/newsfirstlive-kannada/media/media_files/2025/10/24/yash-2025-10-24-17-50-54.jpg)
ಭುವನ್ ಗೌಡ ವಿವಾಹದಲ್ಲಿ ಭಾಗಿಯಾದ ನಟ ಯಶ್
ʼಕೆಜಿಎಫ್ʼ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ, ನಿಖಿತಾ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಭುವನ್ ಗೌಡ ದಂಪತಿಗೆ ರಾಕಿಂಗ್​ ಸ್ಟಾರ್​ ಯಶ್​ ಶುಭ ಹಾರೈಸಿದ್ದಾರೆ.
ಇಂದು ಬೆಂಗಳೂರಿನ ಜಾಲಹಳ್ಳಿ ರಸ್ತೆಯ ಪ್ರೈವೇಟ್ ರೆಸಾರ್ಟ್​ನಲ್ಲಿ ʼಕೆಜಿಎಫ್ʼ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀಲೀಲಾ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.
KGF ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈಗ ನಿರ್ಮಾಪಕರೂ ಆಗಿದ್ದಾರೆ.ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಛಾಯಾಗ್ರಾಹಕರಾಗಿದ್ದಾರೆ. ಭುವನ್ ಗೌಡ ಸದ್ಯ ತೆಲುಗು, ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಫೋಟೊಗ್ರಾಪರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ, ಶ್ರೀಮುರಳಿ ನಟನೆಯ ʼಉಗ್ರಂʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಇನ್ನು 2018ರಲ್ಲಿ ಬಿಡುಗಡೆಯಾದ ʼಕೆಜಿಎಫ್: ಚಾಪ್ಟರ್ 1ʼ ಮತ್ತು 2022ರಲ್ಲಿ ರಿಲೀಸ್ ಆದ ʼಕೆಜಿಎಫ್ ಚಾಪ್ಟರ್ 2' ಚಿತ್ರಗಳ ಮೂಲಕ ದೇಶದ ಗಮನ ಸೆಳೆದರು.'ಕೆಜಿಎಫ್ ಸರಣಿ ಚಿತ್ರಗಳ ನಿರ್ದೇಶನ,ನಟನೆ,ಸಂಗೀತ ಜತೆಗೆ ಭುವನ್ ಅವರ ಸಿನಿಮಾಟಾಗ್ರಾಫಿಯು ಗಮನ ಸೆಳೆಯಿತು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯೂ ಪರಿಚಿತರಾಗಿದ್ದಾರೆ..ಈ ಮಧ್ಯೆ ನಿಖಿತಾ ಜೊತೆಗೆ ಸಪ್ತಪದಿ ತುಳಿದಿದ್ದಾರೆ.ಯಶ್ ನವಜೋಡಿಗೆ ಶುಭ ಹಾರೈಸಿದ್ದರು.
ಇದನ್ನೂ ಓದಿ: ವಾರಿಜಶ್ರೀ ಜೊತೆಗೆ ಸಪ್ತಪದಿ ತುಳಿದ ರಘು ದೀಕ್ಷಿತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us