/newsfirstlive-kannada/media/media_files/2025/12/28/sanvi-sudeep-1-2025-12-28-16-53-07.jpg)
‘ನನ್ನ ದೇಹ ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೆ ನಾನೇ ಕೇಳುತ್ತೇನೆ’ ಎಂದು ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್, ಕೆಟ್ಟದಾಗಿ ಕಾಮೆಂಟ್ ಮಾಡೋರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾನ್ವಿ ಕೋಪ ಯಾಕೆ..?
ಸ್ಯಾಂಡಲ್​ವುಡ್​ನಲ್ಲಿ ಪ್ರಸ್ತುತ ದಚ್ಚು, ಕಿಚ್ಚನ ಫ್ಯಾನ್ಸ್​ ಮಧ್ಯೆ ವಾರ್ ನಡೆಯುತ್ತಿದೆ. ಈ ಬೆಳವಣಿಗೆ ಮಧ್ಯೆ ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾ ರಿಲೀಸ್ ಆಯಿತು. ಮಾರ್ಕ್​ ಚಿತ್ರದ ‘ಮಸ್ತ್ ಮಲೈಕಾ’ ಹಾಡನ್ನು ಸುದೀಪ್ ಮಗಳು ಸಾನ್ವಿ ಹಾಡಿದ್ದಾರೆ. ಈ ಹಾಡು ಸಖತ್ ಹಿಟ್ ಆಗಿದ್ದು, ಬೆನ್ನಲ್ಲೇ, ಸಾನ್ವಿ ಅವರು ವೈರಲ್ ಆಗಿದ್ದಾರೆ. ಇದೇ ಹಾಡಿಗೆ ಸಾನ್ವಿ ಅವರ ಲುಕ್​ಗೆ ಸಂಬಂಧಿಸಿದಂತೆ ಟ್ರೋಲ್ ಮಾಡಿ ನೆಗೆಟೀವ್ ಕಾಮೆಂಟ್​ಗಳನ್ನ ಕೆಲವು ಕಿಡಿಗೇಡಿಗಳು ಹಾಕಿದ್ದರು. ಅದೂ ಅಲ್ಲದೇ, ಮಾರ್ಕ್​ ಚಿತ್ರ ವೀಕ್ಷಣೆಗೆ ಹೋಗಿದ್ದ ಸಂದರ್ಭದಲ್ಲಿನ ವಿಡಿಯೋಗಳನ್ನು ಇಟ್ಟುಕೊಂಡು ಸಾನ್ವಿ ಅವರನ್ನು ಟ್ರೋಲ್ ಮಾಡಿದ್ದರು. ಬಾಡಿ ಶೇಮಿಂಗ್ ಮಾಡಿ ವೈರಲ್ ಮಾಡಿದ್ದರು.
ಇದನ್ನೂ ಓದಿ:‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?
ಇದೇ ವಿಚಾರದ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್, ಕೆಟ್ಟ ಕಾಮೆಂಟ್​ಗಳ ಬಗ್ಗೆ ನಾನು ತಲೆಯೇ ಕೆಡಿಸಿಕೊಳ್ಳಲ್ಲ. ನನ್ನ ಮಗಳು ಜಾಣೆ. ಆಕೆ ನನಗಿಂತ ಎತ್ತರಕ್ಕೆ ಬೆಳೀತಾಳೆ ಎಂದಿದ್ದರು. ಅಪ್ಪನ ಈ ಹೇಳಿಕೆ ಬೆನ್ನಲ್ಲೇ ಬಾಡಿ ಶೇಮಿಂಗ್ ಮಾಡೋರಿಗೆ ಸಾನ್ವಿ, ಕೌಂಟರ್ ನೀಡಿದ್ದಾರೆ. ನನ್ನ ದೇಹ ನಿಮಗೆ ಚರ್ಚೆಯ ವಿಷಯವಲ್ಲ. ಹಾಗೇನಾದ್ರೂ ಇದ್ರೆ ನಾನೇ ಅಭಿಪ್ರಾಯ ಕೇಳ್ತಿದ್ದೆ ಎಂದಿದ್ದಾರೆ.
ಇದನ್ನೂ ಓದಿ: ಹುಣಸೂರಿನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ 5 ಕೋಟಿ ಮೌಲ್ಯದ ಆಭರಣ ದರೋಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us