/newsfirstlive-kannada/media/media_files/2025/12/23/sudeep-vs-darshan-1-2025-12-23-10-10-32.jpg)
ಹುಬ್ಬಳ್ಳಿಯಲ್ಲಿ ‘ಯುದ್ಧ ಹೇಳಿಕೆ’ಗೆ ನಟ ಕಿಚ್ಚ ಸುದೀಪ್ (Kiccha Sudeeep) ಸ್ಪಷ್ಟನೆ ಕೊಟ್ಟಿದ್ದಾರೆ. ಯಾರಿಗಾದ್ರೂ ವಾರ್ನಿಂಗ್ ಮಾಡಬೇಕಿದ್ರೇ ವೇದಿಕೆ ಬೇಕಿಲ್ಲ. ಭಾಷಣದಲ್ಲಿ ಪೈರಸಿ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಪೈರಸಿ ಬಗ್ಗೆ ವಾರ್ನ್​ ಮಾಡಿದ್ದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರು (ವಿಜಯಲಕ್ಷ್ಮೀ, ದರ್ಶನ್ ಪತ್ನಿ) ನನಗೆ ಹೇಳಿದ್ರೇ ಉತ್ತರ ಕೊಡ್ತೀನಿ. ಅವರಿಗೆ ಏನು ನೋವಿದ್ಯೋ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಸುದೀಪ್ ಸ್ಪಷ್ಟನೆ
ಹುಬ್ಬಳ್ಳಿಯ ಯುದ್ಧ ಹೇಳಿಕೆ ಬಗ್ಗೆ ಚರ್ಚೆ ಆಗ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಸುದೀಪ್, ಫ್ಯಾನ್ಸ್ ವಾರ್ ನನ್ನಿಂದ ಅಲ್ಲ. ಒಂದು ರಿಯಾಕ್ಷನ್ನಿಂದ ಬರ್ತೀರೋದು ಇದು. ನನ್ನಿಂದ ಅಲ್ಲ. ಎಲ್ಲರೂ ಒಪ್ಪುತ್ತೀರಾ ಈ ಮಾತನ್ನ? ಹಬ್ಬಳ್ಳಿಯಲ್ಲಿ ಮಾತನ್ನಾಡಿದ್ದಕ್ಕೆ ಎಲ್ಲರೂ ಕಾದರು. ಸುದೀಪ್ ಯಾವತ್ತೂ ಯಾರಿಗೂ ಹೇಳಲ್ಲ. ಯಾರಿಗೆ ಹೇಳಿದ್ದು, ಯಾಕೆ ಹೇಳಿದ್ದು ಎಂದು. ಮಾಧ್ಯಮದವರು ಕೂಡ ಒಂದು ದಿನ ಕಾದರು.
ನಾನು 45 ಚಿತ್ರದ ಬಗ್ಗೆ ಮಾತಾಡ್ತೀನಾ? ಅರ್ಜುನ್ ಜನ್ಯಾ ಬಗ್ಗೆ ಮಾತಾಡ್ತೀನಾ? ದಯವಿಟ್ಟು ಶಿವಣ್ಣ ಅವರಿಗೆ ಹೋಗಿ ಕೇಳಿ. ನಿಮಗೆ ಹೇಳಿದ್ದು ಅಂದ್ರೆ ನಕ್ಕು ಬಿಡ್ತಾರೆ. ಹಾಗಿದ್ದರೆ ಇನ್ನೊಬ್ಬರ ಹೆಸರನ್ನು ಹೇಳ್ತೀನಿ ಅಂತಾನಾ. ಚಿತ್ರರಂಗದಲ್ಲಿ ಬೇರೆ ಯಾರೂ ಕಲಾವಿದರಿಲ್ವಾ? ಯಾಕೆ ಅವರು ತಮ್ಮ ಹೆಸರು ಹೇಳಿದ್ರಿ ಎಂದು ಹೇಳಿಲ್ಲ. ಯಶ್, ಧ್ರುವ್, ಶಿವಣ್ಣ, ಉಪೇಂದ್ರ, ಗಣೇಶ್, ರಿಷಬ್, ರಕ್ಷಿತ್ ಇನ್ನೂ ತುಂಬಾ ಕಲಾವಿದರಿದ್ದಾರೆ. ಆದರೆ ಒಂದು ಗಂಟೆ ಮಾತ್ರ ‘ಟನ್’ ಎನ್ನುತ್ತೆ..
ನನ್ನ ಸಿನಿಮಾವನ್ನು ನಾನು ಕಾಪಾಡಿಕೊಳ್ಳಬೇಕು. ಚಿತ್ರದ ಹಿಂದೆ ಎಷ್ಟೋ ಜನ ಕಲಾವಿದರಿದ್ದಾರೆ. ಎಷ್ಟೋ ಜನರ ಬದುಕು ಇದೆ. ಯಾವುದೋ ಒಂದು ಜಿದ್ದಿಗೆ ಮಾಡೋದಲ್ಲ. ಪೈರಸಿ ಮಾಡ್ತೀರಾ..?
ಕಾಪಾಡಿಕೊಳ್ಳಬೇಕಿತ್ತು. ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ಹುಬ್ಬಳ್ಳಿಯಲ್ಲಿ ಮಾತನ್ನಾಡಬೇಕಾದರೆ ನನಗೆ ಗೊತ್ತಿರಲಿಲ್ವಾ? ಎಷ್ಟು ಕ್ಯಾಮೆರಾ ಆನ್ ಇರುತ್ತೆ. ಇದು ವೈರಲ್ ಆಗುತ್ತೆ ಎಂದು? ನಾನು ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಚೆಸ್ ಆಡಬೇಕಾದರೆ ನಾವು ಕದ್ದುಮುಚ್ಚಿ ಚೆಕ್ಮೆಟ್ ಎಂದು ಹೇಳೋಕೆ ಆಗಲ್ಲ. ನೇರವಾಗಿಯೇ ಹೇಳಬೇಕು. ಚೆಸ್ ಮೈಂಡ್ಗೇಮ್.
ವಿಜಯಲಕ್ಷ್ಮೀ ಹೇಳಿಕೆಗೆ ತಿರುಗೇಟು
ನಾನು ಯಾರಿಗೆ ಹೇಳಿದ್ನೋ ನನಗೆ ಗೊತ್ತು. ಆ ವಿಚಾರವನ್ನು ಅಲ್ಲಿಗೆ ಬಿಡ್ತೀನಿ. ಉಳಿದದ್ದು ನನಗೆ ಗೊತ್ತಿಲ್ಲ. ನಾನು ಹುಬ್ಬಳ್ಳಿಯಲ್ಲಿ ಮಾತನ್ನಾಡಿದು, ಅಲ್ಲಿ ಬೆಂಕಿ ಹತ್ತಿಕೊಂಡಿದ್ರೆ ಹೋಗ್ತೀನಿ. ಮಾರನೇಯ ದಿನ ಸೈಲೆಂಟ್ ಆಗಿತ್ತು. ಇವತ್ತು ಬೆಳಗ್ಗೆಯಿಂದ ಸುದ್ದಿ ಆಗಿದೆ. ಯಾರೋ ಹೀಗೆ ರಿಯಾಕ್ಟ್ ಮಾಡಿದ್ದಾರೆ ಎಂದು ನನ್ನ ಕೇಳಿದ್ರು. ದಯವಿಟ್ಟು ಅವರನ್ನು ಹೋಗಿ ಅದರ ಬಗ್ಗೆ ಕೇಳಿಕೊಂಡು ಬರಲಿ. ಅವರು ಯಾರ ಬಗ್ಗೆ ಮಾತನ್ನಾಡಿದ್ದಾರೆ ಅಂತಾ. ನನಗೆ ಅಂತಾ ಹೇಳಿದ್ರೆ ನಾನು ಕರೆಕ್ಟ್ ಆಗಿ ಉತ್ತರ ಕೊಡ್ತೀನಿ. ಯಾರದ್ದೋ ಪ್ರಶ್ನೆಗೆ ನನ್ನ ಬಳಿ ಉತ್ತರ ಕೇಳಿದ್ರೆ ನನಗೆ ಅವಮಾನ ಮಾಡಿದಂತೆ. ಯಾರು ಹೇಳಿದ್ದಾರೋ ಅವರನ್ನು ಕೇಳಿ.
ಅವರಿಗೆ ಏನು ನೋವು ಇದೆಯೋ ಗೊತ್ತಿಲ್ಲ. ನನ್ನ ಬಗ್ಗೆ, ನಲಪಾಡ್ ಬಗ್ಗೆ, ರಾಜು ಗೌಡರ ಬಗ್ಗೆ ಎಂದು ನಾವು ಯಾಕೆ ಅಂದುಕೊಳ್ಳಬೇಕು? ನಾನು ಎಲ್ಲೋ ಪ್ರಾರ್ಥನೆ ಮಾಡಿ, ಎಲ್ಲೋ ಗಂಟೆ ಬಾರಿಸಿದ್ರೆ ನಾನೇನು ಮಾಡಲಿ. ನಾನು ಎಲ್ಲಿ ಪೂಜೆ ಮಾಡ್ತೀನೋ, ಅಲ್ಲೇ ಪ್ರಸಾದ ಸೇವಿಸ್ತೇನೆ. ನಾನು ಯಾಕೆ ಅಲ್ಲಿ ಹೋಗಿ ಪ್ರಸಾದ ತೆಗೆದುಕೊಳ್ಳಲಿ. ಅವರನ್ನ ಕೇಳಿ. ನನಗೆ ಹೇಳಿದ್ದು ಅಂತಾದರೆ, ನನ್ನ ಹೆಸರು ಹೇಳಿದ್ರೆ ಉತ್ತರ ಕೊಡ್ತೀನಿ.
ಕಿಚ್ಚ ಸುದೀಪ್, ನಟ
ವಿಜಯಲಕ್ಷ್ಮೀ ಏನು ಹೇಳಿದ್ದರು..?
ಕೆಲವು ವ್ಯಕ್ತಿಗಳು ದರ್ಶನ್​ ಅವರು ಇಲ್ಲದೇ ಇರುವಾಗ ಅವರ ಬಗ್ಗೆ ಅವರ ಫ್ಯಾನ್ಸ್​ ಬಗ್ಗೆ ವೇದಿಕೆ ಮೇಲೆ ನಿಂತು ಮಾತನಾಡುವುದು. ಮೀಡಿಯಾದಲ್ಲಿ ಕೂತ್ಕೊಂಡು ಮಾತನಾಡುವುದು. .ಹೊರಗಡೆ ಮಾತನಾಡುವುದು ಎಲ್ಲಾ ಮಾಡ್ತಿದ್ದಾರೆ.. ಅದೇ ಜನಗಳು ದರ್ಶನ್​ ಇದ್ದಾಗ ಅವರು ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ.. ಎಲ್ಲಿ ಮಾಯ ಆಗಿರ್ತಾರೆ ಅಂತಾನೂ ಗೊತ್ತಾಗಲ್ಲ. ದರ್ಶನ್​ ಅವರು ಹೇಳಿರೋ ಹಾಗೇ ತಲೆ ಕೆಡಿಸಿಕೊಳ್ಳಬಾರದು.. ದರ್ಶನ್​ ಹೇಳಿರೋ ಹಾಗೇ ನಾವು ನೊಂದುಕೊಳ್ಳುವುದಿಲ್ಲ.. ನಮಗೆ ಇಂಪಾರ್ಟೆಂಟ್​ ನಿಮ್ಮ ಪ್ರೀತಿ ಹಾಗೂ ಬೆಂಬಲ ಮಾತ್ರ, ನೀವೂ ಹಾಗೇ ಬೇಜಾರ್​ ಮಾಡಿಕೊಳ್ಳಬೇಡಿ, ಕೋಪ ಮಾಡಿಕೊಳ್ಳಬೇಡಿ ಎಂದಿದ್ದರು.
ಇದನ್ನೂ ಓದಿ: ಮಾಂಸಪ್ರಿಯರಿಗೆ ಚಳಿಗಾಲ ತಂದ ಆಘಾತ.. ಜೇಬು ಸುಡ್ತಿದೆ ಚಿಕನ್, ಮಟನ್, ಮೊಟ್ಟೆ ರೇಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us