/newsfirstlive-kannada/media/media_files/2025/11/01/rmg_rave_party-2025-11-01-09-06-58.jpg)
ರಾಮನಗರ: ಅಡವಿ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಜನರನ್ನು ಬಂಧಿಸಿದ್ದಾರೆ.
ತಡರಾತ್ರಿ ಅಡವಿ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ಮಾಡಿದ್ದರು. ಪಾರ್ಟಿಯಲ್ಲಿ ಇದ್ದವರೆಲ್ಲಾ ಬೆಂಗಳೂರು ಮೂಲದವರು ಆಗಿದ್ದು 150ಕ್ಕೂ ಹೆಚ್ಚು ಜನರು ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಪೊಲೀಸರು ರೇಡ್ ಮಾಡಿದಾಗ ಪಾರ್ಟಿಯಲ್ಲಿ ಭಾಗಿಯಾದ 130 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೂ ಶ್ರೀರಾಮಗೂ ನಂಟು.. ಈ ಕೊದಂಡ ರಾಮ ಚಂದ್ರ ದೇವಾಲಯದ ವಿಶೇಷತೆ ಏನು?
/filters:format(webp)/newsfirstlive-kannada/media/media_files/2025/11/01/rmg_rave_party_1-2025-11-01-09-07-08.jpg)
ಸದ್ಯ ಬಂಧಿತರನ್ನು ಮೆಡಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಮಧ್ಯರಾತ್ರಿ 3 ಗಂಟೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆರೋಪ ಇರುವ ಕಾರಣ ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲರಿಗೂ ಮೆಡಿಕಲ್ ಟೆಸ್ಟ್ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us