/newsfirstlive-kannada/media/media_files/2025/10/05/abhishek_sharma-1-2025-10-05-17-27-25.jpg)
ಐದು ಪಂದ್ಯಗಳ ಟೆಸ್ಟ್ ಸರಣಿಯ 4ನೇ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ನಾಯಕ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ.
ಕ್ವೀನ್ಸ್‌ಲ್ಯಾಂಡ್​ನ ಕ್ಯಾರಾರಾ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್​ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ಕಣಕ್ಕೆ ಇಳಿಯುತ್ತಿದ್ದು ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಬೇಕಿದೆ. ಸೂರ್ಯಕುಮಾರ್ ಹಾಗೂ ಶುಭ್​ಮನ್ ಗಿಲ್ ಅವರು ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕಿದೆ. ಇಂದಿನ 4ನೇ ಪಂದ್ಯ ಅತ್ಯಂತ ಮುಖ್ಯವಾಗಿದ್ದರಿಂದ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯವಿದೆ. ಹೀಗಾಗಿ ಈ ಇಬ್ಬರ ಬ್ಯಾಟಿಂಗ್ ದೊಡ್ಡ ಮಟ್ಟದಲ್ಲೇ ಸದ್ದು ಮಾಡಬೇಕಿದೆ.
/filters:format(webp)/newsfirstlive-kannada/media/media_files/2025/10/29/bumrha_tilak-2025-10-29-13-05-12.jpg)
ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ ಓಪನರ್ ಆಗಿ ಕ್ರೀಸ್​ಗೆ ಆಗಮಿಸಲಿದ್ದಾರೆ. ಗಿಲ್ ಬ್ಯಾಟಿಂಗ್ ಪಂದ್ಯದಿಂದ ಪಂದ್ಯಕ್ಕೆ​ ಮತ್ತಷ್ಟು ಕುಂದುತ್ತಿದೆ ವಿನಹ ಟಿ20ಯಲ್ಲಿ ಸುಧಾರಣೆ ಕಾಣುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕೀಪರ್ ಜಿತೇಶ್​ ಶರ್ಮಾಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ತಿಲಕ್ ವರ್ಮಾ ವಿಫಲವಾಗುತ್ತಿದ್ದು ಸಿಡಿದೇಳಬೇಕಿದೆ.
ಶಿವಂ ದುಬೆ, ಅಕ್ಷರ್ ಪಟೇಲ್​ ಆಲ್​ರೌಂಡರ್ಸ್​ ಮೈದಾನಕ್ಕೆ ಇಳಿಯಲಿದ್ದಾರೆ. ಬೌಲಿಂಗ್​ನಲ್ಲಿ ಸ್ಟಾರ್ ಬೌಲರ್​ ಬುಮ್ರಾ ಬೌಲಿಂಗ್ ಪಡೆಯ ಮುಖ್ಯ ಬೆನ್ನೆಲುಬು ಆಗಿದ್ದು ಹರ್ಷಿತ್ ರಾಣಾ ಬದಲಿಗೆ ಅರ್ಷ್​ದೀಪ್ ಸಿಂಗ್ ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಸ್ಪಿನ್ ಬೌಲಿಂಗ್​ನಲ್ಲಿ ವರುಣ್ ಚಕ್ರವರ್ತಿ ಒಬ್ಬರೇ ಇದ್ದಾರೆ. ಇವರಿಗೆ ಆಲ್​​ರೌಂಡರ್​ಗಳಾದ ಶಿವಂ ದುಬೆ, ಅಕ್ಷರ್ ಪಟೇಲ್ ಸಾಥ್ ಕೊಡಲಿದ್ದಾರೆ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​​ಮನ್ ಗಿಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷ್​ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us