/newsfirstlive-kannada/media/media_files/2025/11/04/kl_rahul_rohit-2025-11-04-11-24-17.jpg)
ಐಪಿಎಲ್​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ರಿಟೈನ್ಶನ್​ ಡೇಟ್​ ಹತ್ತಿರವಾದಂತೆ ರಿಟೈನ್​, ರಿಲೀಸ್​, ಟ್ರೇಡಿಂಗ್​ ಲೆಕ್ಕಾಚಾರಗಳು ಭರ್ಜರಿಯಾಗಿ ನಡೀತಿವೆ. ಮುಂದಿನ ಸೀಸನ್​ಗೆ ಬಲಿಷ್ಟ ತಂಡ ಕಟ್ಟೋ ಲೆಕ್ಕಾಚಾರದಲ್ಲಿರೋ ಫ್ರಾಂಚೈಸಿಗಳು, ಕೋಟಿ ಕೋಟಿ ಸುರಿಯೋಕೆ ರೆಡಿಯಾಗಿವೆ. ಯಾವ ಆಟಗಾರನ ಮೇಲೆ ಯಾವ ಫ್ರಾಂಚೈಸಿ ಕಣ್ಣು ಬಿದ್ದಿದೆ?.
ಇಂಡಿಯನ್​ ಪ್ರೀಮಿಯರ್​​ ಲೀಗ್​ ಮಿನಿ ಆಕ್ಷನ್​ಗೆ ದಿನ ಹತ್ತಿರವಾದಂತೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆಗಳು ಜೋರಾಗಿವೆ. ರಿಟೈನ್​, ರಿಲೀಸ್​ ಟ್ರೇಡಿಂಗ್​ನ ಲೆಕ್ಕಾಚಾರಗಳು ಸೈಲೆಂಟಾಗಿ ನಡೀತಿವೆ. ತೆರೆಯ ಹಿಂದೆಯೇ ಝಣಝಣ ಕಾಂಚಾಣದ ಸದ್ದು ಜೋರಾಗಿದೆ. ಬಿಗ್​ ಸ್ಟಾರ್​​ಗಳನ್ನ ಬೇಟೆಯಾಡಲು ಮುಂದಾಗಿರೋ ಫ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿಯೋಕೆ ರೆಡಿಯಾಗಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/05/MI-VS-GT-IPL-3.jpg)
26 ಕೋಟಿಗೆ ಕೆಕೆಆರ್​ಗೆ ರೋಹಿತ್​ ಶರ್ಮಾ ಡೀಲ್​.?
ಮುಂಬೈನ ರಾಜ ರೋಹಿತ್​ ಶರ್ಮಾ ಕೊಲ್ಕತ್ತಾಗೆ ಕರೆ ತರೋಕೆ ತೆರೆಯ ಹಿಂದೆ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ನಡೀತಿದೆ. ಕೆಲ ದಿನಗಳ ಹಿಂದಷ್ಟೇ ರೋಹಿತ್​​ ಆಪ್ತಗೆಳೆಯ ಅಭಿಷೇಕ್​ ನಾಯರ್​ನ ಫ್ರಾಂಚೈಸಿಯ ಹೆಡ್​ಕೋಚ್​ ಪಟ್ಟವನ್ನೇರಿದ್ದಾರೆ. ಅಭಿಶೇಕ್​ ಹೆಡ್​ ಕೋಚ್​ ಹುದ್ದೆ ಅಲಂಕರಿಸಿದ ಮೇಲೆ ರೋಹಿತ್​ ಕರೆ ತರೋ ಯತ್ನ ಮತ್ತಷ್ಟು ತೀವ್ರವಾಗಿದೆ. ರೋಹಿತ್​ಗಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 26 ಕೋಟಿ ಹಣ ಖರ್ಚು ಮಾಡೋಕೆ ಫ್ರಾಂಚೈಸಿ ರೆಡಿಯಾಗಿದೆ ಅನ್ನೋದು ಲೇಟೆಸ್ಟ್​ ಮಾಹಿತಿಯಾಗಿದೆ. 23 ಕೋಟಿ ಕೊಟ್ಟು ಖರೀದಿಸಿರೋ ವೆಂಕಟೇಶ್​ ಅಯ್ಯರ್​ನ ರಿಲೀಸ್​ ಮಾಡಿ, ರೋಹಿತ್​ನ ಕರೆ ತರೋ ಪ್ಲಾನ್​ ನಡೀತಿದೆ.
ರಾಜಸ್ಥಾನಕ್ಕೆ ಸ್ಟಬ್ಸ್​.. ಡೆಲ್ಲಿಗೆ ಸಂಜು ಸ್ಯಾಮ್ಸನ್​.!
ರಾಜಸ್ಥಾನ ರಾಯಲ್ಸ್​ಗೆ ಸಂಜು ಸ್ಯಾಮ್ಸನ್​​ ಗುಡ್​ ಬೈ ಹೇಳೋದು ಕನ್​​ಫರ್ಮ್​​ ಆಗಿದೆ. ಸಂಜುವಿನ ಮುಂದಿನ ನಿಲ್ದಾಣ ಯಾವುದು ಅನ್ನೋದು ಈವರೆಗೂ ಪ್ರಶ್ನೆಯಾಗಿ ಉಳಿದಿತ್ತು. ಮೊದಲು ಆಸಕ್ತಿ ತೋರಿದ್ದ ಚೆನ್ನೈ ಫ್ರಾಂಚೈಸಿ ಆ ಬಳಿಕ ಹೆಜ್ಜೆ ಹಿಂದಿಟ್ಟಿದೆ. ಇದೀಗ ನಾಯಕನ ಹುಡುಕಾಟದಲ್ಲಿರೋ ಡೆಲ್ಲಿ ಕ್ಯಾಪಿಟಲ್ಸ್​​ ಫ್ರಾಂಚೈಸಿ ಸಂಜು ಸ್ಯಾಮ್ಸನ್​ ಟ್ರೇಡಿಂಗ್​ಗೆ ಒಲವು ತೋರಿದೆ.
ಸಂಜು ಸ್ಯಾಮ್ಸನ್​ನ ಟ್ರೇಡಿಂಗ್​ಗೆ ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಜೊತೆಗೆ ಡೆಲ್ಲಿ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದೆ. ಟ್ರಿಸ್ಟನ್​ ಸ್ಟಬ್ಸ್​ನ ಬಿಟ್ಟು ಕೊಟ್ಟು ಸಂಜು ಸ್ಯಾಮ್ಸನ್​ನ ಕರೆ ತರಲು ಫ್ರಾಂಚೈಸಿಗಳ ನಡುವೆ ಹಲವು ಹಂತಗಳಲ್ಲಿ ಮಾತುಕತೆ ನಡೆದಿದೆ. ಅಂತಿಮ ನಿರ್ಧಾರವಷ್ಟೇ ಸದ್ಯ ಬಾಕಿ ಉಳಿದಿರೋದು.
RCBಯಿಂದ ಯಶ್​ ದಯಾಳ್​, ಲಿವಿಂಗ್​ಸ್ಟೋನ್​ ರಿಲೀಸ್​.!
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯಲ್ಲೂ ರಿಲೀಸ್​ ಲಿಸ್ಟ್​ ರೆಡಿಯಾಗಿದೆ. ಅತ್ಯಾಚಾರದ ಆರೋಪ ಎದುರಿಸ್ತಾ ಇರೋ ವೇಗಿ ಯಶ್ ದಯಾಳ್​ನ ರಿಲೀಸ್​ ಮಾಡಲು ಫ್ರಾಂಚೈಸಿ ಮುಂದಾಗಿದೆ. ಜೊತೆಗೆ ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸ್ತಾ ಇರೋ ಲಯಾಮ್​ ಲಿವಿಂಗ್​ಸ್ಟೋನ್​​ನೂ ರಿಲೀಸ್​ ಮಾಡೋದು ಕನ್​​​ಫರ್ಮ್​ ಆಗಿದೆ. ಈ ಮೂಲಕ ಬಿಗ್​ ಅಮೌಂಟ್​ನೊಂದಿಗೆ ಆಕ್ಷನ್​ಗೆ ಹೋಗಲು ಮ್ಯಾನೇಜ್​ಮೆಂಟ್​ ಚಿಂತಿಸಿದೆ.
ಇದನ್ನೂ ಓದಿ:ಬೆಂಗಳೂರಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಬಸ್ ಪಲ್ಟಿ.. ಓರ್ವ ಇನ್ನಿಲ್ಲ, 9 ಜನ ಗಂಭೀರ!
/filters:format(webp)/newsfirstlive-kannada/media/media_files/2025/08/04/kl-rahul-delhi-capitals-1-2025-08-04-09-57-41.jpg)
ರಾಹುಲ್​ ಬೇಟೆಗೆ 2 ಫ್ರಾಂಚೈಸಿಗಳ ಸತತ ಪ್ರಯತ್ನ.!
ಕನ್ನಡಿಗ ಕೆ.ಎಲ್​ ರಾಹುಲ್​ಗೂ ತೀವ್ರ ಬೇಡಿಕೆಯಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿರೋ ರಾಹುಲ್​ ಮೇಲೆ 2 ಫ್ರಾಂಚೈಸಿಗಳ ಕಣ್ಣಿದೆ. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಹಾಗೂ ನಾಯಕನ ಹುಡುಕಾಟದಲ್ಲಿರೋ ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿಗಳು ರಾಹುಲ್​ ಟ್ರೇಡಿಂಗ್​ಗೆ ಒಲವು ತೋರಿವೆ. ಆದ್ರೆ, ಡೆಲ್ಲಿ ಸೇರಿದಾಗಲೇ ನನಗೆ ಕ್ಯಾಪ್ಟೆನ್ಸಿ ಬೇಡ ಎಂದಿದ್ದ ರಾಹುಲ್​, ಈಗ ಆಫರ್​​ಗಳನ್ ಒಪ್ತಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಫ್ರಾಂಚೈಸು ಟ್ರೇಡಿಂಗ್​ಗೆ ಮುಂದಾದ್ರೂ ರಾಹುಲ್​ ಒಪ್ಪಿಗೆ ಬೇಕೆ ಬೇಕು.
ಇವರಿಷ್ಟೇ ಅಲ್ಲ, ಇನ್ನೂ ಹಲವು ಆಟಗಾರರ ಟ್ರೇಡಿಂಗ್, ರಿಲೀಸ್​ ಮಾತುಕತೆಗಳು ಗುಪ್ತವಾಗಿ ನಡೀತಿವೆ, ಮಿನಿ ಆಕ್ಷನ್​ಗೆ ದಿನಗಣನೆ ಆರಂಭವಾದಂತೆ ಐಪಿಎಲ್​ ಫ್ರಾಂಚೈಸಿಗಳ ವಲಯದಲ್ಲಿ ಚುಟುವಟಿಕೆಗಳು ಜೋರಾಗಿವೆ. ಕಾಂಚಾಣದ ಸದ್ದು ಕೂಡ ಜೋರಾಗಿದೆ. ಈ ತಿಂಗಳ ಅಂತ್ಯದಲ್ಲಿ ರಿಟೈನ್​, ರಿಲೀಸ್​ & ಟ್ರೇಡಿಂಗ್​ನ ಕ್ಲೀಯರ್​​ ಪಿಚ್ಚರ್​ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us