Advertisment

ಓರ್ವ ಸ್ಟಾರ್​ ಆಟಗಾರನ ಬಿಟ್ಟುಕೊಡಲು RCB ರೆಡಿ.. ಬಿಗ್​ ಕ್ಯಾಶ್ ಡೀಲ್..!

2026ರ ಐಪಿಎಲ್ ಸೀಸನ್-19ರ ಟ್ರೇಡ್ ವಿಂಡೋ, ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಮಿನಿ ಆಕ್ಷನ್​​​​​​​​ಗೆ ಸಿದ್ಧತೆ ನಡೆಸಿಕೊಳ್ತಿರುವ ಫ್ರಾಂಚೈಸಿಗಳು, ಸೂಪರ್​ಸ್ಟಾರ್ ಆಟಗಾರರಿಗೆ ಗಾಳ ಹಾಕಲು ಮುಂದಾಗಿವೆ. ನವೆಂಬರ್ 15ಕ್ಕೆ ರಿಟೆನ್ಶನ್​​​​​ ಡೆಡ್​ಲೈನ್ ಆಗಿರೋದ್ರಿಂದ ಮಾಲೀಕರು ಫುಲ್ ಬಿಸಿ ಆಗಿದ್ದಾರೆ.

author-image
Ganesh Kerekuli
RCB_TEAM (1)
Advertisment

2026ರ ಐಪಿಎಲ್ ಸೀಸನ್-19ರ ಟ್ರೇಡ್ ವಿಂಡೋ, ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಮಿನಿ ಆಕ್ಷನ್​​​​​​​​ಗೆ ಸಿದ್ಧತೆ ನಡೆಸಿಕೊಳ್ತಿರುವ ಫ್ರಾಂಚೈಸಿಗಳು, ಸೂಪರ್​ಸ್ಟಾರ್ ಆಟಗಾರರಿಗೆ ಗಾಳ ಹಾಕಲು ಮುಂದಾಗಿವೆ. ನವೆಂಬರ್ 15ಕ್ಕೆ ರಿಟೆನ್ಶನ್​​​​​ ಡೆಡ್​ಲೈನ್ ಆಗಿರೋದ್ರಿಂದ ಮಾಲೀಕರು ಫುಲ್  ಬಿಸಿ ಆಗಿದ್ದಾರೆ. ಟ್ರೇಡ್ ವಿಂಡೋದಲ್ಲಿ ಯಾವೆಲ್ಲಾ ಆಟಗಾರರು ಸೌಂಡ್ ಮಾಡ್ತಿದ್ದಾರೆ ಅನ್ನೋ ವಿವರ ಇಲ್ಲಿದೆ. 

Advertisment

ಕ್ಯಾಶ್ ಡೀಲ್.. ಪ್ಲೇಯರ್ ಫಾರ್ ಪ್ಲೇಯರ್​ ಎಕ್ಸ್​ಚೇಂಜ್.. ಪರ್ಸ್ ಅಡ್ಜೆಸ್ಟ್​ಮೆಂಟ್.. ಸೆಟಲ್​ಮೆಂಟ್.. ಇವೆಲ್ಲವೂ ಐಪಿಎಲ್ ಸೀಸನ್-19ರ ಟ್ರೇಡ್ ವಿಂಡೋದಲ್ಲಿ ಸಾಮಾನ್ಯ. ಆದ್ರೆ ವಿಂಡೋ ಟ್ರೇಡ್​​ನಲ್ಲಿ ಯಾವ ತಂಡ, ಸ್ಮಾರ್ಟ್​​​​ ಟ್ರೇಡ್ ಌಂಡ್ ಬೈ ಮಾಡುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಇಲ್ಲಿ ಗೆಲ್ಲೋದು ಲೆಕ್ಕಾಚಾರವಲ್ಲ. ಸ್ಮಾರ್ಟ್ ಮೂವ್ ಅಷ್ಟೇ. ಸದ್ಯ ಎಲ್ಲಾ ಹತ್ತು ಫ್ರಾಂಚೈಸಿಗಳು, ವಿಂಡೋ ಟ್ರೇಡ್​ನಲ್ಲಿ ಆಸಕ್ತಿ ತೋರುತ್ತಿದೆ. ಹಾಗಾಗಿ ವಿಂಡೋ ಟ್ರೇಡ್​​​​​​​, ಹೆಚ್ಚು ಮಹತ್ವದ ಪಡೆದುಕೊಂಡಿದೆ.

ಕೀಪರ್ ಇಶಾನ್ ಕಿಶನ್ ವಾಪಸ್..?

ಮುಂಬೈ ಇಂಡಿಯನ್ಸ್ ತಂಡದಿಂದ ಸನ್​ರೈಸರ್ಸ್​ ಹೈದ್ರಾಬಾದ್ ತಂಡಕ್ಕೆ ಸೇಲಾಗಿದ್ದ ಯಂಗ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೇಲೆ ಮುಂಬೈ ಇಂಡಿಯನ್ಸ್ ಮತ್ತೆ ಆಸಕ್ತಿ ತೋರುತ್ತಿದೆ. ಸದ್ಯ ಕ್ಯಾಶ್ ಡೀಲ್ ಮೂಲಕ ಇಶಾನ್ ಕಿಶನ್​ರನ್ನ ಬೈ ಮಾಡಲು ಉತ್ಸುಕತೆ ತೋರುತ್ತಿರುವ ಮುಂಬೈ ಜೊತೆಗೆ ಕೊಲ್ಕತ್ತಾ ನೈಟ್​ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸಹ ಇಶಾನ್ ಕಿಶನ್ ಖರೀದಿಯಲ್ಲಿ ಆಸಕ್ತಿ ತೋರುತ್ತಿದೆ.

ಇದನ್ನೂ ಓದಿ:IND vs AUS; ಶ್ರೇಯಸ್​ ಅಯ್ಯರ್​ ಆರೋಗ್ಯ ಇನ್ನಷ್ಟು ಗಂಭೀರ.. ICU ನಲ್ಲಿ ವೈದ್ಯರಿಂದ ಚಿಕಿತ್ಸೆ!

Advertisment

RCB (38)

ಆರ್.ಅಶ್ವಿನ್ ನಿವೃತ್ತಿಯ ನಂತರ ಚೆನ್ನೈ ಸೂಪರ್​ಕಿಂಗ್ಸ್​ ಯುವ ಆಫ್ ಸ್ಪಿನ್ನರ್ ಹುಡುಕಾಟದಲ್ಲಿದೆ. ಗುಜರಾತ್ ಟೈಟನ್ಸ್ ತಂಡದಲ್ಲಿರುವ ತಮಿಳುನಾಡಿನ ವಾಶಿಂಗ್ಟನ್ ಸುಂದರ್ ಮೇಲೆ, ಸಿಎಸ್​ಕೆ ಕಣ್ಣಿಟ್ಟಿದೆ. ಕ್ಯಾಶ್ ಡೀಲ್ ಅಥವಾ ಪ್ಲೇಯರ್ ಫಾರ್ ಪ್ಲೇಯರ್ ಎಕ್ಸ್​ಚೇಂಜ್​ ಆಫರ್​ನಲ್ಲಿ, ಸುಂದರ್​ರನ್ನ ಚೆನ್ನೈ ಸೂಪರ್​ಕಿಂಗ್ಸ್​ಗೆ ಕರೆತರಲು ಪ್ರಯತ್ನ ನಡೆಸಲಿದೆ. 

ಲಿವಿಂಗ್​ಸ್ಟೋನ್ ಬಿಡಲು RCB​ ರೆಡಿ

ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್​ರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಿಲೀಸ್ ಮಾಡುವ ಮನಸು ಮಾಡ್ತಿದೆ. ಬಲಿಷ್ಠ ಮಿಡಲ್ ಆರ್ಡರ್ ಕಟ್ಟಲು ಹೊರಟಿರುವ ಆರ್​ಸಿಬಿ, ರಿಲೀಸ್ ಅಥವಾ ಟ್ರೇಡಿಂಗ್ ಮೂಲಕ ಮತ್ತೋರ್ವ ಆಟಗಾರನನ್ನ ಕರೆತರಲು ಮುಂದಾಗಿದೆ. ಆಲ್​ರೌಂಡರ್​ಗಳ ಹುಡುಕಾಟಲ್ಲಿರುವ ಮುಂಬೈ ಮತ್ತು ಲಕ್ನೋ ಫ್ರಾಂಚೈಸಿ, ಲಿವಿಂಗ್​ಸ್ಟೋನ್​ ಖರೀದಿ ಮಾಡಿದ್ರೂ ಅಚ್ಚರಿ ಇಲ್ಲ.

ಇದನ್ನೂ ಓದಿ:IPL 2026; ಮುಂಬೈ ಟೀಮ್​ನಿಂದ ಒಬ್ಬರಲ್ಲ, ಇಬ್ಬರಲ್ಲ 9 ಪ್ಲೇಯರ್ಸ್​ಗೆ ಗೇಟ್​ಪಾಸ್.. ರೋಹಿತ್, ಪಾಂಡ್ಯ?

Advertisment

rcb cares

ಕಳೆದ ಐಪಿಎಲ್ ಟೂರ್ನಿ, ಗ್ಲೇನ್ ಮ್ಯಾಕ್ಸ್​ವೆಲ್ ಪಾಲಿಗೆ ಕಾರಾಳ ಸೀಸನ್ ಆಗಿತ್ತು. ಫ್ಲಾಪ್ ಶೋ ನೀಡಿದ್ದ ಮ್ಯಾಕ್ಸ್​ವೆಲ್ ರೀಪ್ಲೇಸ್​​ಮೆಂಟ್​​ಗೆ ಪಂಜಾಬ್ ಕಿಂಗ್ಸ್​ ಹುಡುಕಾಟದಲ್ಲಿದೆ. ರಿಲೀಸ್ ಅಥವಾ ಟ್ರೇಡಿಂಗ್​​ಗೆ ಮುಂದಾಗಿರುವ ಮ್ಯಾಕ್ಸಿಗೆ ಗಾಳ ಹಾಕಲು, ಸಿಎಸ್​​ಕೆ ಮುಂದಾಗಿದೆ. ಚೆನ್ನೈನ ಸ್ಪಿನ್​​ ಫ್ರೆಂಡ್ಲಿ ಟ್ರ್ಯಾಕ್​​ಗೆ, ಮ್ಯಾಕ್ಸಿ ಸೂಟ್ ಆಗ್ತಾರೆ. ಹಾಗಾಗಿ ಸಿಎಸ್​​ಕೆ ಮ್ಯಾಕ್ಸ್​​ವೆಲ್ ಖರೀದಿಗೆ ಆಸಕ್ತಿ ತೋರುತ್ತಿದೆ. ಗುಜರಾತ್ ಟೈಟನ್ಸ್ ಸಹ ಮ್ಯಾಕ್ಸಿ ಖರೀದಿಯ ಕುರಿತು ಮಾನೀಟರ್ ಮಾಡ್ತಿದೆ.

ವೆಂಕಟೇಶ್ ಅಯ್ಯರ್​​ಗಾಗಿ RCB , ಹೈದ್ರಾಬಾದ್ ಫೈಟ್

ದುಬಾರಿ ಆಲ್​ರೌಂಡರ್ ವೆಂಕಟೇಶ್ ಅಯ್ಯರ್​​​​​​​​​​​​ರನ್ನ ಟ್ರೇಡ್ ಮಾಡಲು, ಕೊಲ್ಕತ್ತಾ ನೈಟ್​ರೈಡರ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮಾತುಕಥೆ ನಡೆಯುತ್ತಿದೆ. ವೆಂಕಟೇಶ್ ಅಯ್ಯರ್​​ರನ್ನ ಆರ್​ಸಿಬಿಗೆ ನೀಡಿ, ಲಿವಿಂಗ್​ಸ್ಟೋನ್​ರನ್ನ ಕೆಕೆಆರ್​ಗೆ ನೀಡುವ ಕುರಿತು ಹೈವೋಲ್ಟೇಚ್ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಸನ್​ರೈಸರ್ಸ್​ ಹೈದ್ರಾಬಾದ್ ತಂಡ ಸಹ ಟ್ರೇಡಿಂಗ್ ಕುರಿತು​ ಮಾತುಕತೆಯಲ್ಲಿ ತೊಡಗಿರೋದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.  

ಇದನ್ನೂ ಓದಿ: ಹರ್ಷಿತ್ ರಾಣಾರನ್ನ ತಂಡದಿಂದ ಕೈಬಿಡಲ್ಲ, ಒಂದು ಷರತ್ತು ಇದೆ -ಗಿಲ್ ಅಚ್ಚರಿ ಹೇಳಿಕೆ

Advertisment

liam livingstone

ಇದೆಲ್ಲದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್​ನ ಕೆ.ಎಲ್.ರಾಹುಲ್ ಮತ್ತು ರಾಜಸ್ಥಾನ್ ರಾಯಲ್ಸ್​ನ ಸಂಜು ಸ್ಯಾಮ್ಸನ್ ಟ್ರ್ಯಾನ್ಸ್​ಫರ್ ಡ್ರಾಮಾ, ಸದ್ಯ ನಿಲ್ಲುವಂತೆ ಕಾಣ್ತಿಲ್ಲ. ವಿಂಡೋ ಟ್ರೇಡಿಂಗ್​ಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿರೋದ್ರಿಂದ ಫ್ರಾಂಚೈಸಿ ಮಾಲೀಕರು ಲೆಕ್ಕಾಚಾರದೊಂದಿಗೆ ಆಟಗಾರರ ಖರೀದಿಯಲ್ಲಿ ಮುಳುಗಿದ್ದಾರೆ. ಯಾವ ತಂಡ ಸ್ಮಾರ್ಟ್ ಟ್ರೇಡ್ ಮಾಡಲಿದೆ, ಯಾವ ತಂಡ ಗುಡ್​​​​ ಬೈ ಮಾಡಲಿದೆ ಅನ್ನೋದು, ಕೆಲವೇ ದಿನಗಳಲ್ಲಿ ತಿಳಿಯಲಿದೆ. 

ಇದನ್ನೂ ಓದಿ: ಹರ್ಷಿತ್ ರಾಣಾರನ್ನ ತಂಡದಿಂದ ಕೈಬಿಡಲ್ಲ, ಒಂದು ಷರತ್ತು ಇದೆ -ಗಿಲ್ ಅಚ್ಚರಿ ಹೇಳಿಕೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Phil Salt RCB Liam Livingstone RCB
Advertisment
Advertisment
Advertisment