/newsfirstlive-kannada/media/media_files/2025/11/01/kerala_man-2025-11-01-09-35-52.jpg)
ಈಗೀಗ ಎಲ್ಲವೂ ನ್ಯೂ ಟ್ರೆಂಡ್​ಗೆ ಒಗ್ಗಿಕೊಳ್ಳುತ್ತಿವೆ. ಕಂಪ್ಯೂಟರ್, ಮೊಬೈಲ್, ಇಂಟರ್​ನೆಟ್​ ಬಂದಾಗಿನಿಂದ ಕ್ಷಣಾರ್ಧದಲ್ಲೇ ಕೆಲವೊಂದು ಕೆಲಸಗಳು ಆಗುತ್ತಿವೆ. ಮೊದಲು ಹಣ ವರ್ಗಾವಣೆ ಮಾಡಬೇಕು ಎಂದರೆ ಬ್ಯಾಂಕ್​ಗೆ ಹೋಗಬೇಕಿತ್ತು. ಆದರೆ ಈಗ ಸೆಕೆಂಡ್​ನಲ್ಲಿ ಯಾರಿಗಾದರೂ ದುಡ್ಡು ಕಳಿಸಬಹುದು. ಸದ್ಯ ಇದೆಲ್ಲಾ ಈಗ ಯಾಕೆ ಅಂತೀರಾ?.. ಇಲ್ಲೊಬ್ಬರು ತಂದೆ, ತನ್ನ ಮಗಳ ಮದುವೆಯಲ್ಲಿ PayTM (ಪೇಟಿಎಮ್) ಕ್ಯೂಆರ್​ ಕೋಡ್​ ಅನ್ನೇ ಜೇಬ್​ಗೆ ಟ್ಯಾಗ್ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಮದುವೆ ಎಂದರೆ ಅದರದ್ದೇ ಆದ ವಿಶೇಷ ಸಂಪ್ರಾದಯಗಳನ್ನು ಒಳಗೊಂಡಿದೆ. ವಿವಾಹ ಸಂಭ್ರಮ ಎಂದ ಮೇಲೆ ಸಾವಿರಾರು ಜನರು ಭಾಗಿಯಾಗಿ ನವ ಜೋಡಿಗೆ ಶುಭಾ ಹಾರೈಸಿ ಆಶೀರ್ವಾದ ಮಾಡುತ್ತಾರೆ. ಜೊತೆಗೆ ಉಡುಗೊರೆಗಳನ್ನು ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಉಡುಗೊರೆ ನೀಡಿಲ್ಲ ಎಂದರೆ ಮದುವೆಯಲ್ಲಿ ಹಣವನ್ನು (ಮುಯ್ಯಿ) ನೀಡುವುದು ಕೂಡ ಇದೆ. ಈಗೀಗ ಎಲ್ಲಿ ನೋಡಿದರೂ ಹೆಚ್ಚು ಜನ ಫೋನ್​ ಪೇ, ಪೇಟಿಎಮ್, ಗೂಗಲ್​ ಪೇನಿಂದ ಹಣ ಪಾವತಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ.. ಯುವಕ, ಯುವತಿಯರು ಸೇರಿ 130 ಜನ ಬಂಧನ
/filters:format(webp)/newsfirstlive-kannada/media/media_files/2025/11/01/kerala_man_1-2025-11-01-09-40-11.jpg)
ಹೀಗಾಗಿ ಕೇರಳದ ವ್ಯಕ್ತಿ ಒಬ್ಬರು ತನ್ನ ಮಗಳ ಮದುವೆಗೆ ಬಂದವರಿಗೆ ಅನುಕೂಲವಾಗಲಿ ಎಂದು ಪೇಟಿಎಮ್​ ಕ್ಯೂಆರ್​ ಕೋಡ್ ಅನ್ನು ತಮ್ಮ ಜೇಬ್​ಗೆ ಟ್ಯಾಗ್ ಮಾಡಿಕೊಂಡಿದ್ದಾರೆ. ಇದರಿಂದ ಮದುವೆಗೆ ಬಂದವರು ಮುಯ್ಯಿ ಮಾಡಬೇಕು ಎಂದರೆ ಫೋನ್​ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದರೆ ಸಾಕು. ಸದ್ಯ ಮದುವೆಯಲ್ಲಿ ಇದೊಂದು ವಿಡಿಯೋ ಹೊಸ ಟ್ರೆಂಡ್​ನಂತೆ ಎಲ್ಲೆಡೆ ವೈರಲ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮದುವೆಗೆ ಬಂಧ ಜನರಂತೂ ಒಬ್ಬರ ಆದ ಮೇಲೆ ಒಬ್ಬರಂತೆ ಅವರ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದಾರೆ. ಒಬ್ಬರು 1000 ರೂ ಪಾವತಿ ಮಾಡಿ, ಕ್ಯಾಮೆರಾಗೆ ತೋರಿಸಿದ್ದಾರೆ. ಮಗಳ ಮದುವೆಯಲ್ಲಿ ತಂದೆ ಈ ರೀತಿ ಕ್ಯೂಆರ್ ಕೋಡ್ ಟ್ಯಾಗ್ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಬ್ಬರು ಅಂತೂ ಫುಲ್ ತಮಾಷೆ ಮಾಡಿದ್ದಾರೆ. ​
Father of the bride…… digital age has truly arrived in our country 😃 pic.twitter.com/lQ2gdAl0Cq
— Harsh Goenka (@hvgoenka) October 30, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us