/newsfirstlive-kannada/media/media_files/2025/11/03/tn_bus_accident-2025-11-03-11-17-00.jpg)
ಹೈದರಾಬಾದ್​: ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲ ನಗರದ ಮಿರಿಜಾಗುಡಾ ಪ್ರದೇಶದ ಸಮೀಪ ಲಾರಿಯೊಂದು ರಣಭೀಕರವಾಗಿ ಬಸ್​ಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ 20 ಜನರು ಉಸಿರು ಚೆಲ್ಲಿದ್ದಾರೆ. ಲಾರಿ ಚಾಲಕ ಕೂಡ ಘಟನೆಯಲ್ಲಿ ದುರ್ಮಣ ಹೊಂದಿದ್ದಾನೆ.
ಸರ್ಕಾರಿ ಬಸ್​ ಹೈದರಾಬಾದ್​ಗೆ ಹೋಗುವಾಗ ಒಟ್ಟು 70 ಪ್ರಯಾಣಿಕರು ಒಳಗೆ ಇದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಜೆಲ್ಲಿ ತುಂಬಿದ ಲಾರಿ ಭಯಾನಕವಾಗಿ ಬಸ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ನ ಅರ್ಧಭಾಗದ ಮೇಲೆ ಲಾರಿ ಬಿದ್ದಂತೆ ಆಗಿದೆ. ಈ ವೇಳೆ ಲಾರಿಯಲ್ಲಿದ್ದ ಜೆಲ್ಲಿ ಕೂಡ ಪ್ರಯಾಣಿಕರ ಮೇಲೆ ಬಿದ್ದಿದೆ ಎಂದು ಹೇಳಲಾಗಿದೆ.
ಬಸ್​ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರಿಗೆ ಕಾರ್ಯಾಚರಣೆ ಹರಸಾಹಸವಾಗಿತ್ತು. ಏಕೆಂದರೆ ಬಸ್ ಒಳಗೆ ಜೆಲ್ಲಿ ಕಲ್ಲುಗಳೆಲ್ಲ ಬಿದ್ದಿತ್ತು. ಜನರನ್ನು ಹೊರ ತೆಗೆಯುವುದು ಆಗುತ್ತಿರಲಿಲ್ಲ. ಹೀಗಾಗಿ ತಕ್ಷಣಕ್ಕೆ ಮೂರು ಜೆಸಿಬಿಗಳನ್ನು ಸ್ಥಳಕ್ಕೆ ಕರೆಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಜೆಸಿಬಿಗಳು ಬಸ್​ನ ಒಳಗೆ ಜೆಲ್ಲಿಯಲ್ಲಿದ್ದ ಸಿಲುಕಿದ ಪ್ರಯಾಣಿಕರನ್ನು ಹೊರ ತೆಗೆಯಲು ನೆರವಾದವು. ವಿಚಿತ್ರ ಎಂದರೆ ಲಾರಿಯಿಂದ ಬಿದ್ದಂತ ಜೆಲ್ಲಿಯಿಂದಲೇ ಪ್ರಯಾಣಿಕರು ಮೃತಪಟ್ಟಿದ್ದು ಹೆಚ್ಚು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರಿ ಬಸ್​ಗೆ ಜೆಲ್ಲಿ ತುಂಬಿದ ಲಾರಿ ಡಿಕ್ಕಿ.. 3 ತಿಂಗಳ ಮಗು ಸೇರಿ 20 ಪ್ರಯಾಣಿಕರು ಇನ್ನಿಲ್ಲ!
/filters:format(webp)/newsfirstlive-kannada/media/media_files/2025/11/03/tn_bus_accident_1-2025-11-03-11-18-06.jpg)
ಜೆಲ್ಲಿ ಮೇಲೆ ಬಿದ್ದಿದ್ದರಿಂದ ಉಸಿರಾಡಲು ಆಗದೇ ಜೀವ ಹೋಗಿವೆ ಎನ್ನಲಾಗುತ್ತಿದೆ. ಜೆಸಿಬಿಯಿಂದ ಜೆಲ್ಲಿಯನ್ನು ತೆರವು ಮಾಡಿ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕೆಲವು ಮೃತದೇಹಗಳ ಮೇಲೆ ಜೆಲ್ಲಿಕಲ್ಲುಗಳ ಧೂಳು ಇರುವುದು ಕಂಡು ಬಂದಿದೆ. ಅಲ್ಲದೇ ಕೆಲವರು ಇದೇ ಜೆಲ್ಲಿಕಲ್ಲುಗಳಲ್ಲಿ ಸಿಲುಕಿಕೊಂಡು ಕೂಗಾಡಿರುವವರನ್ನು ಪ್ರತ್ಯಕ್ಷದರ್ಶಿಗಳು ಕಣ್ಣಾರೆ ಕಂಡಿದ್ದಾರೆ.
ಬಸ್​ನ ಮಹಿಳಾ ಕಂಡಕ್ಟರ್ ರಾಧ ಅವರು ಸೇರಿ ಒಟ್ಟು 15 ಪ್ರಯಾಣಿಕರುನ್ನು ಪೊಲೀಸರು ರಕ್ಷಣೆ ಮಾಡಿ ಹೈದರಾಬಾದ್​ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮಾಡುವಾಗ ಚೆವೆಲ್ಲ ನಗರದ ಸಿಐ ಭೂಪಾಲ್ ಶ್ರೀಧರ್ ಕಾಲಿನ ಮೇಲೆ ಜೆಸಿಬಿ ಹೋಗಿದ್ದರಿಂದ ಅವರ ಕಾಲಿಗೆ ಗಂಭೀರವಾದ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us