ವಿಶ್ವಕಪ್ ಗೆಲುವಿನ ಹಿಂದೆ ಇಬ್ಬರು ವ್ಯಕ್ತಿಗಳು.. ಆ ತೆರೆ ಮರೆಯ ಕಾಯಿಗಳು ಯಾರು..?

ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದರು. 40 ದಿನಗಳ ಮೆಗಾ ಜರ್ನಿಯಲ್ಲಿ ಕೌರ್ ಪಡೆ ಏಳು ಬೀಳುಗಳ ನಡುವೆ ವಿಶ್ವಕಪ್ ಗೆದ್ದು ಬೀಗಿತು. ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣ ಇಬ್ಬರಿದ್ದಾರೆ. ಅವರಿಬ್ಬರು ಇಲ್ಲದಿದ್ರೆ ವಿಶ್ವಕಪ್ ಗೆಲ್ಲುತ್ತಲೇ ಇರ್ತಿಲಿಲ್ಲ. ಅವಱರು?

author-image
Ganesh Kerekuli
amol muzumdar coach (2)

Photograph: (@BCCIWomen)

Advertisment

ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದರು. 40 ದಿನಗಳ ಮೆಗಾ ಜರ್ನಿಯಲ್ಲಿ ಹರ್ಮನ್​ಪ್ರೀತ್ ಕೌರ್ ಪಡೆ ಏಳು ಬೀಳುಗಳ ನಡುವೆ ವಿಶ್ವಕಪ್ ಗೆದ್ದು ಬೀಗಿತು. ಆದ್ರೆ ಭಾರತ ವನಿತೆಯರ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣ ಇಬ್ಬರಿದ್ದಾರೆ. ಅವರಿಬ್ಬರು ಇಲ್ಲದಿದ್ರೆ ವಿಶ್ವಕಪ್ ಗೆಲ್ಲುತ್ತಲೇ ಇರ್ತಿಲಿಲ್ಲ. ಅವಱರು? 

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಭಾರತದ ವನಿತೆಯರ ಪಾಲಿಗೆ ಅತ್ಯಂತ ಪ್ರತಿಷ್ಟೆಯಾಗಿತ್ತು. ಈ ಬಾರಿ ತವರಿನಲ್ಲಿ ವಿಶ್ವಕಪ್ ಗೆಲ್ಲದೇ ಇದ್ರೆ ಇನ್ಯಾವತ್ತೂ ಗೆಲ್ಲೋಕೆ ಆಗೊಲ್ಲ ಅಂತ, ಕ್ಯಾಪ್ಟನ್ ಹರ್ಮನ್​ಪ್ರೀತ್ ಕೌರ್​​ಗೆ ಗೊತ್ತಿತ್ತು. ಹಾಗಾಗಿ ಶತಾಯಗತಾಯ ಕಪ್ ಗೆಲ್ಲಲೇಬೇಕು ಅಂತ ದಿಟ್ಟ ಹೋರಾಟ ನಡೆಸಿದ್ರು.

ಇದನ್ನೂ ಓದಿ: Rising Stars Asia Cup​; ಭಾರತ ತಂಡಕ್ಕೆ RCB ವಿಕೆಟ್​ ಕೀಪರ್ ಕ್ಯಾಪ್ಟನ್​, ವೈಭವ್​ಗೆ ಸ್ಥಾನ!

amol muzumdar coach (1)
Photograph: (@BCCIWomen)

ಲೀಗ್ ಪಂದ್ಯಗಳಲ್ಲಿ ಭಾರತ ವನಿತೆಯರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಆದ್ರೆ ನಾಕೌಟ್​ ಸ್ಟೇಜ್​ನಲ್ಲಿ ಹರ್ಮನ್​ ಪಡೆಯದ್ದು ಎಕ್ಸಲೆಂಟ್ ಪರ್ಫಾಮೆನ್ಸ್. ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನ ಬಗ್ಗು ಬಡಿದ ಭಾರತ ವನಿತೆಯರು, ಫೈನಲ್​​ಗೆ ಲಗ್ಗೆ ಇಟ್ಟಿದ್ರು. ಫೈನಲ್ ಫೈಟ್​ನಲ್ಲಿ ಗೆದ್ದು ಬೀಗಿದ್ರು. ಭಾರತ ವನಿತೆಯರ ವಿಶ್ವಕಪ್ ಗೆಲುವಿನ ಹಿಂದೆ, ಇಬ್ಬರು ಮಹಾನ್ ವ್ಯಕ್ತಿಗಳಿದ್ದಾರೆ. ಅವರೇ ಕೋಚ್ ಅಮೋಲ್ ಮಜುಂದಾರ್ ಮತ್ತು ಐಸಿಸಿ ಚೇರ್ಮನ್ ಜೈ ಶಾ.

ಕೋಚ್ ಹುದ್ದೆ ಅಲಂಕರಿಸಿದ್ದ ದಿನವೇ ಶಪಥ

ಅಕ್ಟೋಬರ್ 2023, ಅಮೋಲ್ ಮಜುಂದಾರ್, ಭಾರತ ವನಿತೆಯರ ತಂಡದ ಕೋಚ್ ಆಗಿ ನೇಮಕಗೊಂಡ್ರು. ಕೋಚ್ ಹುದ್ದೆ ಅಲಂಕರಿಸಿದ್ದ ದಿನವೇ ಮಜುಂದಾರ್, ಏಕದಿನ ವಿಶ್ವಕಪ್ ಗೆಲ್ಲೋಕೆ ಬ್ಲೂ ಪ್ರಿಂಟ್ ರೆಡಿ ಮಾಡಿದ್ರು. 2 ವರ್ಷಗಳ ಕಾಲವಧಿಯಲ್ಲಿ ಮಜುಂದಾರ್, ಬ್ಯಾಕ್​​ಗ್ರೌಂಡ್​ನಲ್ಲಿ ಇತರೆ ಕೋಚಿಂಗ್ ಸ್ಟಾಫ್​ ಜೊತೆಗೂಡಿ, ಸಿಕ್ಕಾಪಟ್ಟೆ ಹೋಂ ವರ್ಕ್ ಮಾಡಿದ್ರು. ಹರ್ಮನ್​ ಪಡೆಗೆ ಬಲ ತುಂಬಲು ಏನೆಲ್ಲಾ ಬೇಕು ಅನ್ನೋದನ್ನ ಅರ್ಥ ಮಾಡಿಕೊಂಡ್ರು. 

ಹೆಡ್ ಕೋಚ್ ಆದ ಬಳಿಕ ಮಜುಂದಾರ್​​​​​​​​​​​​​​​​​​​​​​​​​​​​​​​​​​​​​​​​​​​​​ ಮಾಡಿದ ಮೊದಲ ಕೆಲಸ, ಕೋರ್ ಟೀಮ್ ಕಟ್ಟಿದ್ದು.! ಸುಮಾರು 20 ರಿಂದ 25 ಮಂದಿಯನ್ನ ಗುರುತಿಸಿದ್ದ ಕೋಚ್, ಅವರಲ್ಲಿ ತಂಡಕ್ಕೆ ಫಿಟ್ ಆಗೋ ಆಟಗಾರ್ತಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡರು. ನಂತರ ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ಆ ಆಟಗಾರ್ತಿಯರಿಗೆ ಅವಕಾಶ ಮಾಡಿಕೊಟ್ರು. ದಿನ ಕಳೆದಂತೆ ತಂಡದ ಬಗ್ಗೆ ಕ್ಲ್ಯಾರಿಟಿ ಪಡೆದುಕೊಂಡ ಕೋಚ್, ಎಲ್ಲೂ ಟ್ರ್ಯಾಕ್ ತಪ್ಪಲಿಲ್ಲ.

ಇದನ್ನೂ ಓದಿ:ರೋಹಿತ್ ಶರ್ಮಾ, ಕೆ.ಎಲ್ ರಾಹುಲ್​ಗಾಗಿ IPL ಫ್ರಾಂಚೈಸಿಗಳಿಂದ ಹಣದ ಹೊಳೆ..!

ಜಯ್ ಶಾಗೆ ಕ್ರಿಕೆಟ್ ‘ಏನು ಗೊತ್ತು’ ಅಂತಾ ಹಂಗಿಸೋರು ಓದಲೇಬೇಕಾದ ಸ್ಟೋರಿ ಇದು..!

ತಂಡ ಕಟ್ಟಿದ ಬಳಿಕ ಕೋಚ್ ಮಜುಂದಾರ್, ಸೈಲೆಂಟ್ ಆಗಲಿಲ್ಲ. ಪ್ರತಿಯೊಬ್ಬ ಆಟಗಾರ್ತಿಯರ ಮೇಲೆ ಹದ್ದಿನ ಕಣ್ಣಿಟ್ಟರು. ಪ್ರತಿಯೊಬ್ಬ ಆಟಗಾರ್ತಿಯ ಸ್ಟ್ರೇಂಥ್ ಌಂಡ್ ವೀಕ್ನೆಸ್ ಗಮನಿಸಿದ್ರು. ವೀಕ್ ಪ್ಲೇಯರ್​ಗಳ ಮೇಲೆ ಹೆಚ್ಚು ಒತ್ತು ಕೊಟ್ಟರು. ಅವರನ್ನ ಸರಿಯಾದ ಟ್ರ್ಯಾಕ್​​ಗೆ ಕರೆದುಕೊಂಡು ಹೋದರು. ವಿಶ್ವಕಪ್​ನಂತಹ ಮೆಗಾ ಟೂರ್ನಿ ಆಡಲು ರೆಡಿ ಮಾಡಿದ್ರು. ಭಾರತ ಮಹಿಳೆಯರಲ್ಲಿ, ಒಂದೇ ಒಂದು ಸಣ್ಣ ವೀಕ್ನೆಸ್ ಕೂಡ ಕಾಣಲಿಲ್ಲ. ಹಾಗಾಗಿ ವಿಶ್ವಕಪ್​​ಗೆ ಎಂಟಿ ಆಗ್ತಿದಂತೆ ಹರ್ಮನ್​​ ಪಡೆ, ಟೂರ್ನಿ ಗೆಲ್ಲೋ ಫೇವರಿಟ್ಸ್ ಎನಿಸಿಕೊಂಡರು. 

ತಂಡ ಸಕ್ಸಸ್​​ಫುಲ್ ಆಗಬೇಕಂದ್ರೆ ಕ್ಯಾಪ್ಟನ್ ಮತ್ತು ಕೋಚ್, ಒಂದೇ ಟ್ರ್ಯಾಕ್​ನಲ್ಲಿ ಇರಬೇಕು. ಇಬ್ಬರ ಪ್ಲಾನ್ ಒಂದೇ ಆಗಿರಬೇಕು. ಇಬ್ಬರೂ ಒಂದೇ ಮಾತಲ್ಲಿ ನಿಲ್ಲಬೇಕು. ಈ ವಿಚಾರದಲ್ಲಿ ಹರ್ಮನ್​​ಪ್ರೀತ್ ಮತ್ತು ಕೋಚ್ ಮಜುಂದಾರ್, ಇಬ್ಬರದ್ದು ಒಂದೇ ಸ್ಟ್ಯಾಂಡ್. ತಂಡದ ಆಯ್ಕೆಯಲ್ಲಿ ಹರ್ಮನ್​​ಗೆ ಫ್ರೀ ಹ್ಯಾಂಡ್ ಕೊಟ್ಟಿರುವ ಕೋಚ್, ಎಲ್ಲೂ ಮಧ್ಯ ಪ್ರವೇಶಿಸೋದಿಲ್ಲ. ಡ್ರೆಸಿಂಗ್​ ರೂಮ್​ನಲ್ಲೂ ಕೋಚ್ ಮಜುಂದಾರ್ ಒಳ್ಳೆ ವಾತಾವರಣ ಸೃಷ್ಟಿ ಮಾಡಿದ್ದಾರೆ. ಸೀನಿಯರ್ ಜ್ಯೂನಿಯರ್ ಅನ್ನೋ ಭೇದಭಾವವನ್ನ ಹಳಸಿಹಾಕಿದ್ದಾರೆ. ಒಂದು ತಂಡ ಸಕ್ಸಸ್​​ ಆಗೋದಕ್ಕೆ, ಇದಕ್ಕಿಂತ ಇನ್ನೇನು ಬೇಕು ಅಲ್ವಾ..?  

ಜಯ್ ಶಾ ಕೊಡುಗೆ

ಕೋಚ್ ಅಮೋಲ್ ಮಜುಂದಾರ್ ಜೊತೆಗೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಹಾಲಿ ಐಸಿಸಿ ಛೇರ್ಮನ್ ಜಯ್ ಶಾ, ಭಾರತ ವನಿತೆಯರ ವಿಶ್ವಕಪ್ ಗೆಲುವಿಗೆ ಕಾರಣ ಎನ್ನಬಹುದು. ಯಾಕಂದ್ರೆ ಮಹಿಳಾ ಕ್ರಿಕೆಟ್​​ಗೆ ಜಯ್ ಶಾ ಕೊಡುಗೆ ಅಪಾರ. ಜಯ್ ಶಾ ಬಿಸಿಸಿಐಗೆ ಎಂಟ್ರಿ ಕೊಟ್ಟ ಮೇಲೆ, ಭಾರತೀಯ ಮಹಿಳಾ ಕ್ರಿಕೆಟ್​ ಸ್ಟ್ರಕ್ಚರ್ ಬದಲಾಯ್ತು. ಮಹಿಳಾ ಕ್ರಿಕೆಟ್ ನಿರೀಕ್ಷೆಗೂ ಮೀರಿದ ಅಭಿವೃದ್ದಿಯಾಯ್ತು. ಮಹಿಳಾ ಕ್ರಿಕೆಟ್​​ ಬೆಳವಣಿಗೆಗೆ ವಿರೋಧ ವ್ಯಕ್ತವಾಗ್ತಿದ್ರೂ, ಜಯ್ ಶಾ ಕೇರೇ ಮಾಡಲಿಲ್ಲ. ಬದಲಿಗೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಬೆನ್ನಿಗೆ ನಿಂತ ಶಾ, ಅವರ ಸಂಭಾವನೆಯನ್ನ ಹೆಚ್ಚಿಸಿದ್ರು. 

ಇದನ್ನೂ ಓದಿ: ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ ಬಿಸಿಸಿಐ : ಎಷ್ಟು ಕೋಟಿ ಗೊತ್ತಾ?

amol muzumdar coach (3)

ಪರುಷ ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಬೇಧಭಾವ ಅಳಿಸಿಹಾಕಿದ್ರು. ಹೆಚ್ಚು ಹೆಚ್ಚು ಡೊಮೆಸ್ಟಿಕ್​ ಕ್ರಿಕೆಟ್ ಲೀಗ್​ಗಳನ್ನ ಆಡಿದ್ರು. ಅದ್ರಲ್ಲೂ ಪ್ರಮುಖವಾಗಿ ಮಹಿಳಾ ಕ್ರಿಕೆಟಿಗರಿಗೊಸ್ಕರವೇ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಿಸಿದ್ರು. ಬಿಸಿಸಿಐಗೆ ಕ್ರಿಕೆಟ್​ನಿಂದ ಬಂದ ಆದಾಯವನ್ನೆಲ್ಲಾ ಕ್ರಿಕೆಟ್​​ಗೆ ಖರ್ಚು ಮಾಡಿದ್ರು. ಜಯ್ ಶಾ ಇಲ್ಲದಿದ್ರೆ ಇವತ್ತು ಮಹಿಳಾ ಕ್ರಿಕೆಟ್​ಗೆ ಹೆಚ್ಚು ಮನ್ನಣೆ ಸಿಗುತ್ತಿರಲಿಲ್ಲ.  ಹೆಚ್ಚು ಸೌಲಭ್ಯಗಳೂ ಸಿಗುತ್ತಿರಲಿಲ್ಲ. ಹಾಗೆ ನಿರೀಕ್ಷೆಗೂ ಮೀರಿದ ಮ್ಯಾಚ್ ಫೀಸ್​​​​​​​​, ಕಾಂಟ್ರ್ಯಾಕ್ಟ್​ ಕೂಡ ಸಿಗುತ್ತಿರಲಿಲ್ಲ. ಮಹಿಳಾ ಕ್ರಿಕೆಟ್ ಅಭಿವೃದ್ದಿಗೆ ಶ್ರಮಿಸಿದ ಜಯ್ ಶಾ, ರಿಯಲಿ ಗ್ರೇಟ್. ​​​​​​  

ಭಾರತ ಮಹಿಳಾ ತಂಡದ ವಿಶ್ವಕಪ್ ಗೆಲುವಿಗೆ, ಕೋಚ್ ಅಮೋಲ್ ಮಜುಂದಾರ್ ಮತ್ತು ಜಯ್ ಶಾ ಇಬ್ಬರೂ, ಪರೋಕ್ಷ ಕಾರಣ. ತೆರೆ ಹಿಂದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಇಬ್ಬರಿಗೂ, ಹ್ಯಾಟ್ಸ್​ಆಫ್ ಹೇಳಲೇಬೇಕು.  

ಇದನ್ನೂ ಓದಿ: World Cup Final; ಯುವತಿಯರು ವಿಶ್ವಕಪ್ ಗೆಲ್ಲುತ್ತಿದ್ದಂತೆ ರೋಹಿತ್ ಶರ್ಮಾ ಕಣ್ಣೀರು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Women’s ODI World Cup 2025 Women's World Cup World Cup ODI World Cup 2025 coach amol muzumdar
Advertisment