/newsfirstlive-kannada/media/media_files/2025/11/04/team-india-1-2025-11-04-22-29-26.jpg)
ವಿಶ್ವಕಪ್ ಗೆದ್ದ ಭಾರತೀಯ ವನಿತೆಯರು ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ದಶಕಗಳ ಕನಸು ನನಸು ಮಾಡಿದ್ದಾರೆ. ಈ ಚಾಂಪಿಯನ್ ಆಟಗಾರ್ತಿಯರ ಕ್ರಿಕೆಟ್ ಜರ್ನಿ ಬಲು ರೋಚಕವಾಗಿದೆ. ಒಬ್ಬಬ್ಬ ಆಟಗಾರ್ತಿಯದ್ದು, ಒಂದೊಂದು ಕಥೆ ಹೇಳುತ್ತದೆ..
ಕ್ರಿಕೆಟರ್ ಆಗ್ಬೇಕು ಅಂತ ಎಲ್ಲರು ಕನಸು ಕಾಣ್ತಾರೆ. ಕೆಲವರ ಕನಸು ಕನಸಾಗೇ ಉಳಿದ್ರೆ, ಇನ್ನು ಕೆಲವರ ಕನಸು ನನಸಾಗಿಬಿಡುತ್ತದೆ. ಕೆಲವರು ಕಷ್ಟಾಪಟ್ಟು ಅಂದುಕೊಂಡಿದ್ದನ್ನ ಸಾಧಿಸ್ತಾರೆ. ಇನ್ನೂ ಕೆಲವರು ಅದೃಷ್ಟದಿಂದ ಸಾಧನೆಯ ಹಾದಿ ಹಿಡಿಯುತ್ತಾರೆ. ಹೀಗೆ ವಿಶ್ವಕಪ್ ಗೆದ್ದ ನಮ್ಮ ಭಾರತ ವನಿತೆಯರ ತಂಡದಲ್ಲೂ, ಕಷ್ಟ, ಅದೃಷ್ಟದ ಆಟ ನಡೆದಿದೆ. ಕೆಲವರದ್ದು ಇಂಟ್ರಸ್ಟಿಂಗ್ ಸ್ಟೋರಿ ಆದ್ರೆ ಮತ್ತೆ ಕೆಲವರದ್ದು ಅಂದುಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದೊಂದು.
ಕ್ರಿಕೆಟ್ ಆಡಲೆಂದೇ ಬಾಯ್ ಕಟ್
ಫೈನಲ್ ಪಂದ್ಯದ ಗೋಲ್ಡನ್ ಆರ್ಮ್ ಗರ್ಲ್ ಶಫಲಿ ವರ್ಮಾ, ಮೂಲತಃ ಹರಿಯಾಣದ ರೋಹ್ಟಕ್ ನವರು. ರೋಹ್ಟಕ್​​ನಲ್ಲಿ ಹುಡುಗಿಯರಿಗಾಗಿ ಕ್ರಿಕೆಟ್ ಅಕಾಡೆಮಿಗಳೇ ಇರಲಿಲ್ಲ. ಆಗ ಶಫಲಿ, ಬಾಯ್ ಹೇರ್ ಕಟ್ ಮಾಡಿಸಿಕೊಂಡು ಹುಡುಗರ ಜೊತೆ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಳು. ಇನ್ನೊಂದು ವಿಶೇಷ ಅಂದ್ರೆ 10ನೇ ತರಗತಿಯಲ್ಲಿ ಫೇಲ್ ಆಗಿದ್ದ ಶಫಾಲಿ, 12ನೇ ತರಗತಿಯಲ್ಲಿ 80% ತೆಗೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ಲು.
/filters:format(webp)/newsfirstlive-kannada/media/media_files/2025/11/04/shafali-varma-2025-11-04-22-31-44.jpg)
ಒಂದು ಥ್ರೋ ಬದಲಾಯ್ತು ದೀಪ್ತಿ ಅದೃಷ್ಟ
ವರ್ಲ್ಡ್​ಕಪ್ ಪ್ಲೇಯರ್ ಆಫ್ ದ ಸೀರಿಸ್ ದೀಪ್ತಿ ಶರ್ಮಾ ಕ್ರಿಕೆಟ್ ಜರ್ನಿನೂ ಯಾವ ಸಿನಿಮಾಗಿಂತ ಕಡಿಮೆ ಇಲ್ಲ. ದೀಪ್ತಿಗೆ ಕ್ರಿಕೆಟ್ ಅಂದ್ರೆ ಪ್ರಾಣ. ಆದ್ರೆ ದೀಪ್ತಿ ತಾಯಿಗೆ ಮಗಳು ಕ್ರಿಕೆಟ್ ಆಡೋದು ಇಷ್ಟ ಇರಲಿಲ್ಲ. ಒಂದು ದಿನ ದೀಪ್ತಿ ಸ್ಟ್ರೀಟ್ ಕ್ರಿಕೆಟ್ ಆಡುವಾಗ, ಅದ್ಭುತ ಥ್ರೋ ಮಾಡಿದ್ರು. ದೀಪ್ತಿ ಥ್ರೋ ಗಮನಿಸಿದ ಮಾಜಿ ಕ್ರಿಕೆಟ್ ಆಟಗಾರ್ತಿ ಹೇಮಲತ ಕಲಾ, ಆಕೆಯನ್ನ ತನ್ನ ಅಕಾಡೆಮಿಗೆ ಬಂದು ಟ್ರೈನಿಂಗ್ ಮಾಡುವಂತೆ ತಿಳಿಸಿದ್ರು. ನಂತರ ದೀಪ್ತಿ ಊರಿನ ಜನರ ವಿರೋಧದ ನಡುವೆ, ಕ್ರಿಕೆಟರ್ ಆದ್ಲು. ಭಾರತದ ಸ್ಟಾರ್ ಆಲ್​ರೌಂಡರ್ ಆದ್ಲು.
ಇದನ್ನೂ ಓದಿ: ವಿಶ್ವಕಪ್ ಗೆಲುವಿನ ಹಿಂದೆ ಇಬ್ಬರು ವ್ಯಕ್ತಿಗಳು.. ಆ ತೆರೆ ಮರೆಯ ಕಾಯಿಗಳು ಯಾರು..?
/filters:format(webp)/newsfirstlive-kannada/media/media_files/2025/11/04/shafali-varma-1-2025-11-04-22-31-58.jpg)
ಭಾರತ ವನಿತೆಯರ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್​​​​​ ಕ್ರಿಕೆಟ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹರ್ಮನ್​​​​​​ ಕ್ರಿಕೆಟ್ ಕನಸು ಕಂಡಿದ್ದು, ಫ್ಲಡ್​​​ಲೈಟ್ಸ್​ ಕೆಳಗಲ್ಲ. ಕ್ರೀಡಾಂಗಣದ ಒಳಗೂ ಅಲ್ಲ. ಆಕೆ ಕ್ರಿಕೆಟರ್ ಆಗೋ ಕನಸು ಕಂಡಿದ್ದು, ಪಂಜಾಬ್​ನ ಒಂದು ಸಣ್ಣ ಊರಿನಲ್ಲಿ. ಸ್ಕೂಲ್ ಡ್ರೆಸ್ ಹಾಕಿಕೊಂಡು, ಸೊಂಟಕ್ಕೆ ದುಪ್ಪಟ್ಟ ಕಟ್ಟಿಕೊಂಡು ಹುಡುಗರಿಗೆ ಕ್ವಾಟಲೆ ಕೊಡುತ್ತಿದ್ದ ಹರ್ಮನ್, ಕಮಲ್​ದೀಶ್ ಸಿಂಗ್ ಸೋಧಿ ಅನ್ನೋ ಕೋಚ್ ಕಣ್ಣಿಗೆ ಬಿದ್ದರು. ಆಕೆಯ ಪವರ್​​ಫುಲ್ ಬೌಲಿಂಗ್ ಮತ್ತು ಬ್ಯಾಟ್ ಸ್ವಿಂಗ್ ನೋಡಿ, ಕಮಲ್​ದೀಶ್ ಸಿಂಗ್ ಫಿದಾ ಆದರು. ನಂತರ ಹರ್ಮನ್ ತಂದೆಯನ್ನ ಒಪ್ಪಿಸಿದ ಕೋಚ್, ಆಕೆಯನ್ನ ಮಗಳಂತೆ ನೋಡಿಕೊಂಡು ಟ್ರೈನಿಂಗ್ ಕೊಟ್ಟರು.
ಮಗಳು ಕ್ರಿಕೆಟರ್ ಆಗಿದ್ದು ಹೇಗೆ..?
ಯಂಗ್ ಅಮನ್​ಜೋತ್ ಕೌರ್ ಕ್ರಿಕೆಟರ್ ಆಗೋ ಕನಸು ಕಾಣುವ ಮುನ್ನವೇ ಸಾಲು ಸಾಲು ಸವಾಲುಗಳನ್ನ ಎದುರಿಸಿದ್ರು. ಕ್ರಿಕೆಟ್ ಅನ್ನೋ ಪದವನ್ನೇ ತನ್ನ ಬಾಯಿಂದ ಕಟ್ಟಿಹಾಕಿದ್ದ ಕುಟುಂಸ್ಥರು, ನಂತರ ಅಮನ್​ಜೋತ್​​ ಒತ್ತಡಕ್ಕೆ ಮಣಿಯಲೇಬೇಕಾಯ್ತು. ಅಜ್ಜಿಯ ಆರೈಕೆ, ತಂದೆಯ ಪ್ರೀತಿ ಮತ್ತು ಪ್ರೋತ್ಸಾಹ, ಅಮನ್​​ಜೋತ್​ಗೆ ವರವಾಯ್ತು. ಸಾಮಾನ್ಯ ಕಾರ್ಪೆಂಟರ್ ಆಗಿದ್ದ ತಂದೆ, ಮಗಳ ಕನಸಿಗೆ ನೀರೆರಚಿದ್ರು. ರಾತ್ರಿ ಇಡೀ ನಿದ್ದೆ ಮಾಡದೆ, ತನ್ನ ಮಗಳಿಗೆ ತನ್ನ ಕೈಯಿಂದಲೇ ಬ್ಯಾಟ್ ಮಾಡಿ ಕೊಟ್ಟ ತಂದೆ, ಇಂದು ಮಗಳ ಸಕ್ಸಸ್ ಎಂಜಾಯ್ ಮಾಡ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/03/ind_world_cup-2025-11-03-07-30-32.jpg)
ತರಕಾರಿ, ಹಾಲು ಮಾರುವ ವ್ಯಕ್ತಿಯ ಮಗಳು ಕ್ರಿಕೆಟರ್..!
ಎಡಗೈ ಸ್ಪಿನ್ನರ್ ರಾಧಾ ಯಾದವ್ ಕಥೆ ಎಲ್ಲರಿಗಿಂತಲೂ ವಿಭಿನ್ನ. ಮುಂಬೈನಲ್ಲಿ ಹುಟ್ಟಿ ಕಾಂದಿವಲ್ಲಿಯಲ್ಲಿ ಬೆಳೆದ ರಾಧಾ, ಎರಡುವರೆ ತಿಂಗಳ ಮುನ್ನವೇ ಜನಿಸಿದ್ದಳು. ರಾಧಾ ಬದುಕೋದೇ ಇಲ್ಲ ಅಂತ ಕುಟುಬಸ್ಥರು ಅಂದುಕೊಂಡಿದ್ದರು. ಆದ್ರೆ ಪವಾಡ ರೀತಿಯಂತೆ ರಾಧಾ ಬದುಕಿದಳು. ಬಾಲ್ಯದಲ್ಲಿ ಮುಂಬೈನ ಬೀದಿ ಬೀದಿಗಳಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡ್ತಿದ್ದ ರಾಧಾ, ಒಂದು ದಿನ ಕೋಚ್ ಪ್ರಫುಲ್ ನಾಯಕ್ ಕಣ್ಣಿಗೆ ಬಿದ್ದಳು. ಪ್ರಫುಲ್, ರಾಧಾ ತಂದೆಯನ್ನ ಒಪ್ಪಿಸಿ ಕ್ರಿಕೆಟ್​​​​​ಗೆ ಕರೆದೊಯ್ಯಲು ಮುಂದಾಗಿದ್ರು. ಆದ್ರೆ ತಂದೆ ತರಕಾರಿ, ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಕಾರಣ, ಆರಂಭದಲ್ಲಿ ನಿರಾಕರಿಸಿದ್ರು. ನಂತರ ಕೋಚ್ ಎಲ್ಲಾ ಭರವಸೆ ನೀಡಿದ ಮೇಲೆ ತಂದೆ, ರಾಧಾರನ್ನ ಕ್ರಿಕೆಟ್ ಟ್ರೈನಿಂಗ್​ಗೆ ಕಳುಹಿಸಿಕೊಟ್ಟರು.
16 ವರ್ಷಕ್ಕೆ ಭಾರತ ವನಿತೆಯರ ತಂಡಕ್ಕೆ ಎಂಟ್ರಿ ಕೊಟ್ಟ ರಿಚಾ ಘೋಷ್, ಪ್ರೊಫೆಷನಲ್ ಬಾಸ್ಕೆಟ್​ಬಾಲ್ ಪ್ಲೇಯರ್ ಆಗಿದ್ದ ಪ್ರತಿಕಾ ರಾವಲ್ ಕ್ರಿಕೆಟ್ ಜರ್ನಿ ಸಹ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಕೆಲವರನ್ನ ಮಾತ್ರ ಹೊರತುಪಡಿಸಿದ್ರೆ ಉಳಿದವರೆಲ್ಲಾ ಕಲ್ಲು ಮುಳ್ಳಿನ ಹಾದಿಯಲ್ಲೇ ಬೆಳೆದಿದ್ದಾರೆ. ಸಕ್ಸರ್​ ಕಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us