/newsfirstlive-kannada/media/media_files/2025/11/03/rohit_sharma-2025-11-03-08-14-04.jpg)
ಚೊಚ್ಚಲ ವಿಶ್ವಕಪ್​ ಟ್ರೋಫಿಯನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡು ಇಡೀ ಭಾರತೀಯರ ಕನಸನ್ನು ನನಸು ಮಾಡಿದೆ. ದಕ್ಷಿಣ ಆಫ್ರಕಾ ವಿರುದ್ಧ 52 ರನ್​ಗಳಿಂದ ಅಮೋಘವಾದ ವಿಜಯ ಪಡೆದ ಭಾರತದ ನಾರಿಯರು ಮೈದಾನದಲ್ಲಿ ಓಡಾಡಿ ಬಿಗ್ ಸೆಲೆಬ್ರೆಟ್ ಮಾಡಿದರು. ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತು ಇದೆಲ್ಲವನ್ನು ವೀಕ್ಷಣೆ ಮಾಡುತ್ತಿದ್ದ ಲೆಜೆಂಡರಿ ಬ್ಯಾಟರ್ ರೋಹಿತ್ ಶರ್ಮಾ ಹೃದಯಸ್ಪರ್ಶಿ ಕ್ಷಣಕ್ಕೆ ಕಾರಣರಾದರು.
ವಿಶ್ವಕಪ್ ಫೈನಲ್ ಪಂದ್ಯವಾಗಿದ್ದರಿಂದ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಜೊತೆ ಆಗಮಿಸಿದ್ದರು. ಮೊದಲಿಂದಲೂ ಪಂದ್ಯ ವೀಕ್ಷಣೆ ಮಾಡಿದ ಹಿಟ್​ಮ್ಯಾನ್ ರೋಹಿತ್ ಕೊನೆಗೆ ಭಾವನೆಗೆ ಒಳಗಾದರು. ಟೀಮ್ ಇಂಡಿಯಾ ಕೊನೆಯಲ್ಲಿ ಅದ್ಭುತವಾದ ಗೆಲುವು ಸಾಧಿಸುತ್ತಿದ್ದಂತೆ, ಗ್ಯಾಲರಿಯಲ್ಲಿದ್ದ ರೋಹಿತ್ ಶರ್ಮಾ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು. ಅಳು ತಡೆದುಕೊಳ್ಳುವರಂತೆ ರೋಹಿತ್ ಶರ್ಮಾ ಮೇಲೆ ನೋಡಿದರು. ಈ ಒಂದು ಕ್ಷಣ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡುವಂತೆ ಇತ್ತು.
2024ರ ವರ್ಲ್ಡ್​​ಕಪ್​ ಸೋತಾಗ, ಟಿ20 ವರ್ಲ್ಡ್​ಕಪ್​, 2025ರ ಚಾಂಪಿಯನ್ ಟ್ರೋಫಿ ಗೆದ್ದಾಗ ರೋಹಿತ್ ಶರ್ಮಾ ಭಾರತದ ಪುರುಷರ ತಂಡದ ಸಾರಥಿಯಾಗಿದ್ದರು. ಹೀಗಾಗಿಯೇ ಮಹಿಳಾ ವಿಶ್ವಕಪ್​ ಫೈನಲ್​ ಮ್ಯಾಚ್​ಗೆ ಹಿಟ್​ಮ್ಯಾನ್​ರನ್ನ ಆಹ್ವಾನ ಮಾಡಲಾಗಿತ್ತು. ಪಂದ್ಯದ ವೇಳೆ ರೋಹಿತ್ ಅವರ ಕೆಲವು ಕೀ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
/filters:format(webp)/newsfirstlive-kannada/media/media_files/2025/11/03/rohit_sharma_1-2025-11-03-08-42-11.jpg)
ಮೊದಲ ಇನ್ನಿಂಗ್ಸ್​ನಲ್ಲಿ ಓಪನರ್ ಶಫಾಲಿ ಹಾಗೂ ಸ್ಮೃತಿ ಮಂದಾನ ಬ್ಯಾಟಿಂಗ್ ನೋಡಿ ಸಖತ್ ಎಂಜಾಯ್ ಮಾಡಿದರು. ಯಾವಾಗ ದೀಪ್ತಿ ಶರ್ಮಾ ಕೊನೆ ವಿಕೆಟ್ ಕಬಳಿಸಿದರೋ, ಇಡೀ ಮೈದಾನ ಸೇರಿದಂತೆ ಆಟಗಾರರು ಎಲ್ಲರೂ ಸಂಭ್ರಮದಲ್ಲಿ ಮುಳಿಗಿದ್ದರು. ಇದೇ ವೇಳೆ ಗ್ಯಾಲರಿಯಲ್ಲಿದ್ದ ರೋಹಿತ್ ಶರ್ಮಾ ಎಮೊಷನಲ್​ಗೆ ಒಳಗಾದರು. ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ​
ನವಿ ಮುಂಬೈಯ ಡಿ.ವೈ ಪಾಟೀಲ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಮ್ಯಾಚ್​ನಲ್ಲಿ ಟಾಸ್ ಸೋತಿದ್ದ ಹರ್ಮನ್​ ಪ್ರೀತ್ ಪಡೆ ಮೊದಲ ಬ್ಯಾಟಿಂಗ್ ಮಾಡೋ ಅವಕಾಶ ಪಡೆಯಿತು. ಇದರಿಂದ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತದ ಆಟಗಾರ್ತಿಯರು 50 ಓವರ್​ಗಳಲ್ಲಿ 299 ರನ್​ಗಳ ಟಾರ್ಗೆಟ್ ಸೆಟ್​ ಮಾಡಿದ್ದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ 246 ರನ್​ಗೆ ಆಲೌಟ್ ಆಯಿತು. ಇದರಿಂದ ಟೀಮ್ ಇಂಡಿಯಾ 52 ರನ್​ಗಳ ಅಮೋಘವಾದ ಜಯ ಗಳಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us