/newsfirstlive-kannada/media/media_files/2025/11/04/rr_benz_lorry-2025-11-04-07-17-21.jpg)
ಜೈಪುರ್: ಮದ್ಯಪಾನ ಮಾಡಿ ಬೆಂಜ್ ಲಾರಿಯನ್ನು ಹೇಗೆಂದರೆ ಹಾಗೇ ಚಲಾಯಿಸಿದ ಚಾಲಕ, 17 ವಾಹನಗಳಿಗೆ ರಣಭೀಕರವಾಗಿ ಗುದ್ದಿದ್ದಾನೆ. ಇದರ ಪರಿಣಾಮ 14 ಜನರು ಪ್ರಾಣ ಬಿಟ್ಟಿದ್ದು 13 ಜನರ ಸ್ಥಿತಿ ಚಿಂತಾಜನವಾಗಿದೆ ಎಂದು ಹೇಳಲಾಗಿದೆ. ಈ ಘಟನೆಯು ರಾಜಸ್ತಾನದ ರಾಜಧಾನಿ ಜೈಪುರ್​ನ ಲೋಹಮಂಡಿಯಲ್ಲಿ ನಡೆದಿದೆ.
ಹರ್ಮಾಡಾ ಪ್ರದೇಶದ ಲೋಹಮಂಡಿ ಬಳಿ ಟ್ರಾಫಿಕ್ ಇದ್ದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ 100 ಕಿಲೋ ಮೋಟರ್​ ವೇಗದಲ್ಲಿ ಬಂದ ಬೆಂಜ್​ ಲಾರಿ ಟ್ರಾಫಿಕ್​ನಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ನುಗ್ಗಿಕೊಂಡು ಹೋಗಿದೆ. ಇದರಿಂದ ಕಾರು, ಬೈಕ್, ವ್ಯಾನ್, ಆಟೋ ಸೇರಿ 17 ವಾಹನಗಳು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ 14 ಜನ ಪ್ರಾಣ ಬಿಟ್ಟಿದ್ದು 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಬಸ್​ಗೆ ಲಾರಿ ಡಿಕ್ಕಿ, 20 ಜನ ಸಾವು ಘಟನೆ.. ಕಣ್ಮುಚ್ಚಿದ ಮೂವರು ಅಕ್ಕ-ತಂಗಿಯರು..!
/filters:format(webp)/newsfirstlive-kannada/media/media_files/2025/11/04/rr_benz_lorry_1-2025-11-04-07-19-06.jpg)
ಪ್ರತ್ಯಕ್ಷದರ್ಶಿಗಳು ಹೇಳುವಂತೆ ಡ್ರೈವರ್ ಮದ್ಯಪಾನ ಮಾಡಿ ಅತಿ ವೇಗದಲ್ಲಿ ಬಂದಿದ್ದಾನೆ. ಬೆಂಜ್ ಲಾರಿ ಬಂದು ಗುದ್ದಿದ ರಭಸಕ್ಕೆ ವಾಹನಗಳು ಸಿನಿಮಾದಲ್ಲಿ ಹಾರುವಂತೆ ಹಾರಿ ದೂರ ಬಿದ್ದಿದ್ದವಂತೆ. ರಸ್ತೆ ತುಂಬಾ ಶವಗಳು ಹರಡಿಕೊಂಡಿದ್ದವಂತೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ನಗರದ ಎಸ್​ಎಮ್​ಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us