Advertisment

ಬೆಂಗಳೂರಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಬಸ್ ಪಲ್ಟಿ.. ಓರ್ವ ಇನ್ನಿಲ್ಲ, 9 ಜನ ಗಂಭೀರ!

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ದುರ್ಘಟನೆ ನಡೆದಿದೆ. ಜಬ್ಬರ್​ ಟ್ರಾವೆಲ್ಸ್​ ಎನ್ನುವ ಖಾಸಗಿ ಬಸ್​ವೊಂದು ಈಚರ್ ವಾಹನಕ್ಕೆ ಭೀಕರವಾಗಿ ಗುದ್ದಿ ಪಲ್ಟಿ ಹೊಡೆದಿದೆ. ಇದರಿಂದ ವ್ಯಕ್ತಿವೊಬ್ಬರು ಪ್ರಾಣ ಕಳೆದುಕೊಂಡಿದ್ದು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ

author-image
Bhimappa
AP_BUS_ACCIDENT
Advertisment

ಅಮರಾವತಿ: ತೆಲಂಗಾಣದಲ್ಲಿ ನಿನ್ನೆಯಷ್ಟೇ ಬಸ್​ಗೆ, ಬೆಂಜ್ ಲಾರಿ ಡಿಕ್ಕಿ ಹೊಡೆದು 21 ಜನರು ಉಸಿರು ಚೆಲ್ಲಿದ್ದರು. ಇದರ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಮಧ್ಯರಾತ್ರಿ ಮತ್ತೊಂದು ಘೋರ ದುರಂತ ನಡೆದಿದೆ. ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್​ವೊಂದು ಮುಗುಚಿ ಬಿದ್ದು ಓರ್ವ ಮೃತಪಟ್ಟಿದ್ದು 9 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisment

ಆಂಧ್ರ ಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಚೆನೆಕೊತಪಲ್ಲಿ ಪಂಚಾಯತಿಯ ದಾಮಾಜಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ದುರ್ಘಟನೆ ನಡೆದಿದೆ. ಜಬ್ಬರ್​ ಟ್ರಾವೆಲ್ಸ್​ ಎನ್ನುವ ಖಾಸಗಿ ಬಸ್​ವೊಂದು ಈಚರ್ ವಾಹನಕ್ಕೆ ಭೀಕರವಾಗಿ ಗುದ್ದಿ ಪಲ್ಟಿ ಹೊಡೆದಿದೆ. ಇದರಿಂದ ವ್ಯಕ್ತಿವೊಬ್ಬರು ಪ್ರಾಣ ಕಳೆದುಕೊಂಡಿದ್ದು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಘಾಟ್​ನಲ್ಲಿ ಕಮರಿಗೆ ಉರುಳಿದ ಬಸ್​.. ಕೊನೆಯುಸಿರೆಳೆದ ಮೂವರು, 38 ಪ್ರಯಾಣಿಕರು ಗಂಭೀರ

AP_BUS_ACCIDENTS

ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ನಡೆದ ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಜಬ್ಬರ್​ ಟ್ರಾವೆಲ್ಸ್ ಬಸ್​ ಬೆಂಗಳೂರಿನಿಂದ ಹೈದರಾಬಾದ್​ಗೆ ಹೋಗುತ್ತಿತ್ತು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬಸ್ ಮುಗುವಿ ಬಿದ್ದಿದೆ.      ​  

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus Andhra Pradesh
Advertisment
Advertisment
Advertisment