Advertisment

ಶ್ರೇಯಸ್ ಅಯ್ಯರ್​ಗೆ ICU ನಲ್ಲಿ ಚಿಕಿತ್ಸೆ.. ಸಿಡ್ನಿಗೆ ತೆರಳಲು ತಂದೆ, ತಾಯಿಗೆ ಎಮರ್ಜೆನ್ಸಿ ವೀಸಾ!

ಅಲೆಕ್ಸ್ ಕ್ಯಾರಿ ಸಿಕ್ಸರ್ ಬಾರಿಸಲು ಬಾಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಬಾಲ್​ ಮೇಲೆ ಹೋಗಿದ್ದರಿಂದ ಶ್ರೇಯಸ್​ ಅಯ್ಯರ್ ಹಿಂದಕ್ಕೆ ಓಡುತ್ತಾ.. ಓಡುತ್ತಾ.. ಡೈವ್ ಮಾಡಿ ಕ್ಯಾಚ್ ಹಿಡಿದರು. ಅಮೋಘವಾದ ಡೈವ್ ಮಾಡಿ ಕ್ಯಾಚ್ ಹಿಡಿಯುವಾಗ ಅವರ ಎಡಭಾಗದ ಪಕ್ಕೆಲುಬಿಗೆ ಗಂಭೀರವಾದ ಪೆಟ್ಟು ಬಿದ್ದಿತ್ತು.

author-image
Bhimappa
SHREYAS_IYER
Advertisment

ಆಸ್ಟ್ರೇಲಿಯಾ ಜೊತೆಗಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶ್ರೇಯಸ್ ಅಯ್ಯರ್ ಅವರು ಗಂಭೀರವಾದ ಎಡಭಾಗದ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ ಅವರು ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಪೋಷಕರು ಎಮರ್ಜೆನ್ಸಿ ವೀಸಾ ಪಡೆದುಕೊಂಡಿದ್ದಾರೆ.   

Advertisment

ಶ್ರೇಯಸ್ ಅಯ್ಯರ್ ಅವರ ಆರೋಗ್ಯವನ್ನು ನೋಡಬೇಕು ಎಂದು ಅವರ ಪೋಷಕರು ಎಮರ್ಜೆನ್ಸಿ ವೀಸಾಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಸದ್ಯ ಇದೀಗ ಅವರ ಅರ್ಜಿಗೆ ಅನುಮತಿ ದೊರೆತ್ತಿದ್ದು ಆದಷ್ಟು ಬೇಗ ಪೋಷಕರು ಸಿಡ್ನಿಯನ್ನು ತಲುಪಲಿದ್ದಾರೆ. ಶ್ರೇಯಸ್ ಅಯ್ಯರ್ ಇಂಜುರಿಗೆ ಒಳಗಾದ ಮೇಲೆ ಅವರ ಪೋಷಕರು ಆತಂಕದಲ್ಲಿದ್ದರು. ಆದರೆ ಯಾವಾಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೋ ಎನ್ನುವ ಮಾಹಿತಿ ಬಹಿರಂಗವಾಯಿತೋ ಆಗ ಎಮರ್ಜೆನ್ಸಿ ವೀಸಾಗೆ ಅಪ್ಲೇ ಮಾಡಿದ್ದರು. 

ಇದನ್ನೂ ಓದಿ: IND vs AUS; ಶ್ರೇಯಸ್​ ಅಯ್ಯರ್​ ಆರೋಗ್ಯ ಇನ್ನಷ್ಟು ಗಂಭೀರ.. ICU ನಲ್ಲಿ ವೈದ್ಯರಿಂದ ಚಿಕಿತ್ಸೆ!

SHREYAS_IYER_FAMILY

ಪಕ್ಕೆಲುಬಿನ ಇಂಜುರಿಗೆ ಒಳಗಾಗಿರುವ ಶ್ರೇಯಸ್ ಅಯ್ಯರ್ ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತ ಸ್ರಾವ ಆಗುತ್ತಿದ್ದು ಅದರಿಂದ ಸೋಂಕು ಹರಡದಂತೆ ತಡೆಯಲು ವೈದ್ಯರ ಅಬ್ಸರ್ವೆಷನ್​ಲ್ಲಿ ಶ್ರೇಯಸ್ ಇದ್ದಾರೆ. ಈಗಲೂ ಬಿಸಿಸಿಐನ ವೈದ್ಯರು ಶ್ರೇಯಸ್ ಜೊತೆ ಇದ್ದಾರೆ. ಅವರ ತಂದೆ, ತಾಯಿಗೆ ಎಮರ್ಜೆನ್ಸಿ ವೀಸಾಗೆ ಅನುಮತಿ ದೊರೆತ್ತಿದ್ದು ಶೀಘ್ರದಲ್ಲೇ ಮಗನನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಲಿದ್ದಾರೆ ಎಂದು ಹೇಳಲಾಗಿದೆ. 

Advertisment

ಶ್ರೇಯಸ್​ಗೆ ಇಂಜುರಿ ಆಗಿದ್ದೇಗೆ?

ಸಿಡ್ನಿ ಸ್ನೇಡಿಯಂನಲ್ಲಿ ಮೊದಲ ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡ 3 ವಿಕೆಟ್​ಗೆ 183 ರನ್​ಗಳಿಂದ ಆಟ ಮುಂದುವರೆಸಿತ್ತು. ಈ ವೇಳೆ ಕ್ರೀಸ್​​ನಲ್ಲಿ ಆಸಿಸ್​ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ 24 ರನ್​ ಗಳಿಸಿದ್ದ ಅಲೆಕ್ಸ್ ಕ್ಯಾರಿ ಸಿಕ್ಸರ್ ಬಾರಿಸಲು ಬಾಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಬಾಲ್​ ಮೇಲೆ ಹೋಗಿದ್ದರಿಂದ ಶ್ರೇಯಸ್​ ಅಯ್ಯರ್ ಹಿಂದಕ್ಕೆ ಓಡುತ್ತಾ.. ಓಡುತ್ತಾ.. ಡೈವ್ ಮಾಡಿ ಕ್ಯಾಚ್ ಹಿಡಿದರು. ಅಮೋಘವಾದ ಡೈವ್ ಮಾಡಿ ಕ್ಯಾಚ್ ಹಿಡಿಯುವಾಗ ಅವರ ಎಡಭಾಗದ ಪಕ್ಕೆಲುಬಿಗೆ ಗಂಭೀರವಾದ ಪೆಟ್ಟು ಬಿದ್ದಿತ್ತು. ಇದರಿಂದ ತಕ್ಷಣ ಅವರನ್ನು ಸಿಡ್ನಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಈಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗಿದೆ.    

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs AUS Shreyas Iyer
Advertisment
Advertisment
Advertisment