/newsfirstlive-kannada/media/media_files/2025/11/01/ckm_rama_temple-2025-11-01-08-37-45.jpg)
ಕನ್ನಡವೆಂದರೆ ಬರೀ ನುಡಿಯಲ್ಲ, ಹಿರಿದಿದೆ ಅದರರ್ಥ. ಜಲವೆಂದರೆ ಕೇವಲ ನೀರಲ್ಲ, ಅದು ಪಾವನದ ತೀರ್ಥ ಅನ್ನೋ ಕವಿವಾಣಿಗೆ ಸಾಕ್ಷಿಯಾಗಿದೆ ಈ ದೇವಾಲಯ. ನಿತ್ಯವೂ ಇಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಬರೋ ಭಕ್ತರಿಗೂ ಕೇಳಿಸೋದು ಕನ್ನಡದ ಮಂತ್ರ ಘೋಷ, ಕನ್ನಡದಿಂದಲೇ ವರ್ಷವೆಲ್ಲ ಪೂಜೆ ಪಡೆಯೋ ರಾಮನ ದೇಗುಲವಿದು.
/filters:format(webp)/newsfirstlive-kannada/media/media_files/2025/11/01/ckm_rama_temple_2-2025-11-01-08-38-54.jpg)
ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ರಾಮನ ದೇವಾಲಯ ಎಂದೇ ಕರೆಯಲ್ಪಡೋ ಕೊದಂಡರಾಮಚಂದ್ರ ದೇವಾಲಯ. ಕಾಫಿನಾಡಿನ ಹಿರೇಮಗಳೂರಿನಲ್ಲಿರೋ ಕೊದಂಡ ರಾಮಚಂದ್ರ ದೇವಾಲಯಕ್ಕೆ ಸಾವಿರಾರು ವರ್ಷದ ಇತಿಹಾವಿದೆ. ಅದ್ರಲ್ಲಿಯೂ 4 ದಶಕಗಳಿಂದ ಇಲ್ಲಿ ನಿತ್ಯವೂ ಕನ್ನಡದ ಕಂಪನ್ನು ಪಸರಿಸಲಾಗುತ್ತಿದೆ. ಕೊದಂಡ ರಾಮ ಚಂದ್ರಸ್ವಾಮಿಗೆ ಕೈಮುಗಿದು ಬರೋ ಭಕ್ತರಿಗೆ ಇಲ್ಲಿ ಕೇಳಿಸೋದು ಕನ್ನಡ ಮಂತ್ರಘೋಷಗಳು. ಕನ್ನಡದಿಂದಲೇ ಪೂಜೆ ಪಡೆಯೋ ರಾಜ್ಯದ ಏಕೈಕ ದೇವಾಲಯವಿದು. ಕನ್ನಡ ಮಂತ್ರವನ್ನು ಬಂದಿರೋ ಭಕ್ತರು ರಾಮನ ಮುಂದೆ ಜಪಿಸುತ್ತಾರೆ.
ಕನ್ನಡ ಪೂಜೆ, ಕನ್ನಡ ಮಂತ್ರ
ಇನ್ನೂ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯೇ ಕಲೆ, ಸಾಹಿತ್ಯ, ಸಾಂಸ್ಕೃತಿಕಕ್ಕೆ ಹೆಸ್ರುವಾಸಿ ಅದ್ರ ಜೊತೆಯಲ್ಲಿ ಕನ್ನಡದಿಂದಲೇ ಪೂಜೆ ಪಡೆಯೋ ಕೊದಂಡರಾಮಚಂದ್ರಸ್ವಾಮಿ ದೇವಾಲಯ ಕರುನಾಡಿನಲ್ಲಿಯೇ ಚಿರಪರಿತವಾಗಿದೆ. ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡ ಪೂಜೆಯನ್ನು ನಡೆಸಲಾಗುತ್ತಿದೆ. ಈ ವರ್ಷದಿಂದ ಹಿರೇಮಗಳೂರು ಕಣ್ಣನ್ ಕೇವಲ ದೇವಸ್ಥಾನವಲ್ಲದೆ ಮನೆ ಮನೆಗಳಲ್ಲಿಯೂ ಕನ್ನಡ ಪೂಜೆ ಮಾಡಲು ಕನ್ನಡ ಮಂತ್ರ ಕಲಿಸೋಕೆ ಮುಂದಾಗಿದ್ದಾರೆ.
ಈಗಾಗಲೇ ಮಹಿಳಾ ಸಂಘದಿಂದ ಕನ್ನಡ ಮಂತ್ರ ಪಠಣೆ ಪ್ರಾರಂಭವಾಗಿದ್ದು, ಅವರವ ಮನೆಯಲ್ಲಿ ಕನ್ನಡದಿಂದಲೇ ಪೂಜೆ ಸಲ್ಲಿಸಲಾಗುತ್ತಿದೆ. ಮುಂದಿನ ವರ್ಷದೊಳಗೆ ಕಾಫಿನಾಡಲ್ಲಿ ಕನ್ನಡ ಮಂತ್ರ ಜಪ ಮನೆ ಮನೆಯಲ್ಲಿ ಮೊಳಗಲಿದೆ.
ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿ; ಕುವೆಂಪು ಸೇರಿ ಇದುವರೆಗೆ ಯಾಱರಿಗೆ ನೀಡಿ ಗೌರವಿಸಲಾಗಿದೆ..?
/filters:format(webp)/newsfirstlive-kannada/media/media_files/2025/11/01/ckm_rama_temple_1-2025-11-01-08-39-10.jpg)
ವರ್ಷಪೂರ್ತಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವಂತೆ ಪ್ರತಿ ನಿತ್ಯವೂ ಕನ್ನಡದ ಮಂತ್ರಘೋಷದೊಂದಿಗೆ ಕೊದಂಡರಾಮಚಂದ್ರಸ್ವಾಮಿಗೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ನಾಡು ನುಡಿಯನ್ನು ಉಳಿಸೋಕೆ ಇಂತಹದ್ದೇ ಪ್ರಯತ್ನ ಕರ್ನಾಟಕದಲ್ಲಿ ನಡೆಸಿದ್ರೆ ಕನ್ನಡ ಮಯವಾಗಿರೋದ್ರಲ್ಲಿ ಯಾವುದೇ ಸಂಶಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us