/newsfirstlive-kannada/media/media_files/2025/10/26/shubman-gill-2025-10-26-16-37-14.jpg)
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅಂತ್ಯಗೊಂಡಿದೆ. ಈ ಸರಣಿಗೂ ಮುನ್ನ ಬಿಸಿಸಿಐ ಟೀಂ ಇಂಡಿಯಾದ ಏಕದಿನ ತಂಡದ ನಾಯಕನ ಬದಲಾವಣೆ ಮಾಡಿತ್ತು. ಗಿಲ್​ಗೆ ಪಟ್ಟ ಕಟ್ಟಿ, ರೋಹಿತ್ ಶರ್ಮಾರನ್ನು ಕೆಳಗಿಳಿಸಿತ್ತು.
ಪರಿಣಾಮ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಸೋತಿತು ಸೋತಿತು. ಶುಭಮನ್ ಗಿಲ್ ಏಕದಿನ ತಂಡದ ನಾಯಕ ಸ್ಥಾನ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಸರಣಿ ಕಳೆದುಕೊಂಡರು. ಟೀಮ್ ಇಂಡಿಯಾ ಸರಣಿ ಸೋತರೂ, ರೋಹಿತ್ ಶರ್ಮಾರ ಅದ್ಭುತ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ನಾಯಕ ಗಿಲ್ ವಿಫಲ
ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಕ್ಯಾಪ್ಟನ್ ಶುಬ್ಮನ್ ಗಿಲ್. ಈ ಮೂರು ಪಂದ್ಯಗಳಲ್ಲಿ ಗಿಲ್ ಅವರ ಬ್ಯಾಟ್ ಮೌನವಾಗಿತ್ತು. ಗಿಲ್ ತಂಡಕ್ಕಾಗಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ಬಂದಷ್ಟೇ ಬೇಗ ಪೆವಿಲಿಯನ್​ ಸೇರಿಕೊಂಡರು. ಈ ಮೂರು ಪಂದ್ಯಗಳಲ್ಲಿ ಕನಿಷ್ಠ 50 ಗಳಿಸಲು ವಿಫಲರಾದರು.
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 8 ರನ್‌ಗಳಿಗೆ ಔಟಾದರು. ನಾಯಕ ಗಿಲ್ 18 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರು. ಪಂದ್ಯದ ಒಂಬತ್ತು ಓವರ್‌ಗಳಲ್ಲಿ ಗಿಲ್, ರೋಹಿತ್ ಮತ್ತು ಕೊಹ್ಲಿ ಸೇರಿದಂತೆ ಮೂರು ವಿಕೆಟ್‌ಗಳು ಪತನಗೊಂಡವು.
/filters:format(webp)/newsfirstlive-kannada/media/media_files/2025/10/26/kohli_rohit_aus-2025-10-26-12-39-16.jpg)
ಎರಡನೇ ODI ಪಂದ್ಯದಲ್ಲಿ ಭಾರತಕ್ಕೆ 266 ರನ್‌ಗಳ ಗುರಿ ಇತ್ತು. ನಾಯಕ ಗಿಲ್ ಈ ಪಂದ್ಯದಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರೂ, 26 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಕೇವಲ 24 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ನಾಯಕ ಗಿಲ್ ಮೂರು ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಿದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ತೋರಿಸಿದ ಪ್ರದರ್ಶನಕ್ಕೆ ಹೋಲುವ ಪ್ರದರ್ಶನವನ್ನು ತಂಡ ನಿರೀಕ್ಷಿಸಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ ಅವರನ್ನು ಭಾರತದ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಗಿಲ್ ಐದು ಟೆಸ್ಟ್ ಪಂದ್ಯಗಳಲ್ಲಿ 754 ರನ್ ಗಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us