Advertisment

ಹರ್ಷಿತ್ ರಾಣಾರನ್ನ ತಂಡದಿಂದ ಕೈಬಿಡಲ್ಲ, ಒಂದು ಷರತ್ತು ಇದೆ -ಗಿಲ್ ಅಚ್ಚರಿ ಹೇಳಿಕೆ

ಟೀಂ ಇಂಡಿಯಾದ ವೇಗಿ ಹರ್ಷಿತ್ ರಾಣಾ ಅವರನ್ನು ಕೈಬಿಡುವ ಸಾಧ್ಯತೆ ಇಲ್ಲ. ಆದರೆ ಅವರಿಗೆ ಒಂದು ಷರತ್ತು ಇದೆ. ಅದು ಏನೆಂದರೆ, 8 ಸ್ಥಾನದಲ್ಲಿ ಬ್ಯಾಟಿಂಗ್ ಬಂದು 20 ರಿಂದ 25 ರನ್​ಗಳ ಕಾಣಿಕೆ ನೀಡಬೇಕು ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಶುಬ್ಮನ್ ಗಿಲ್ ಹೇಳಿದ್ದಾರೆ.

author-image
Ganesh Kerekuli
Shubman Gill and Harshit Rana
Advertisment

ಟೀಂ ಇಂಡಿಯಾದ ವೇಗಿ ಹರ್ಷಿತ್ ರಾಣಾ ಅವರನ್ನು ಕೈಬಿಡುವ ಸಾಧ್ಯತೆ ಇಲ್ಲ. ಆದರೆ ಅವರಿಗೆ ಒಂದು ಷರತ್ತು ಇದೆ. ಅದು ಏನೆಂದರೆ, 8 ಸ್ಥಾನದಲ್ಲಿ ಬ್ಯಾಟಿಂಗ್ ಬಂದು 20 ರಿಂದ 25 ರನ್​ಗಳ ಕಾಣಿಕೆ ನೀಡಬೇಕು ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಶುಬ್ಮನ್ ಗಿಲ್ ಹೇಳಿದ್ದಾರೆ.

Advertisment

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಬಳಿಕ ನಾಯಕ ಗಿಲ್, ಹರ್ಷಿತ್ ರಾಣಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹರ್ಷಿತ್ ರಾಣಾ ಬ್ಯಾಟಿಂಗ್‌ನಲ್ಲಿ 20 ರಿಂದ 25 ರನ್‌ಗಳ ಕೊಡುಗೆ ನೀಡಲು ಸಾಧ್ಯವಾದರೆ, ಅವರು ಭಾರತ ತಂಡವು ಎಂಟನೇ ಸ್ಥಾನಕ್ಕೆ ಹುಡುಕುತ್ತಿರುವ ಬೌಲಿಂಗ್ ಆಲ್‌ರೌಂಡರ್ ಆಗಬಹುದು ಎಂದಿದ್ದಾರೆ. 

ಇದನ್ನೂ ಓದಿ: ಗಿಲ್ಲಿ ನಗುವಿನ ಟಾನಿಕ್.. ಅಶ್ವಿನಿ ಮೇಲೆ ಕಾವ್ಯ ಬೆಂಕಿ ಕಿಡಿ.. ಬಿಗ್​ಬಾಸ್​ನಲ್ಲಿ ಇವತ್ತು ಏನೇನು..?

Shubman Gill

ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರಾಣಾ 4 ವಿಕೆಟ್ ಕಬಳಿಸಿ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ನಿತೀಶ್ ರೆಡ್ಡಿ ಗಾಯದ ಕಾರಣ ತಂಡದಿಂದ ಹೊರಗುಳಿದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರಾಣಾ 24 ರನ್ ಗಳಿಸಿದರು. 

Advertisment

ರಾಣಾ 20-25 ರನ್ ಗಳಿಸಿದ್ರೆ 8ನೇ ಸ್ಥಾನ ಖಚಿತ 

ಒಬ್ಬ ಬ್ಯಾಟ್ಸ್‌ಮನ್ ಎಂಟನೇ ಸ್ಥಾನದಲ್ಲಿ 20-25 ರನ್ ಗಳಿಸಿದರೆ ಅದು ನಮಗೆ ಬಹಳ ಮುಖ್ಯವಾದ ಸ್ಥಾನವಾಗಬಹುದು. ಹರ್ಷಿತ್ ರಾಣಾ ಅದನ್ನು ಮಾಡಬಹುದೆಂಬ ವಿಶ್ವಾಸವಿದೆ. 140 ಕ್ಕಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಎತ್ತರದ ಬೌಲರ್‌ಗಳು ಬಹಳ ಕಡಿಮೆ. ನಾವು ದಕ್ಷಿಣ ಆಫ್ರಿಕಾ ನೋಡಿದರೆ, ಅಂತಹ ವಿಕೆಟ್‌ಗಳಲ್ಲಿ ಅಂತಹ ಬೌಲರ್‌ಗಳು ಬಹಳ ಮುಖ್ಯವಾಗುತ್ತಾರೆ ಎಂದು ಗಿಲ್ ಹೇಳಿದ್ದಾರೆ. ಮಧ್ಯಮ ಓವರ್‌ಗಳಲ್ಲಿ, ಚೆಂಡು ವಿಕೆಟ್‌ನಿಂದ ಹೆಚ್ಚು ಚಲಿಸುವುದಿಲ್ಲ. ಆದ್ದರಿಂದ ನೀವು ಎತ್ತರ ಮತ್ತು ವೇಗವನ್ನು ಹೊಂದಿದ್ದರೆ ಅವಕಾಶಗಳನ್ನು ಸೃಷ್ಟಿಸಬಹುದು ಅನ್ನೋದು ಗಿಲ್ ಲೆಕ್ಕಾಚಾರ. 

ಇದನ್ನೂ ಓದಿ: ODI ಸರಣಿ ಸೋಲಿಗೆ ಕಾರಣ ಗಿಲ್​.. ಅಸಲಿ ಸತ್ಯ ಇಲ್ಲಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India Harshit Rana Shubman Gill
Advertisment
Advertisment
Advertisment