Advertisment

ಟೀಂ ಇಂಡಿಯಾಗೆ ಕೊಹ್ಲಿ, ರೋಹಿತ್ ಯಾಕೆ ಇನ್ನೂ ಬೇಕು..? ಓದಲೇಬೇಕಾದ ಸ್ಟೋರಿ..

ಸಿಡ್ನಿಯಲ್ಲಿ ರೋಹಿತ್-ಕೊಹ್ಲಿ ಬ್ಯಾಟಿಂಗ್ ವೈಭವಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ. ಪ್ರೆಶರ್ ಗೇಮ್​ನಲ್ಲಿ ಕ್ಲಾಸ್ ಅಂಡ್ ಟೆಂಪರ್​ಮೆಂಟ್ ತೋರಿದ ರೋ-ಕೊ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಅನುಭವಿ ಮತ್ತು ಸೂಪರ್​ಸ್ಟಾರ್​ ಬ್ಯಾಟರ್ಸ್​ ಟೀಮ್ ಇಂಡಿಯಾದ ಬ್ಯಾಕ್​​​ಬೋನ್ ಅನ್ನೋದು ಮತ್ತೆ ಪ್ರೂವ್ ಆಗಿದೆ.

author-image
Ganesh Kerekuli
Kohli rohit
Advertisment
  • ರೋ-ಕೊ ನಾಟೌಟ್..! ಇಬ್ಬರ ಆಟ ಇನ್ನೂ ಮುಗಿದಿಲ್ಲ
  • ರೋಹಿತ್-ಕೊಹ್ಲಿ ಅನುಭವ ಯಂಗ್ ಇಂಡಿಯಾಗೆ ಬೇಕು
  • ರೋಹಿತ್-ಕೊಹ್ಲಿ ಸ್ಥಾನ ತುಂಬುವರು ಫೈನಲ್ ಆಗಿಲ್ಲ

ಸಿಡ್ನಿಯಲ್ಲಿ ರೋಹಿತ್-ಕೊಹ್ಲಿ ಬ್ಯಾಟಿಂಗ್ ವೈಭವಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ. ಪ್ರೆಶರ್ ಗೇಮ್​ನಲ್ಲಿ ಕ್ಲಾಸ್ ಅಂಡ್ ಟೆಂಪರ್​ಮೆಂಟ್ ತೋರಿದ ರೋ-ಕೊ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಅನುಭವಿ ಮತ್ತು ಸೂಪರ್​ಸ್ಟಾರ್​ ಬ್ಯಾಟರ್ಸ್​ ಟೀಮ್ ಇಂಡಿಯಾದ ಬ್ಯಾಕ್​​​ಬೋನ್ ಅನ್ನೋದು ಮತ್ತೆ ಪ್ರೂವ್ ಆಗಿದೆ. 

Advertisment

ರೋಹಿತ್-ಕೊಹ್ಲಿ ಇಬ್ಬರಲ್ಲೂ ರನ್​​​​​​​ಗಳಿಸೋ​​​​​​​ ಹಸಿವಿದೆ. ಎದುರಾಳಿಗಳ ವಿರುದ್ಧ ಹೋರಾಡೋ ಶಕ್ತಿ ಇದೆ. ಯುವ ಕ್ರಿಕೆಟಿಗರನ್ನೂ ನಾಚಿಸುವಂತೆ ಪರ್ಫಾಮ್ ಮಾಡ್ತಿರುವ ರೋ-ಕೊ ಜೋಡಿ, ಫಿಟ್ನೆಸ್​​ನಲ್ಲೂ ಎಲ್ಲರಿಗಿಂತ ಒಂದೆಜ್ಜೆ ಮುಂದೆನೇ ಇದ್ದಾರೆ. ಇಷ್ಟೆಲ್ಲಾ ಕ್ವಾಲಿಟೀಸ್, ಎಕ್ಸ್​ಪೀರಿಯನ್ಸ್ ಇರೋ ರೋಹಿತ್- ಕೊಹ್ಲಿ, ಟೀಮ್ ಇಂಡಿಯಾಕ್ಕೆ ಬೇಕೇ ಬೇಕು. ರೋ-ಕೊ ಇಲ್ಲದೆ 2027ರ ಏಕದಿನ ವಿಶ್ವಕಪ್ ಗೆಲ್ಲೋದು ಅಸಾಧ್ಯದ ಮಾತು.

ಇದನ್ನೂ ಓದಿ: ಓರ್ವ ಸ್ಟಾರ್​ ಆಟಗಾರನ ಬಿಟ್ಟುಕೊಡಲು RCB ರೆಡಿ.. ಬಿಗ್​ ಕ್ಯಾಶ್ ಡೀಲ್..!

Kohli rohit gill (1)

ರೋ-ಕೊ ನಾಟೌಟ್..!

ಸಿಡ್ನಿ ಕ್ರಿಕೆಟ್​ ಗ್ರೌಂಡ್​​ನಲ್ಲಿ ರೋಹಿತ್-ಕೊಹ್ಲಿ ಆಡಿದ ಇನ್ನಿಂಗ್ಸ್ ನಿಜಕ್ಕೂ ಅದ್ಭುತವಾಗಿತ್ತು. ಇಬ್ಬರ ಆಟ ಕಣ್ಣಿಗೆ ಹಬ್ಬದಂತಿತ್ತು. ಒಂದೆಡೆ ರೋಹಿತ್ ಎಂದಿನಂತೆ ತನ್ನ ನೈಜ್ಯ ಬ್ಯಾಟಿಂಗ್ ನಡೆಸುತ್ತಿದ್ರೆ ಮತ್ತೊಂದೆಡೆ ಕೊಹ್ಲಿ ಲೆಕ್ಕಾಚಾರದ ಇನ್ನಿಂಗ್ಸ್ ಆಡಿದ್ರು. ಇಬ್ಬರ ಹೊಂದಾಣಿಕೆ ಅದ್ಭುತ. ಸ್ಟ್ರೈಕ್ ರೊಟೇಶನ್, ರನ್ನಿಂಗ್ ಬಿಟ್ವೀನ್ ದ ವಿಕೆಟ್ಸ್​, ರನ್ ಚೇಸ್ ಕ್ಯಾಲ್ಕ್ಯುಲೇಶನ್, ಎಲ್ಲವೂ ಎಕ್ಸಲೆಂಟ್ ಆಗಿತ್ತು. ಇಬ್ಬರ ಕ್ಲಾಸ್ ಬ್ಯಾಟಿಂಗ್ ನೋಡಿದ ವಿಶ್ವವೇ ಬೆರಗಾಯ್ತು.       

Advertisment

ಇದನ್ನೂ ಓದಿ: ಶ್ರೇಯಸ್ ಅಯ್ಯರ್​ಗೆ ICU ನಲ್ಲಿ ಚಿಕಿತ್ಸೆ.. ಸಿಡ್ನಿಗೆ ತೆರಳಲು ತಂದೆ, ತಾಯಿಗೆ ಎಮರ್ಜೆನ್ಸಿ ವೀಸಾ!

Virat kohli Rohit sharma (2)
ಕೊಹ್ಲಿ, ರೋಹಿತ್ Photograph: (ಬಿಸಿಸಿಐ)

ಟೀಮ್ ಇಂಡಿಯಾ ಸದ್ಯ ಟ್ರ್ಯಾನ್ಸಿಷನ್ ಪಿರಿಯಡ್​​ನಲ್ಲಿದೆ. ಹೀಗಿರುವಾಗ ತಂಡಕ್ಕೆ ಅನುಭವಿಗಳ ಮಾರ್ಗದರ್ಶನ ಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬಿಟ್ರೆ ಏಕದಿನ ತಂಡದ ಬ್ಯಾಟಿಂಗ್ ಲೈನ್​ಅಪ್​ನಲ್ಲಿ ಹೇಳಿಕೊಳ್ಳುವಂತಹ ಅನುಭವಿಗಳಿಲ್ಲ. ತಂಡದಲ್ಲಿ ಹೆಚ್ಚು ಮಂದಿ ಯುವ ಆಟಗಾರರು ಇರೋದ್ರಿಂದ ಭವಿಷ್ಯದ ದೃಷ್ಟಿಯಲ್ಲಿ ರೋ-ಕೊ ಜೋಡಿಯ ಉಪಸ್ಥಿತಿ, ಹೆಚ್ಚು ಅವಶ್ಯಕತೆ ಇದೆ. ನಾಯಕ ಶುಭ್​ಮನ್​ ಗಿಲ್​ ಕೂಡ ರೋಹಿತ್​, ಕೊಹ್ಲಿಯಿಂದ ಕಲಿಬೇಕಿರೋದು ಸಾಕಷ್ಟಿದೆ.

ಟೀಮ್ ಇಂಡಿಯಾಗೆ ಸವಾಲ್

2027ರ ಏಕದಿನ ವಿಶ್ವಕಪ್​ಗೂ ಮುನ್ನ, ಟೀಮ್ ಇಂಡಿಯಾ ಕೆಲ ಟಫ್ ಸರಣಿಗಳನ್ನ ಆಡಲಿದೆ. ಈ ಸರಣಿಗಳು ಟೀಮ್ ಇಂಡಿಯಾ ವಿಶ್ವಕಪ್​ ಪ್ರಿಪರೇಷನ್ಸ್​ಗೆ ನೆರವಾಗಲಿದೆ. ತವರಿನಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ, ನಂತರ ಇಂಗ್ಲೆಂಡ್​ನಲ್ಲಿ ಏಕದಿನ ಸರಣಿಯನ್ನಾಡಲಿರುವ ಭಾರತ, ವಿಶ್ವಕಪ್​ಗೆ ಟೀಮ್ ಬಿಲ್ಡ್​ ಮಾಡೋಕೇ ಮುಂದಾಗಲಿದೆ. ರೋ-ಕೊ ಇಲ್ಲದೆ ತಂಡವನ್ನ ಕಟ್ಟೋದು ಅಸಾಧ್ಯವಾದ ಮಾತು.  

Advertisment

ಇದನ್ನೂ ಓದಿ: ಟೀಂ ಇಂಡಿಯಾಗೆ ಕೊಂಚ ಸಮಾಧಾನದ ಸುದ್ದಿ.. ICU ನಿಂದ ಅಯ್ಯರ್​ ವಾರ್ಡ್​ಗೆ ಶಿಫ್ಟ್

Virat kohli Rohit sharma (1)
ರೋಹಿತ್, ಕೊಹ್ಲಿ Photograph: (ಬಿಸಿಸಿಐ)

ಅನುಭವಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿವೃತ್ತಿಗೆ ಒತ್ತಡದ ಮೇಲೆ ಒತ್ತಡ ಇದೆ ನಿಜ. ಆದ್ರೆ ರೋ-ಕೊ ನಿವೃತ್ತಿಯಾದ್ರೆ ಅವರ ಸ್ಥಾನ ತುಂಬೋ ಆಟಗಾರರು ತಂಡದಲ್ಲಿದ್ದಾರಾ? ಈ ಪ್ರಶ್ನೆಗೆ, ಟೀಮ್ ಮ್ಯಾನೇಜ್ಮೆಂಟ್​ನಲ್ಲೇ ಉತ್ತರ ಇಲ್ಲ. ರೋಹಿತ್ ಸ್ಥಾನವನ್ನ ಜೈಸ್ವಾಲ್ ತುಂಬಬಹುದು ಅಂತಾರೆ. ಆದ್ರೆ ಜೈಸ್ವಾಲ್ ಎಷ್ಟು ಏಕದಿನ ಪಂದ್ಯಗಳನ್ನ ಆಡಿದ್ದಾರೆ ಹೇಳಿ? ಕೊಹ್ಲಿಯ ನಂಬರ್ 3 ಸ್ಲಾಟ್​ಗೆ ಯಾರು ಫಿಟ್ ಆಗ್ತಾರೆ? ನಂಬರ್.3 ಸ್ಲಾಟ್​​ನಲ್ಲಿ ಕೊಹ್ಲಿ ಬಿಟ್ರೆ ಯಾರು ಸಕ್ಸಸ್ ಕಂಡಿದ್ದಾರೆ ಹೇಳಿ? ಎಲ್ಲವನ್ನೂ ಬಾಯಲ್ಲಿ ಹೇಳೋಕೆ ಸುಲಭ. ಫಾಲೋ ಮಾಡೋದು ಕಷ್ಟದ ಮಾತು.

ರೋ-ಕೊ ಮೇಲೆ ನಿವೃತ್ತಿಯ ಒತ್ತಡ ಬೇಡ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಫ್ ಕ್ಯಾರೆಕ್ಟರ್ ಇರುವಂತಹ ಆಟಗಾರರು. ಅವರಿಗೆ ಯಾವಾಗ ಏನು ನಿರ್ಧಾರ ಕೈಗೊಳ್ಳಬೇಕು ಎಂದು ಚೆನ್ನಾಗಿ ಗೊತ್ತು. ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ನಂತರ, ಆ ಫಾರ್ಮೆಟ್​​ಗೆ ಗುಡ್​ಬೈ ಹೇಳಿದ್ರು. ಟೆಸ್ಟ್ ತಂಡಕ್ಕೆ ಫಿಟ್ ಆಗಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿರುವಾಗಲೇ ರೆಡ್​ಬಾಲ್ ಕ್ರಿಕೆಟ್ ಬಿಟ್ರು. ರೋ-ಕೊ ಸದ್ಯ ಏಕದಿನ ಕ್ರಿಕೆಟ್ ಬಿಡೋ ಮನಸ್ಸು ಮಾಡ್ತಿಲ್ಲ. ಯಾಕಂದ್ರೆ ಇಬ್ಬರಲ್ಲೂ ಇನ್ನೂ ಕ್ರಿಕೆಟ್ ಉಳಿದಿದೆ. ​​​ಏಕದಿನ ಕ್ರಿಕೆಟ್ ಆಡೋ ಸಾಮರ್ಥ್ಯ ಇದೆ. ಇಬ್ಬರಿಗೂ ಕ್ರಿಕೆಟ್ ಸಾಕು ಅನಿಸಿದ್ರೆ ಅವರು ಯಾರ ಮಾತು ಕೇಳಲ್ಲ. ಅವರೇ ಕ್ರಿಕೆಟ್ ಬಿಟ್ಟು ಮುಂದೆ ಸಾಗ್ತಾರೆ. ಆದ್ರೆ ರೋ-ಕೊ ಜೋಡಿಯ ಮೇಲೆ, ನಿವೃತ್ತಿಗೆ ಒತ್ತಡ ಹಾಕಬಾರದಷ್ಟೇ.

Advertisment

ವಿಶೇಷ ವರದಿ: ಗಂಗಾಧರ್.ಜಿ.ಎಸ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kohli Rohit Sharma-Virat Kohli Virat Kohli Rohit Sharma Rohith Sharma
Advertisment
Advertisment
Advertisment