂದು ಹೇಳಿದ್ರು ಕೊಹ್ಲಿ.!
/filters:format(webp)/newsfirstlive-kannada/media/media_files/2025/11/01/jemimah_rodrigues_kohli-2025-11-01-10-00-08.jpg)
ನಾನು ಮತ್ತು ಸ್ಮೃತಿ ಕೊಹ್ಲಿ ಬಳಿ ಬ್ಯಾಟಿಂಗ್​ ಬಗ್ಗೆ ಮಾತನಾಡಬಹುದಾ ಎಂದು ಕೇಳಿದ್ವಿ. ಅವರು ಒಪ್ಪಿಗೆ ಸೂಚಿಸಿ ಕೆಫೆಗೆ ಕರೆದಿದ್ರು. ಅನುಷ್ಕಾ ಕೂಡ ಇದ್ರು. ಮೊದಲ ಅರ್ಧಗಂಟೆ ನಾವು ಕ್ರಿಕೆಟ್​ ಬಗ್ಗೆ ಮಾತನಾಡಿದ್ವಿ. ಅವರು ನನಗೆ ಮತ್ತು ಸ್ಮೃತಿಗೆ ನಿಮ್ಮಬ್ಬರಿಗೆ ಮಹಿಳಾ ಕ್ರಿಕೆಟ್​​ ಬದಲಿಸುವ ಶಕ್ತಿಯಿದೆ. ನಾನು ಅದಾಗುವುದನ್ನ ನೋಡಬಲ್ಲೇ ಎಂದು ಹೇಳಿದ್ರು.
ವಿರಾಟ್​ ಕೊಹ್ಲಿ ಮಾತ್ರವಲ್ಲ, ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​, ದಿಗ್ಗಜ ಕ್ರಿಕೆಟಿಗ ನಾಸೀರ್​ ಹುಸೇನ್​ ಕೂಡ ಜೆಮಿಮಾ ಬಗ್ಗೆ 2018ರ ಎಪ್ರಿಲ್​ನಲ್ಲೇ Remember the name ಎಂದಿದ್ರು.
ಹೋಮ್​​ಗ್ರೌಂಡ್​ನಲ್ಲಿ ಮೈಟಿ ಆಸಿಸ್​ ಎದುರು ಕೆಚ್ಚೆದೆಯ ಶತಕ ಸಿಡಿಸಿ ಜೆಮಿಮಾ ಟೀಮ್​ ಇಂಡಿಯಾಗೆ ಫೈನಲ್ ದಾರಿ ತೋರಿಸಿದ್ದಾರೆ. ಇದೇ ವೇಳೆ ಇದು ನನ್ನ ಬೆಸ್ಟ್​​ ಇನ್ನಿಂಗ್ಸ್​ ಅಲ್ಲ.. ನನ್ನ ಬೆಸ್ಟ್​ ಇನ್ನಿಂಗ್ಸ್​ನ ಫೈನಲ್​ಗೆ ಕಾದಿಟ್ಟುಕೊಂಡಿದ್ದೇನೆ ಎಂದಿದ್ದಾರೆ. ಸೂಪರ್​ ಸಂಡೇ ನಡೆಯೋ ಅಲ್ಟಿಮೇಟ್​ ಫೈಟ್​ನಲ್ಲಿ ಜೆಮಿಮಾ ಮತ್ತೊಂದು ಸೂಪರ್​ ಶೋ ನೀಡಲಿ. ಭಾರತಕ್ಕೆ ಕಪ್​ ಗೆಲ್ಲಿಸಿಕೊಡಲಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us