Advertisment

IND vs AUS; ಶ್ರೇಯಸ್​ ಅಯ್ಯರ್​ ಆರೋಗ್ಯ ಇನ್ನಷ್ಟು ಗಂಭೀರ.. ICU ನಲ್ಲಿ ವೈದ್ಯರಿಂದ ಚಿಕಿತ್ಸೆ!

ಕ್ರೀಸ್​​ನಲ್ಲಿ ಆಸಿಸ್​ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ 24 ರನ್​ ಗಳಿಸಿದ್ದ ಅಲೆಕ್ಸ್ ಕ್ಯಾರಿ ಸಿಕ್ಸರ್ ಬಾರಿಸಲು ಬಾಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಬಾಲ್​ ಮೇಲೆ ಹೋಗಿದ್ದರಿಂದ ಶ್ರೇಯಸ್​ ಅಯ್ಯರ್ ಹಿಂದಕ್ಕೆ ಓಡುತ್ತಾ.. ಓಡುತ್ತಾ..

author-image
Bhimappa
Shreyas_Iyer_siraj
Advertisment

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು. ಸದ್ಯ ಈ ಇಂಜುರಿ ಇನ್ನಷ್ಟು ಗಂಭೀರವಾಗಿದ್ದು ಶ್ರೇಯಸ್ ಅಯ್ಯರ್ ಅವರನ್ನು ಈಗ ಐಸಿಯು (Intensive Care Unit)ಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

Advertisment

ಎರಡು ದಿನಗಳಿಂದಲೂ ಆಸ್ಟ್ರೇಲಿಯಾದ ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಶ್ರೇಯಸ್ ಅಯ್ಯರ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಎಡಭಾಗದ ಪಕ್ಕೆಲುಬಿಗೆ ತೀವ್ರವಾದ ಗಾಯವಾಗಿದ್ದು ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ. ಏಕೆಂದರೆ ಆಂತರಿಕ ರಕ್ತ ಸ್ರಾವ ಆಗುತ್ತಿದ್ದರಿಂದ ದೇಹದೊಳಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಹೀಗಾಗಿ ಎರಡರಿಂದ 7 ದಿನಗಳವರೆಗೆ ಅಬ್ಸರ್ವ್​ವೇಷನ್​ನಲ್ಲಿ ಅಯ್ಯರ್ ಇದ್ದಾರೆ ಎನ್ನಲಾಗಿದೆ.

ಪಂದ್ಯದಲ್ಲಿ ಇಂಜುರಿ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ಬಂದಿದ್ದ ಶ್ರೇಯಸ್​ ಅಯ್ಯರ್ ತೀವ್ರ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಬಿಸಿಸಿಐ ವೈದ್ಯಕೀಯ ಟೀಮ್ ಪರೀಕ್ಷಿಸಿ ಸಿಡ್ನಿ ಆಸ್ಪತ್ರೆಗೆ ದಾಖಲು ಮಾಡಿತ್ತು. ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರವಾಗಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳಬಹುದು. ಅಂದರೆ ಮೂರು ವಾರಗಳಿಗಿಂತ ಹೆಚ್ಚಿನ ಸಮಯ ಹಿಡಿಯಬಹುದು ಎಂದು ಹೇಳಲಾಗಿದೆ. 

ಇದನ್ನೂ ಓದಿ: IPL 2026; ಮುಂಬೈ ಟೀಮ್​ನಿಂದ ಒಬ್ಬರಲ್ಲ, ಇಬ್ಬರಲ್ಲ 9 ಪ್ಲೇಯರ್ಸ್​ಗೆ ಗೇಟ್​ಪಾಸ್.. ರೋಹಿತ್, ಪಾಂಡ್ಯ?

Advertisment

Shreyas_Iyer_Injury

ಇಂಜುರಿಗೆ ಒಳಗಾಗಿದ್ದು ಹೇಗೆ?

ಸಿಡ್ನಿ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡ 3 ವಿಕೆಟ್​ಗೆ 183 ರನ್​ಗಳಿಂದ ಆಟ ಮುಂದುವರೆಸಿತ್ತು. ಈ ವೇಳೆ ಕ್ರೀಸ್​​ನಲ್ಲಿ ಆಸಿಸ್​ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ 24 ರನ್​ ಗಳಿಸಿದ್ದ ಅಲೆಕ್ಸ್ ಕ್ಯಾರಿ ಸಿಕ್ಸರ್ ಬಾರಿಸಲು ಬಾಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಬಾಲ್​ ಮೇಲೆ ಹೋಗಿದ್ದರಿಂದ ಶ್ರೇಯಸ್​ ಅಯ್ಯರ್ ಹಿಂದಕ್ಕೆ ಓಡುತ್ತಾ.. ಓಡುತ್ತಾ.. ಡೈವ್ ಮಾಡಿ ಕ್ಯಾಚ್ ಹಿಡಿದರು. ಅಮೋಘವಾದ ಡೈವ್ ಮಾಡಿ ಕ್ಯಾಚ್ ಹಿಡಿಯುವಾಗ ಅವರ ಎಡಭಾಗದ ಪಕ್ಕೆಲುಬಿಗೆ ಗಂಭೀರವಾದ ಪೆಟ್ಟು ಬಿದ್ದಿತ್ತು. ಇದರಿಂದ ತಕ್ಷಣ ಅವರನ್ನು ಸಿಡ್ನಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಈಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗಿದೆ.   

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs AUS Shreyas Iyer
Advertisment
Advertisment
Advertisment