Advertisment

ಗಂಭೀರ್ ಹಗೆತನ, ಸರ್ಫರಾಜ್​ಗೆ ಕಂಡೀಷನ್ಸ್​.. ಬ್ಯಾಟಿಂಗ್ ಸ್ಲಾಟ್​ ಬಿಡದ ಯುವ ಬ್ಯಾಟರ್​!

ಕೋಚ್ ಗಂಭೀರ್ ಆ್ಯಂಡ್ ಕ್ಯಾಪ್ಟನ್ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ. ಸೀನಿಯರ್ ಆಟಗಾರರ ಹಾಗೂ ಗಂಭೀರ್ ಸಂಬಂಧ ಚೆನ್ನಾಗಿಲ್ಲ. ಟೀಮ್ ಇಂಡಿಯಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಅಶ್ವಿನ್ ನಿವೃತ್ತಿ ಹೇಳಿದ್ರಾ?.

author-image
Bhimappa
IPL ಫ್ರಾಂಚೈಸಿಗಳಿಗೆ ಬಿಗ್ ಆಫರ್ ಕೊಟ್ಟ ಯಂಗ್ ಗನ್ ಸರ್ಫರಾಜ್ ಖಾನ್..!
Advertisment

ಕ್ರಿಕೆಟ್​ನಲ್ಲಿ ಸಕ್ಸಸ್ ಅನ್ನೋದು ಸುಲಭಕ್ಕೆ ಸಿಗಲ್ಲ. ಇದಕ್ಕಾಗಿ ಕಠಿಣ ಶ್ರಮ, ತ್ಯಾಗ ಅನಿವಾರ್ಯ. ಆದ್ರೆ, ಎಷ್ಟೇ ಕಠಿಣ ಪರಿಶ್ರಮ ಪಟ್ಟು, ಏನೇ ತ್ಯಾಗ ಮಾಡಿದ್ರೂ ಯುವ ಕ್ರಿಕೆಟಿಗ ಸರ್ಫರಾಜ್​ ಖಾನ್​ಗೆ ಮಾತ್ರ ಈ ಸಕ್ಸಸ್​ ಸಿಗ್ತಿಲ್ಲ. ಟೀಮ್​ ಇಂಡಿಯಾದಲ್ಲಿ ಬಿಡಿ, ಕನಿಷ್ಟ ಇಂಡಿಯಾ ಎ ತಂಡಕ್ಕೂ ಸರ್ಫರಾಜ್​ ಖಾನ್​​ ಬೇಡವಾಗಿದ್ದಾರೆ. 

Advertisment

ಸೌತ್​ ಆಫ್ರಿಕಾ ಎದುರಿನ ಅಸಲಿ ಟೆಸ್ಟ್​ ಸರಣಿಗೂ ಮುನ್ನ ನಡೆಯೋ ಸೌತ್​ ಆಫ್ರಿಕಾ ಎ ಎದುರಿನ ಅನಧಿಕೃತ ಟೆಸ್ಟ್​ಗೆ ಇಂಡಿಯಾ ಎ ತಂಡ ಅನೌನ್ಸ್​ ಆಗಿದೆ. ಡೇರ್​​ಡೆವಿಲ್​ ಬ್ಯಾಟರ್​ ರಿಷಭ್​ ಪಂತ್​ ಕಮ್​ಬ್ಯಾಕ್​ ಕ್ರಿಕೆಟ್​ ಲೋಕದ ಗಮನ ಸೆಳೆದಿದೆ. ಆದ್ರೆ, ಇದೇ ವೇಳೆ ಕ್ರಿಕೆಟ್​ ಅಭಿಮಾನಿಗಳಿಗೆ ಸರ್​​ಪ್ರೈಸ್​ ಶಾಕ್​ ಕೂಡ ಎದುರಾಗಿದೆ. 

ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!

ಇಂಡಿಯಾ ಎ ತಂಡದಿಂದಲೂ ಸರ್ಫರಾಜ್​ಗೆ ಕೊಕ್.!

ಟೀಮ್​ ಇಂಡಿಯಾದ ಭವಿಷ್ಯದ ಭರವಸೆ ಎನಿಸಿಕೊಂಡಿದ್ದ ಯುವ ಬ್ಯಾಟ್ಸ್​ಮನ್​ ಸರ್ಫರಾಜ್​ ಖಾನ್​ಗೆ ಮತ್ತೆ ನಿರಾಸೆಯಾಗಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸ್ಥಾನ ಸಿಗುತ್ತೆ ಎಂದುಕೊಂಡಿದ್ದ ಸರ್ಫರಾಜ್​ಗೆ ಸೆಲೆಕ್ಟರ್ಸ್​ ಶಾಕ್​ ನೀಡಿದ್ರು. ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಗದಿದ್ರೆ, ಇಂಡಿಯಾ ಎ ತಂಡದಲ್ಲಾದ್ರೂ ಚಾನ್ಸ್​ ಸಿಗುತ್ತೆ ಎಂದು ಕಾದಿದ್ದ ಸರ್ಫಾರಾಜ್​ಗೆ ಮತ್ತೊಂದು ಶಾಕ್​ ಎದುರಾಗಿದೆ. ಇಂಡಿಯಾ ಎ ತಂಡಕ್ಕೂ ಮುಂಬೈಕರ್​ ಸರ್ಫರಾಜ್​ ಖಾನ್ ಬೇಡವಾಗಿದ್ದಾರೆ. 

ಯುವ ಆಟಗಾರನಿಗೆ ಸೆಲೆಕ್ಷನ್​ ಕಮಿಟಿಯಿಂದ ಅನ್ಯಾಯ.?

ಸರ್ಫರಾಜ್​ ಖಾನ್​​ ಡೊಮೆಸ್ಟಿಕ್ ಕ್ರಿಕೆಟ್​ನ ರನ್​ಮಷೀನ್​. ಟ್ಯಾಲೆಂಟ್​ ಇದೆ. ಟೆಕ್ನಿಕ್​ ಇದೆ. ಪವರ್​ ಇದೆ. ಫಿಟ್​ನೆಸ್​ ಇದೆ. ಬಹು ಮುಖ್ಯವಾಗಿ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಆದ್ರೆ, ಸೀನಿಯರ್​ ಸೆಲೆಕ್ಷನ್​ ಕಮಿಟಿ ಮಾತ್ರ ಮುಂಬೈನ ಯುವ ಆಟಗಾರನನ್ನ ಕಣ್ಣೆತ್ತಿಯೂ ನೋಡ್ತಿಲ್ಲ. ಪದೇ ಪದೇ ಸೆಲೆಕ್ಷನ್​ ಕಮಿಟಿ ಯುವ ಆಟಗಾರನಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. 

Advertisment

ಡೊಮೆಸ್ಟಿಕ್​ ಕ್ರಿಕೆಟ್​ನ ‘ಡಾನ್​ ಬ್ರಾಡ್ಮನ್​’ ಸರ್ಫರಾಜ್​.!

ಸರ್ಫರಾಜ್​ ಖಾನ್​ನ ದೇಶಿ ಕ್ರಿಕೆಟ್​ನ ಡಾನ್​ ಬ್ರಾಡ್ಮನ್​ ಅಂದ್ರೆ ತಪ್ಪಾಗಲ್ಲ. ಆಸಿಸ್​ ಲೆಜೆಂಡ್​ ಡಾನ್​ ಬ್ರಾಡ್ಮನ್​ ಹೇಗೆ 100+ ಸರಾಸರಿಯನ್ನ ಹೊಂದಿದ್ರೋ ಹಾಗೇ ಸರ್ಫರಾಜ್​ ಖಾನ್​ ದೇಶಿ ಕ್ರಿಕೆಟ್​ನಲ್ಲಿ ಕಳೆದ 5 ವರ್ಷಗಳಿಂದ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಕಳೆದ 5 ವರ್ಷಗಳಿಂದ 110.47ರ ಅತ್ಯದ್ಬುತ ಸರಾಸರಿಯನ್ನ ಹೊಂದಿರೋ ಮುಂಬೈಕರ್, 5 ಹಾಫ್​ ಸೆಂಚುರಿ, 10 ಶತಕ ಸಹಿತ 2541 ರನ್​ಗಳಿಸಿದ್ದಾರೆ. ಟೀಮ್​ ಇಂಡಿಯಾ ಸೆಲೆಕ್ಷನ್​ಗೆ ಇದಕ್ಕಿಂತ ಇನ್ನೇನು ಬೇಕು.?

17 ಕೆಜಿ ತೂಕ ಇಳಿಸಿಕೊಂಡ್ರೂ ಸಿಗಲಿಲ್ಲ ಸ್ಥಾನ.!

2024ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಡೆಬ್ಯೂ ಮಾಡಿದ ಸರ್ಫರಾಜ್​ ಖಾನ್​ 3 ಪಂದ್ಯಗಳಲ್ಲಿ 3 ಹಾಫ್​​ ಸೆಂಚುರಿ ಸಿಡಿಸಿದ್ರು. ನ್ಯೂಜಿಲೆಂಡ್​ ವಿರುದ್ಧ ಬೊಂಬಾಟ್​ ಶತಕ ಬಾರಿಸಿದ್ರು. ಆ ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೂ ತೆರಳಿದ ಸರ್ಫರಾಜ್​, ಬೆಂಜ್​​ ಬಿಸಿ ಮಾಡಿದ್ರು. ಆಸಿಸ್​ ಪ್ರವಾಸದಲ್ಲಿ ಬೆಂಚ್​ ಕಾದ ಸರ್ಫರಾಜ್ ಆ ಬಳಿಕ ತಂಡದಿಂದಲೂ ಡ್ರಾಪ್​ ಆದ್ರು. ಇದಕ್ಕೆ ನೀಡಿದ ಕಾರಣ ಏನು ಗೊತ್ತಾ.? ಫಿಟ್​ನೆಸ್​.! ಫಿಟ್​ನೆಸ್​ ವಿಚಾರವನ್ನ ಸವಾಲಾಗಿ ಸ್ವೀಕರಿಸಿದ ಸರ್ಫಾರಾಜ್​, ಕಠಿಣ ಕಸರತ್ತು ನಡೆಸಿ 17 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ಆದ್ರೆ, ಏನ್​ ಪ್ರಯೋಜನ.? ಸ್ಥಾನ ಮಾತ್ರ ಸಿಕ್ಕಿಲ್ಲ. 

ಸರ್ಫರಾಜ್​ಗೆ ಕಂಡೀಷನ್​​ ಹಾಕಿದ್ರಾ ಸೆಲೆಕ್ಟರ್ಸ್​.?

ಇಂಡಿಯಾ ಎ ತಂಡದಿಂದ ಸರ್ಫರಾಜ್​ ಖಾನ್​​ ಡ್ರಾಪ್​ ಆದ ಬಳಿಕ ಹೊಸದೊಂದು ಸುದ್ದಿ ಓಡಾಡ್ತಿದೆ. ಟೀಮ್​ ಇಂಡಿಯಾ ಸೆಲೆಕ್ಟರ್ಸ್​ ಸರ್ಫರಾಜ್​ಗೆ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸು ಅಂದಿದ್ರಂತೆ. ಆದ್ರೆ, ಸರ್ಫರಾಜ್​ ಖಾನ್ ತನ್ನ ಎಂದಿನ ಸ್ಲಾಟ್​ ಬಿಟ್ಟು ಕೊಡಲು ಒಪ್ಪಿಲ್ಲ. ಇದೇ ಕಾರಣಕ್ಕೆ ಸರ್ಫರಾಜ್​ನ ಸೆಲೆಕ್ಷನ್​ನಿಂದ ಕಡೆಗಣನೆ ಮಾಡಲಾಗ್ತಿದೆ ಅನ್ನೋ ಸುದ್ದಿ ಸದ್ಯ ಹೊರಬಿದ್ದಿದೆ. 

Advertisment

ಇದನ್ನೂ ಓದಿ:ಚೇಸಿಂಗ್​ನಲ್ಲಿ 6,000 ರನ್​ ಪೂರೈಸಿದ ವಿರಾಟ್.. ODI ಅಲ್ಲಿ ಕಿಂಗ್ ಕೊಹ್ಲಿ ಅರ್ಧಶತಕಗಳೆಷ್ಟು..?

Shami and Gambhir

ಯುವ ಆಟಗಾರನ ಮೇಲೆ ಹಗೆ ಸಾಧಿಸ್ತಿದ್ದಾರಾ ಗಂಭೀರ್​.? 

ಕಳೆದ ಆಸ್ಟ್ರೇಲಿಯಾ ಪ್ರವಾಸ ವೇಳೆ ಇಂಡಿಯನ್​ ಡ್ರೆಸ್ಸಿಂಗ್​ ರೂಮ್​ನ ಸೀಕ್ರೆಟ್​ಗಳು ಒಂದೊಂದಾಗಿ ರಿವೀಲ್​ ಆಗಿದ್ವು. ಕೋಚ್ ಗಂಭೀರ್ ಆ್ಯಂಡ್ ಕ್ಯಾಪ್ಟನ್ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ. ಸೀನಿಯರ್ ಆಟಗಾರರ ಹಾಗೂ ಕೋಚ್ ಗಂಭೀರ್ ಸಂಬಂಧ ಚೆನ್ನಾಗಿಲ್ಲ. ಟೀಮ್ ಇಂಡಿಯಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ  ಅಶ್ವಿನ್ ನಿವೃತ್ತಿ ಹೇಳಿದ್ರು ಎಂಬೆಲ್ಲ ಸುದ್ದಿಗಳು ಹೊರಬಿದ್ದಿದ್ರು. ಮಾಹಿತಿಗಳು ಸೋರಿಕೆಯಾಗಿದ್ದಕ್ಕೆ ಸರ್ಫರಾಜ್​ ಕಾರಣ ಎಂದು ಗಂಭೀರ್ ಬಿಸಿಸಿಐಗೆ ದೂರು ನೀಡಿದ್ರು. ಅದಾದ ಬಳಿಕ ಸರ್ಫರಾಜ್ ಪರ್ಫಾಮ್​​​ ಮಾಡಿದ್ರೂ, ಕಡೆಗಣನೆ ಮಾಡಲಾಗ್ತಿದೆ. ಹೀಗಾಗಿ ಗಂಭೀರ್​​ ಹಗೆ ಸಾಧಿಸ್ತಿದ್ದಾರಾ.? ಎಂಬ ಚರ್ಚೆಯೂ ನಡೀತಿದೆ. 

ಸರ್ಫರಾಜ್ ಖಾನ್​ಗೆ ಮುಳುವಾಗ್ತಿದ್ಯಾ ‘ಸರ್’ ನೇಮ್​​.? 

ಹೀಗೊಂದು ಚರ್ಚೆ ಕೂಡ ನಡೀತಿದೆ. ಗಂಭೀರ್​ ಬಿಜೆಪಿಯವರು, ಆ ಐಡಿಯಾಲಾಜಿಯನ್ನೇ ಟೀಮ್​ ಇಂಡಿಯಾದಲ್ಲೂ ಪಾಲಿಸ್ತಿದ್ದಾರೆ ಅನ್ನೋ ಆರೋಪ ಕಾಂಗ್ರೆಸ್​ ಕಡೆಯಿಂದ ಕೇಳಿ ಬಂದಿದೆ. ಸರ್ಫರಾಜ್​ ಖಾನ್​, ವೇಗಿ ಮೊಹಮ್ಮದ್​ ಶಮಿ ಸೈಡ್​ಲೈನ್​ಗೆ ಸರ್​ ನೇಮ್​ ಕಾರಣ ಎಂಬ ಆರೋಪವೂ ಬಂದಿದೆ. ಟ್ಯಾಲೆಂಟ್​​ ಇದ್ದು, ಪರ್ಫಾಮ್​ ಮಾಡ್ತಾ ಇದ್ರೂ ಸ್ಥಾನ ಸಿಗ್ತಿಲ್ಲ. ಅಂದ ಮೇಲೆ ಇದನ್ನ ರಾಜಕೀಯದಾಟ ಅನ್ನೋದ್ರಲ್ಲಿ ತಪ್ಪಿಲ್ಲ ಬಿಡಿ ಎನ್ನಲಾಗುತ್ತಿದೆ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Team India Sarfaraz Khan
Advertisment
Advertisment
Advertisment