/newsfirstlive-kannada/media/media_files/2025/10/24/raghu-dixth-2025-10-24-17-25-50.jpg)
ರಘು ದೀಕ್ಷಿತ್
ಬೆಂಗಳೂರು:ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರದ ಶ್ರೀ ಸಾಯಿ ಕನ್ವೆನ್ಷನ್ ಹಾಲ್ ನಲ್ಲಿ ಖ್ಯಾತ ಗಾಯಕಿ ವಾರಿಜ ಶ್ರೀ ಜೊತೆಗೆ ರಘು ದೀಕ್ಷಿತ್ ಸಪ್ತಪದಿ ತುಳಿದಿದ್ದಾರೆ.
50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ಅವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ. ರಘು ದೀಕ್ಷಿತ್ ಅವರು ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/24/raghu-dixth-1-2025-10-24-17-26-22.jpg)
ಇಬ್ಬರೂ ತುಂಬಾ ವರ್ಷಗಳ ಗೆಳೆಯರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದಾರೆ. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಈ ತಿಂಗಳಾಂತ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು.
/filters:format(webp)/newsfirstlive-kannada/media/media_files/2025/10/24/raghu-dixth-2-2025-10-24-17-26-54.jpg)
ಇಂದು ರಘು ದೀಕ್ಷಿತ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇನ್ನು ರಘು ದೀಕ್ಷಿತ್ ಮತ್ತು ವಾರಿಜ ಶ್ರೀ ಮದುವೆಗೆ ಸಿನಿ ಲೋಕದ ನಟರು ಹಾಜರಾಗಿದ್ದರು. ನಟಿ ಯಮುನಾ ಶ್ರೀನಿಧಿ ಸೇರಿದಂತೆ ಹಲವರು ಮದುವೆಗೆ ಹಾಜರಾಗಿದ್ದರು. ಖ್ಯಾತ ಗಾಯಕಿ ವಾರಿಜ ಶ್ರೀ ಮತ್ತು ರಘು ಧೀಕ್ಷಿತ್ ಜೊತೆಗಿನ ಮದುವೆ ಫೋಟೋಗಳು ಇದೀಗ ವೈರಲ್ ಆಗ್ತಿದೆ.
ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಈ ಮೊದಲ ಮಯೂರಿ ಉಪಾಧ್ಯರನ್ನು ರಘು ದೀಕ್ಷಿತ್ ವಿವಾಹವಾಗಿದ್ದರು. ಆದರೇ, ರಘು ದೀಕ್ಷಿತ್- ಮಯೂರಿ ಉಪಾಧ್ಯ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಿತ್ತು. 2018 ರಲ್ಲಿ ನಾವಿಬ್ಬರೂ ವಿಚ್ಛೇದನ ಪಡೆಯುತ್ತಿದ್ದೇವೆ. ಕಳೆದ 3 ವರ್ಷದಿಂದ ನಾನು - ಮಯೂರಿ ಉಪಾಧ್ಯ ಜೊತೆಯಲ್ಲಿ ವಾಸಿಸುತ್ತಿಲ್ಲ ಎಂದು ರಘು ದೀಕ್ಷಿತ್ ಹೇಳಿದ್ದರು.
ಇದನ್ನೂ ಓದಿ:ಕ್ಯಾಪ್ಟನ್ಸಿ ಓಟದಲ್ಲಿ ಗೆದ್ದವರು ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us