/newsfirstlive-kannada/media/media_files/2025/11/04/jitesh_sharma-2025-11-04-14-46-45.jpg)
ಇದೇ ನವೆಂಬರ್​ 14 ರಿಂದ ಕತಾರ್​ನಲ್ಲಿ ಆರಂಭವಾಗುವ ಏಷ್ಯನ್ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ರೈಸಿಂಗ್ ಸ್ಟಾರ್ಸ್​ ಏಷ್ಯಾ ಕಪ್​ಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಿರಿಯ ಆಟಗಾರರ ಆಯ್ಕೆ ಸಮಿತಿ ಭಾರತ ಎ ತಂಡಕ್ಕೆ ಆಟಗಾರರ ಹೆಸರನ್ನು ಘೋಷಣೆ ಮಾಡಿದೆ.
​ಬಿಸಿಸಿಐ ಘೋಷಣೆ ಮಾಡಿರುವ ಭಾರತ-ಎ ತಂಡದ 15 ಆಟಗಾರರನ್ನು ವಿಕೆಟ್​ ಕೀಪರ್ ಕಮ್ ಬ್ಯಾಟರ್ ಜಿತೇಶ್ ಮಾರ್ಮಾ ಅವರು ಮುನ್ನಡೆಸಲಿದ್ದಾರೆ. ಪಂಜಾಬ್​ನ ನಮನ್ ಧೀರ್ ಅವರನ್ನು ಉಪನಾಯಕನಾಗಿ ಮಾಡಲಾಗಿದೆ. ಭಾರತದ ಯುವ ಆಟಗಾರರಲ್ಲಿ ಮಿಂಚು ಹರಿಸುತ್ತಿರುವ ವೈಭವ್ ಸೂರ್ಯವಂಶಿ ತನ್ನ 14 ವಯಸ್ಸಿನಲ್ಲೇ ಭಾರತ-ಎ ತಂಡಕ್ಕೆ ಆಯ್ಕೆ ಆಗಿರುವುದು ವಿಶೇಷ. ಜೊತೆಗೆ ಪ್ರಿಯಾಂಶ್ ಆರ್ಯ ಕೂಡ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್​ಗಾಗಿ IPL ಫ್ರಾಂಚೈಸಿಗಳಿಂದ ಹಣದ ಹೊಳೆ..!
/filters:format(webp)/newsfirstlive-kannada/media/media_files/2025/11/04/jitesh_sharma_rcb-2025-11-04-14-46-55.jpg)
ಐಪಿಎಲ್​ 2025ರಲ್ಲಿ ಆರ್​ಸಿಬಿ ತಂಡದಲ್ಲಿ ಆಡಿದ್ದ ಜಿತೇಶ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದು ಹೊಬಾರ್ಟ್​​ನಲ್ಲಿ ನಡೆದ 3ನೇ ಪಂದ್ಯದಲ್ಲಿ ಆಡಿದ್ದಾರೆ. ಈ ಪಂದ್ಯದಲ್ಲಿ 22 ರನ್ ಗಳಿಸುವ ಮೂಲಕ ಜಿತೇಶ್ ಶರ್ಮಾ ಸರಣಿಯಲ್ಲಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟರು. ಈ ವರ್ಷ ಆರ್​ಸಿಬಿ ಟ್ರೋಫಿ ಎತ್ತಿ ಹಿಡಿಯುವಲ್ಲಿಯು ಜಿತೇಶ್ ಬ್ಯಾಟಿಂಗ್, ಕೀಪರ್​ ಸ್ಥಾನದ ಜವಾಬ್ದಾರಿ ಹೆಚ್ಚಿಗೆ ಇತ್ತು.
ಬಿಸಿಸಿಐ ಆಯ್ಕೆ ಮಾಡಿದ ಭಾರತ- ಎ ಟೀಮ್
ಜಿತೇಶ್ ಶರ್ಮಾ (ನಾಯಕ) (ವಿಕೆಟ್ ಕೀಪರ್), ನಮನ್ ಧೀರ್ (ಉಪನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಜ್, ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಕ್, ಯುದ್ವೀರ್ ಸಿಂಗ್ ಚರಕ್ (ವಿಕೆಟ್ ಕೀಪರ್).
ಸ್ಟ್ಯಾಂಡ್ ಬೈ ಆಟಗಾರರು: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us