/newsfirstlive-kannada/media/media_files/2025/11/03/tn_bus_sisters-2025-11-03-13-44-56.jpg)
ಹೈದರಾಬಾದ್: ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸರ್ಕಾರಿ ಬಸ್​ಗೆ ಜೆಲ್ಲಿ ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದು 20 ಜನರು ಮೃತಪಟ್ಟಿದ್ದಾರೆ. ಸದ್ಯ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಈ ರಣಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಅಕ್ಕ, ತಂಗಿಯರು ಜೀವ ಕಳೆದುಕೊಂಡಿರುವುದು ಕುಟುಂಬದವರಿಗೆ ಹೇಳತೀರದ ದುಃಖವಾಗಿದೆ.
ಹೈದರಾಬಾದ್​ನ ಕೋಟಿ ಮಹಿಳಾ ಕಲಾಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗಳಾದ ತನುಷಾ, ಸಾಯಿ ಪ್ರಿಯಾ ಹಾಗೂ ನಂದಿನಿ ಸಾವನ್ನಪ್ಪಿದ್ದಾರೆ. ಇವರು ವಿಕಾರಾಬಾದ್ ಜಿಲ್ಲೆಯ ತಾಂಡೂರು ಪಟ್ಟಣದ ಗಾಂಧಿನಗರಕ್ಕೆ ಸೇರಿದ ಎಲ್ಲಯ್ಯ ಗೌಡ ಎನ್ನುವರ ಮಕ್ಕಳಾಗಿದ್ದಾರೆ. ಮನೆಯಲ್ಲಿ ಸಂಬಂಧಿಕರ ಮದುವೆ ಸಂಭ್ರಮ ಹಿನ್ನೆಲೆಯಲ್ಲಿ ನಗರದಿಂದ ತಮ್ಮ ಊರಿಗೆ ಕೆಲವು ದಿನಗಳ ಹಿಂದೆ ಬಂದಿದ್ದರು ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/11/03/tn_bus_sister-2025-11-03-13-45-45.jpg)
ಕಳೆದ ತಿಂಗಳು 15 ರಂದು ನಡೆದ ಮದುವೆ ಸಮಾರಂಭವನ್ನು ಮೂವರು ಅಕ್ಕತಂಗಿಯರು ತುಂಬಾ ಸಡಗರದಿಂದ ಕಳೆದಿದ್ದರು. ಎಲ್ಲಯ್ಯ ಗೌಡ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಇವರಿಗೆ ನಾಲ್ಕು ಜನ ಮಕ್ಕಳಿದ್ದು ನಾಲ್ವರು ಹೆಣ್ಣುಮಕ್ಕಳೇ ಆಗಿದ್ದಾರೆ. ಮೂವರು ಹೆಣ್ಣು ಮಕ್ಕಳು ಹೈದರಾಬಾದ್​ನಲ್ಲಿ ವ್ಯಾಸಂಗ ಮಾಡುತ್ತಿದ್ದು ಬಸ್​ ದುರಂತದಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ. ಇನ್ನೊಬ್ಬಕೆಗೆ ಮದುವೆಯಾಗಿದೆ. ಸದ್ಯ ಮಕ್ಕಳನ್ನು ಕಳೆದುಕೊಂಡ ತಂದೆ, ತಾಯಿ ಸೇರಿದಂತೆ ಸಂಬಂಧಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಇದೇ ಘಟನೆಯಲ್ಲಿ ಇನ್ನೊಬ್ಬ ಯುವತಿ ಸಾವನ್ನಪ್ಪಿದ್ದಾರೆ. ಯಾಲಾಲ ಪಂಚಾಯತಿಯ ಲಕ್ಷ್ಮಿ ನಾರಾಯಣಪುರಕ್ಕೆ ಸೇರಿದ ಅಖಿಲಾ ರೆಡ್ಡಿ ಎನ್ನುವ ಯುವತಿ ಕಣ್ಮುಚ್ಚಿದ್ದಾರೆ. ಇವರು ಹೈದಾರಾಬಾದ್​ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಮಗಳನ್ನು ಕಳೆದುಕೊಂಡು ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us