Advertisment

ಒಂದು ಅರ್ಧ ಶತಕ.. ಒಂದೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಕೊಟ್ಟ ಸಂದೇಶಗಳು ಎಷ್ಟು..?

ಕೊಹ್ಲಿಯ ಒಂದೇ ಒಂದು ಇನ್ನಿಂಗ್ಸ್​ನಿಂದ ತಿಂಗಳಿಂದ ಇದ್ದ ಟೀಕೆಗಳೆಲ್ಲಾ ಕೊಚ್ಚಿ ಹೋಗಿವೆ. ರಿಟೈರ್​ಮೆಂಟ್​ನ ರೂಮರ್ಸ್​ಗೆ ಫುಲ್​ ಸ್ಟಾಫ್​ ಬಿದ್ದಿದೆ. ಗ್ರೇಟೆಸ್ಟ್​ ಬ್ಯಾಟ್ಸ್​ಮನ್​ ಅನ್ನೋ ಪಟ್ಟವೂ ದಕ್ಕಿದೆ. ಸಿಡ್ನಿಯಲ್ಲಿ ಸಿಡಿದೆದ್ದ ಕೊಹ್ಲಿ ಹಾಫ್​ ಸೆಂಚುರಿ ಇನ್ನಿಂಗ್ಸ್​ನಿಂದ ನೀಡಿದ ಸಂದೇಶವೇನು?

author-image
Ganesh Kerekuli
VIRAT_KOHLI_AUS (1)
Advertisment

ಆಡಿದ್ದು 3 ಪಂದ್ಯ. ಅದ್ರಲ್ಲಿ 2 ಮ್ಯಾಚ್​ನಲ್ಲಿ ಡಕೌಟ್​.. ಪರ್ತ್​​ನಲ್ಲಿ ಫೇಲ್​​​.. ಅಡಿಲೇಡ್​​ ಅಟ್ಟರ್​​ಫ್ಲಾಪ್​.. ಸಿಡ್ನಿಯಲ್ಲಿ ನಡೆದ 3ನೇ ಮ್ಯಾಚ್​​ನಲ್ಲಿ ಸೃಷ್ಟಿಯಾಗಿದ್ದು ಇತಿಹಾಸ. ಮಾಡ್ರನ್​ ಡೇ ಮಾಸ್ಟರ್​ ಬ್ಯಾಟ್​ನಿಂದ ಬಂದ ಒಂದು ಇನ್ನಿಂಗ್ಸ್​ ಸದ್ಯದ ಸೆನ್ಸೇಷನ್​.

Advertisment

ಕಳಪೆ ಆಟದ ಬಗ್ಗೆ ಟೀಕೆ, ಸಾಮರ್ಥ್ಯದ ಬಗ್ಗೆ ಪ್ರಶ್ನೆ, ರಿಟೈರ್​ಮೆಂಟ್​ನ ಸುದ್ದಿ.  ಕಳೆದೊಂದು ತಿಂಗಳಿಂದ ವಿರಾಟ್​ ಕೊಹ್ಲಿ ಕರಿಯರ್​ ಹೆಡ್​​ಲೈನ್​ ಆಗಿತ್ತು. ಕಾಂಗರೂ ನಾಡಲ್ಲಿ ಮೊದಲ 2 ಪಂದ್ಯದಲ್ಲಿ ಪ್ಲಾಪ್​ ಆದ ಬಳಿಕ ಕೊಹ್ಲಿ ಕರಿಯರ್​​​ ಖತಂ ಎಂದೇ ಹೇಳಲಾಗಿತ್ತು. ಕಿಂಗ್​ ಕೊಹ್ಲಿ ಒಂದೇ ಒಂದು ಇನ್ನಿಂಗ್ಸ್​ನಿಂದ ಎಲ್ಲಾ ಅಂಗಡಿ ಬಂದ್​ ಮಾಡಿದ್ದಾರೆ. ಸಿಡ್ನಿಯಲ್ಲಿ ಸಿಡಿದೆದ್ದ ಕೊಹ್ಲಿಯ ವಿರಾಟರೂಪಕ್ಕೆ ಕಾಂಗರೂಗಳು ಕಂಗಾಲಾದ್ರೆ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. 

ಅಸಲಿ ಆಟ ಈಗ ಶುರು

ಸಿಡ್ನಿ ಕ್ರಿಕೆಟ್​ ಸ್ಟೇಡಿಯಂ.. ಇಂಡೋ-ಆಸಿಸ್​ 3ನೇ ಏಕದಿನಕ್ಕೂ ಮುನ್ನ ಕೊಹ್ಲಿ ಪಾಲಿನ್​ ಅನ್​ಲಕ್ಕಿ ಗ್ರೌಂಡ್​ ಆಗಿತ್ತು. ಈ ಮೈದಾನದಲ್ಲೇ ಡು ಆರ್​​ ಡೈ ಪಂದ್ಯದಲ್ಲಿ ಅಖಾಡಕ್ಕಿಳಿದ ಕೊಹ್ಲಿ ಅದೃಷ್ಟ ಲೆಕ್ಕಾಚಾರವನ್ನ ಅದಲು ಬದಲು ಮಾಡಿದ್ರು. ಕಾನ್ಫಿಡೆಂಟ್​ ಇನ್ನಿಂಗ್ಸ್​ನಿಂದಲೇ ಕಾಂಗರೂಗಳನ್ನ ಬೇಟೆಯಾಡಿ ಹಾಫ್​ ಸೆಂಚುರಿ ಸಿಡಿಸಿದ್ರು. ಜೊತೆಗೆ ನನ್ನ ಆಟ ಇನ್ನೂ ಮುಗಿದಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಓರ್ವ ಸ್ಟಾರ್​ ಆಟಗಾರನ ಬಿಟ್ಟುಕೊಡಲು RCB ರೆಡಿ.. ಬಿಗ್​ ಕ್ಯಾಶ್ ಡೀಲ್..!

Advertisment

Virat kohli (1)

ಡೌಟೇ ಬೇಡ.. ಏಕದಿನ ಕ್ರಿಕೆಟ್ ಇತಿಹಾಸದ ಗ್ರೇಟೆಸ್ಟ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿನೇ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಅಜೇಯ 74 ರನ್​ಗಳ ಇನ್ನಿಂಗ್ಸ್​ ಕಟ್ಟಿದ ವಿರಾಟ್​ ಕೊಹ್ಲಿ ಹಲವು ದಾಖಲೆಗಳನ್ನೂ ಬರೆದ್ರು. ಒನ್​ ಡೇ ಫಾರ್ಮೆಟ್​ನಲ್ಲಿ ಸೆಕೆಂಡ್​ ಹೈಯೆಸ್ಟ್​ ಸ್ಕೋರರ್​ ಆಗಿ ಹೊರಗೊಮ್ಮಿದ್ರು. ಕೊಹ್ಲಿ ಯಾಕೆ ಗ್ರೇಟ್​ ಬ್ಯಾಟ್ಸ್​ಮನ್​ ಅನ್ನೋದಕ್ಕೆ ಸಂಗಾಕ್ಕರನ ಹಿಂದಿಕ್ಕಿ ಕೊಹ್ಲಿ 2ನೇ ಸ್ಥಾನಕ್ಕೇರಿದ ಈ ಒಂದು ದಾಖಲೆ ಸಾಕು. ಹೈಯೆಸ್ಟ್​ ರನ್​ ಗೆಟರ್​ ಲಿಸ್ಟ್​ನಲ್ಲಿ ಟಾಪ್​ 5 ಸ್ಥಾನದಲ್ಲಿರೋ ಆಟಗಾರರ ಇನ್ನಿಂಗ್ಸ್​​ಗೂ ಕೊಹ್ಲಿ ಇನ್ನಿಂಗ್ಸ್​ಗೂ ಅಷ್ಟು ವ್ಯತ್ಯಾಸವಿದೆ. 

ODI ಮಾದರಿಯಲ್ಲಿ ಹೆಚ್ಚು ರನ್​ 

ಏಕದಿನ ಮಾದರಿಯಲ್ಲಿ 452 ಇನ್ನಿಂಗ್ಸ್​ಗಳಲ್ಲಿ 18426 ರನ್​ಗಳಿಸಿರೋ ಸಚಿನ್​ ತೆಂಡುಲ್ಕರ್​ ಹೈಯೆಸ್ಟ್​ ರನ್​ ಗೆಟರ್​ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೇವಲ 293 ಇನ್ನಿಂಗ್ಸ್​ನಿಂದ 14255 ರನ್​ಗಳಿಸಿದ ಕೊಹ್ಲಿ 2ನೇ ಸ್ಥಾನಕ್ಕೆ ಬಂದಿದ್ದಾರೆ. 14234 ರನ್​ಗಳಿಸೋಕೆ ಸಂಗಾಕ್ಕರ್​ ತೆಗೆದುಕೊಂಡಿದ್ದಿದ್ದು ಬರೋಬ್ಬರಿ 380 ಇನ್ನಿಂಗ್ಸ್​ಗಳನ್ನ. ಇನ್ನು ರಿಕಿ ಪಾಂಟಿಂಗ್​ 13704 ರನ್​ಗಳಿಸೋಕೆ 365 ಇನ್ನಿಂಗ್ಸ್​ ತೆಗೆದುಕೊಂಡ್ರೆ, ಸನತ್​​ ಜಯಸೂರ್ಯ 13430 ರನ್​ಗಳಿಸೋಕೆ 433 ಇನ್ನಿಂಗ್ಸ್​ ತೆಗೆದುಕೊಂಡಿದ್ರು. 

ತಮಾಷೆಗೆ ಹೀಗೊಂದು ಚರ್ಚೆ ನಡೀತಿದೆ. ಚೇಸಿಂಗ್​ ಅಂತ ಬಂದ್ರ ವಿರಾಟ್​ ಕೊಹ್ಲಿ ಬ್ಯಾಟಿಂಗ್​​ ಶೈಲಿಯೇ ಬದಲಾಗುತ್ತೆ. ಕ್ಯಾಲ್ಕ್ಯುಲೇಟೆಡ್​​ ಇನ್ನಿಂಗ್ಸ್​ ಕಟ್ಟೋದ್ರಲ್ಲಿ ಕೊಹ್ಲಿ ಅಂತಾ ಒಬ್ಬ ಬ್ಯಾಟ್ಸ್​ಮನ್​ ಬಂದಿಲ್ಲ.. ಬರೋದೂ ತುಂಬಾ ಕಷ್ಟ ಬಿಡಿ. ಮೊದಲೆರಡು ಪಂದ್ಯಗಳಲ್ಲಿ ಡಕೌಟ್​ ಆಗಿದ್ರೂ ಕೂಡ ಸಿಡ್ನಿಯಲ್ಲಿ ಬ್ಯಾಟಿಂಗ್​ಗೆ ಬಂದಾಗ ಕೊಹ್ಲಿ ಫುಲ್​ ಕಾನ್ಫಿಡೆಂಟ್​ ಆಗಿದ್ರು. ಮೊದಲ ಎಸೆತದಲ್ಲೇ ಅಕೌಂಟ್​ ಓಪನ್​ ಮಾಡಿದ್ರು. ಅದೆಷ್ಟೇ ಒತ್ತಡ ಇರಲಿ. ಚೇಸಿಂಗ್​ ಅಂತಾ ಬಂದ್ರೆ ಕೊಹ್ಲಿ ಸಲೀಸಾಗಿ ರನ್​ಗಳಿಸ್ತಾರೆ. ಅದ್ಕೆ ಅಲ್ವಾ ಚೇಸ್​ ಮಾಸ್ಟರ್​ ಅನ್ನೋದು. 

Advertisment

ಇದನ್ನೂ ಓದಿ: ಟೀಂ ಇಂಡಿಯಾಗೆ ಕೊಂಚ ಸಮಾಧಾನದ ಸುದ್ದಿ.. ICU ನಿಂದ ಅಯ್ಯರ್​ ವಾರ್ಡ್​ಗೆ ಶಿಫ್ಟ್

VIRAT_KOHLI_ROHIT

ಸಿಡ್ನಿಯಲ್ಲೂ ಸಾಲಿಡ್​​ ಇನ್ನಿಂಗ್ಸ್​ ಕಟ್ಟಿದ ಕೊಹ್ಲಿ ಚೇಸಿಂಗ್​ನಲ್ಲೂ ಹಲವು ದಾಖಲೆ ಬರೆದ್ರು. ಅದ್ರಲ್ಲಿ ಒಂದು ಹೈಯೆಸ್ಟ್​ ಹಾಫ್ ಸೆಂಚುರಿ ರೆಕಾರ್ಡ್​. ರನ್​ ಚೇಸಿಂಗ್​ ವೇಳೆ ಅತಿ ಹೆಚ್ಚು ಹಾಫ್​ ಸೆಂಚುರಿ ಸಿಡಿಸಿದ ಬ್ಯಾಟರ್​ ಎಂಬ ದಾಖಲೆ ಈಗ ಕೊಹ್ಲಿ ಹೆಸರಿಗೆ ಬಂದಿದೆ. ಈ ಸಾಧನೆ ಮಾಡೋಕೆ ಕೊಹ್ಲಿ ತೆಗೆದುಕೊಂಡಿರೋದು ಕೇವಲ 161 ಇನ್ನಿಂಗ್ಸ್​ಗಳನ್ನ. ಇದಕ್ಕೂ ಮುನ್ನ ದಾಖಲೆ ಸಚಿನ್​ ಹೆಸರಲ್ಲಿತ್ತು. ಸಚಿನ್​ ಇದಕ್ಕೆ ತೆಗೆದುಕೊಂಡಿದ್ದಿದ್ದು 232 ಇನ್ನಿಂಗ್ಸ್​ಗಳನ್ನ..

ಇದೇ ವೇಳೆ ಚೇಸಿಂಗ್​ನಲ್ಲಿ 6 ಸಾವಿರ ರನ್ ಪೂರೈಸಿ ಸಾಧನೆ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಸಾಧನೆ, ಆಸ್ಟ್ರೇಲಿಯಾದ ಟಫ್​ ಕಂಡಿಷನ್ಸ್​ನಲ್ಲಿ 50+ ಸರಾಸರಿ ಕಾಯ್ದುಕೊಂಡ ದಾಖಲೆ ಎಲ್ಲವನ್ನೂ ಕೊಹ್ಲಿ ಬರೆದಿದ್ದಾರೆ. ಸಾಲಿಡ್​ ಅರ್ಧಶತಕ ಸಿಡಿಸಿ ರೆಕಾರ್ಡ್ಸ್​ ಪೀಸ್​ ಪೀಸ್​ ಮಾಡಿ ನನ್ನ ಆಟ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನೂ ಸಾರಿದ್ದಾರೆ. ಕೊಹ್ಲಿ ಕತೆ ಮುಗಿಸೋಕೆ ಹೊರಟಿದ್ದ ಕೆಲವರು ಕೂಡ ಸೈಲೆಂಟಾಗಿದ್ದಾರೆ.

Advertisment

ಇದನ್ನೂ ಓದಿ: ಗಡಿನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ VN ರೆಡ್ಡಿ ನಿಧನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kohli Virat Kohli
Advertisment
Advertisment
Advertisment