/newsfirstlive-kannada/media/media_files/2025/10/27/hardik_pandya_rohit-2025-10-27-08-48-02.jpg)
ಐಪಿಎಲ್ 2026 ಆಕ್ಷನ್ ಆರಂಭವಾಗಲು ಇನ್ನು ಒಂದೂವರೆ ತಿಂಗಳು ಬಾಕಿ ಇದ್ದು ಇದರ ಮಧ್ಯೆ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ಪ್ಲಾನ್ ರೂಪಿಸುತ್ತಿವೆ. ಸಾಕಷ್ಟು ಅಳೆದು ತೂಗಿ ತಂಡಕ್ಕೆ ಆಟಗಾರರನ್ನು ಖರೀದಿ ಮಾಡಲಾಗುತ್ತದೆ. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಕೂಡ ದೊಡ್ಡ ಯೋಜನೆ ರೂಪಿಸಿದ್ದು ತಂಡದಲ್ಲಿ ಬಹುತೇಕ ಆಟಗಾರರನ್ನು ರಿಲೀಸ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​ 2025ರ ಐಪಿಎಲ್​ ಆರಂಭದಲ್ಲಿ ಹೀನಾಯ ಪ್ರದರ್ಶನ ನೀಡಿ ಕೊನೆಯಲ್ಲಿ ಅತ್ಯುತ್ತಮ ಆಟವಾಡಿದರೂ ಫೈನಲ್​ ತಲುಪಲಾಗಲಿಲ್ಲ. 5 ಟ್ರೋಫಿಗಳನ್ನ ಗೆದ್ದಿರುವ ಮುಂಬೈ ಇಂಡಿಯನ್ಸ್ 2020ರ ಬಳಿಕ ಟ್ರೋಫಿ ಎನ್ನುವ ಪದವನ್ನೇ ಮರೆತಂತೆ ಆಗಿದೆ. ಹೀಗಾಗಿ 2026ಕ್ಕೆ ಹೊಸ ಟೀಮ್​ ಕಟ್ಟಲು ದೊಡ್ಡ ಪ್ಲಾನ್ ಮಾಡಲಾಗಿದೆ. ಹೀಗಾಗಿಯೇ ತಂಡದಿಂದ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 9 ಪ್ಲೇಯರ್ಸ್​ಗೆ ಗೇಟ್​ ಪಾಸ್​ ನೀಡಲಾಗುತ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2024/09/Mumbai-Indians_News.jpg)
ಮುಂಬೈ ಫ್ರಾಂಚೈಸಿ ಒಟ್ಟು 9 ಆಟಗಾರರನ್ನು ಬಿಡುಗಡೆ ಮಾಡುತ್ತಿದ್ದು ಇದರಿಂದ 18 ಕೋಟಿ ರೂಪಾಯಿ ಪರ್ಸ್​ನಲ್ಲಿ ಉಳಿಯಲಿದೆ. ಇದರಿಂದಲೇ ಮಿನಿ ಆಕ್ಷನ್​ಗೆ ಎಂಟ್ರಿ ಕೊಟ್ಟು ಉತ್ತಮ ಪ್ಲೇಯರ್​ಗಳಿಗೆ ಗಾಳ ಹಾಕಲಿದೆಯಂತೆ. ಈ 9 ಆಟಗಾರರಲ್ಲಿ ಸಚಿನ್​ ತೆಂಡೂಲ್ಕರ್​ ಪುತ್ರ ಅರ್ಜುನ್ ಕೂಡ ಸೇರಿದ್ದಾರೆ. 2026ರ ಐಪಿಎಲ್ ಟ್ರೋಫಿ ಮೇಲೆ ಮುಂಬೈ ಇಂಡಿಯನ್ಸ್​ ಕಣ್ಣಿಟ್ಟಿದೆ.
ಇನ್ನು ಮುಂಬೈ ಇಂಡಿಯನ್ಸ್​ ಗೇಟ್​ ಪಾಸ್ ಕೊಡಲಿರೋ ಆಟಗಾರರು ಎಂದರೆ, ಅರ್ಜುನ್ ತೆಂಡೂಲ್ಕರ್​, ರಾಬಿನ್ ಮಿಂಜ್, ಮಿಚೆಲ್ ಸ್ಯಾಟ್ನರ್, ರಾಜ್ ಅಂಗದ್ ಬಾವ, ರೀಸಿ ಟೊಪ್ಲಿ, ಕರ್ನ್ ಶರ್ಮಾ, ದೀಪಕ್ ಚಹರ್, ಅಲ್ಲಾ ಘಂಜಾಂಫರ್, ಸತ್ಯನಾರಾಯಣ ಆಗಿದ್ದಾರೆ. ಇವರನ್ನು ತಂಡದಿಂದ ಹೊರ ಕಳಿಸಿ ಆಕ್ಷನ್​ನಲ್ಲಿ ಬಿಡ್ ಮಾಡಲಿದೆಯಂತೆ.
ಮುಂಬೈ ಇಂಡಿಯನ್ಸ್​ ತಂಡದಲ್ಲಿ ಮೊದಲಿನಿಂದಲೂ ಇರುವಂತ ರೋಹಿತ್ ಶರ್ಮಾ, ಜಸ್​ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್​ ಸ್ಥಾನ ಖಾಯಂ ಇದೆ. ಯಂಗ್ ಪ್ಲೇಯರ್ಸ್​ ತಿಲಕ್ ವರ್ಮಾ, ನಮನ್ ಧೀರ್, ಟ್ರೆಂಟ್ ಬೋಲ್ಟ್​, ಅಶ್ವನಿ ಕುಮಾರ್ ಸೇರಿದಂತೆ ಇತರೆ ಆಟಗಾರರು ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us