/newsfirstlive-kannada/media/media_files/2025/11/04/mp_bus_new-2025-11-04-08-45-57.jpg)
ಇಂದೋರ್: ಪ್ರಯಾಣಿಕರು ಇರುವ ಬಸ್​ವೊಂದು ರಾತ್ರಿ ಕಮರಿಗೆ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದು 38 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಭೇರು ಘಾಟ್​ನಲ್ಲಿ ಈ ಘಟನೆ ನಡೆದಿದೆ.
ಓಂಕಾರೇಶ್ವರದಿಂದ ಇಂದೋರ್​ಗೆ ಹೊರಟಿದ್ದ ಬಸ್ ಭೇರು ಘಾಟ್ ಬಳಿ ಬರುತ್ತಿದ್ದಂತೆ ಕಮರಿಗೆ ಉರುಳಿ ಬಿದ್ದಿದೆ. ಹೀಗಾಗಿ ಬಸ್​ನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 38 ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/11/04/mp_bus-2025-11-04-08-46-06.jpg)
ಸದ್ಯ ಗಾಯಾಳುಗಳನ್ನು ಇಂದೋರ್​ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಹೇಳತೀರಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣೆ ಕಾರ್ಯದಲ್ಲಿ ತೊಡಗಿ ಹಲವರನ್ನು ಕಾಪಾಡಿದ್ದಾರೆ. ಆ್ಯಂಬುಲೆನ್ಸ್​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಘಟನೆಯಲ್ಲಿ ಬದುಕುಳಿದ ನವಲ್ ಸಿಂಗ್ ಚೌಹಾಣ್ ಎನ್ನುವರು ಮಾತನಾಡಿ, ಬಸ್​ ಇಂದೋರ್​ಗೆ ಹೋಗುವಾಗ ಮಾರ್ಗಮಧ್ಯೆ ಡಾಬಾದಲ್ಲಿ ನಿಲ್ಲಿಸಿ ಎಲ್ಲರೂ ಊಟ ಮಾಡಿದ್ದೇವು. ಮತ್ತೆ ಬಸ್ ಹೊರಡಲು ಪ್ರಾರಂಭವಾಗಿ ಸ್ವಲ್ಪ ದೂರ ಹೋಗಿತ್ತು ಅಷ್ಟೇ, ಆದರೆ ಅಷ್ಟರಲ್ಲೇ ಆಳವಾದ ಕಮರಿಗೆ ಬಸ್​ ಬಿದ್ದಿತು ಎಂದಿದ್ದಾರೆ. ಅಲ್ಲದೇ ಘಟನೆಯಲ್ಲಿ ಬದುಕುಳಿದ ಇಲ್ಲೊಬ್ಬರು ಮಾತನಾಡಿ, ಅನಿತಾ ಬಾಯಿ ಎನ್ನುವ ನನ್ನ ಅತ್ತೆಯನ್ನು ಕಳೆದುಕೊಂಡೆ ಎಂದು ಕಣ್ಣೀರು ಹಾಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us