EXCLUSIVE: ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್, ಖಡಕ್ ಮಾತು..!

ಮಾರ್ಕ್ ರಿಲೀಸ್‌, 30 ವರ್ಷದ ಜರ್ನಿ.. ಬಿಗ್‌ಬಾಸ್‌.. ಇವೆಲ್ಲದ್ರ ಬಗ್ಗೆಯೂ ನ್ಯೂಸ್‌ಫಸ್ಟ್‌ಗೆ ಕಿಚ್ಚ ಸುದೀಪ್ ಮಾತ್ನಾಡಿದ್ದು ಅವ್ರೊಂದಿಗಿನ ಎಕ್ಸ್‌ಕ್ಲೂಸೀವ್ ಇಂಟರ್‌ವ್ಯೂ ಇವತ್ತು ಸಂಜೆ 6 ಗಂಟೆಗೆ ನ್ಯೂಸ್‌ಫಸ್ಟ್‌ನಲ್ಲಿ ಪ್ರಸಾರವಾಗಲಿದೆ.

author-image
Ganesh Kerekuli
Kiccha Sudeep (4)
Advertisment
  • ರಾಜಕಾರಣಕ್ಕೆ ಬಂದರೆ ಸೌಂಡ್ ಮಾಡ್ಕೊಂಡೇ ಬರ್ತೀನಿ
  • ತುಂಬಾ ವರ್ಷಗಳಿಂದ ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ
  • ನ್ಯೂಸ್​​ಫಸ್ಟ್​​ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿಕೆ

‘ರಾಜಕಾರಣಕ್ಕೆ ಬಂದರೆ ಸೌಂಡ್ ಮಾಡ್ಕೊಂಡೇ ಬರ್ತೀನಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ತುಂಬಾ ವರ್ಷಗಳಿಂದ ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ ಆಗ್ತಿದೆ. ನ್ಯೂಸ್​​ಫಸ್ಟ್​​ ನಡೆಸಿದ ವಿಶೇಷ ಸಂದರ್ಶನದಲ್ಲಿ ಸುದೀಪ್, ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದಿದ್ದಾರೆ. 
ರಾಜಕೀಯ ಎಂಟ್ರಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, ನಾನು ಬಂದಾಗ ಎಲ್ಲರಿಗೂ ಗೊತ್ತಾಗುತ್ತೆ, ಬಂದಾಗ ಹೇಳ್ತೀನಿ. ಸಮಾಜ ಸೇವೆ ಮಾಡೋಕೆ ರಾಜಕಾರಣ ಬೇಕು ಅಂತೇನಿಲ್ಲ. ನಾನು ಬಂದರೆ ಸೌಂಡ್ ಮಾಡ್ಕೊಂಡೆ ಬರ್ತೀನಿ. ರಾಜ್ಯ ಚೆನ್ನಾಗಿ ಹೋಗ್ತಿದೆ, ಒಳ್ಳೊಳ್ಳೆ ರಾಜಕಾರಣಿಗಳಿದ್ದಾರೆ ಎಂದಿದ್ದಾರೆ. 

ಬಂದಾಗ ಹೇಳ್ತೀನಿ. ಬಂದಾಗ ಎಲ್ಲರಿಗೂ ಗೊತ್ತಾಗುತ್ತದೆ. ಬರೋಕ್ಕಿಂತ ಮೊದಲು ಹೇಳ್ತೀನೋ, ಬಿಡ್ತೀನೋ ಗೊತ್ತಿಲ್ಲ. ನನಗೆ ಸಿನಿಮಾ ಬಿಟ್ಟರೆ ಬೇರೆ ಯಾವುದರ ಮೇಲೂ ಒಲವು ಇಲ್ಲ. ನನಗೆ ಸಮಾಜ ಸೇವೆ ಮಾಡಲು ರಾಜಕೀಯ ಬೇಕಾಗಿಲ್ಲ.

ರಾಜಕೀಯದಲ್ಲಿರೋರು ಸಮಾಜಸೇವೆ ಮಾಡಲು ಬಂದೆ ಅಂದರೆ ತಪ್ಪಾಗುತ್ತದೆ. ಸಮಾಜ ಸೇವೆ ಮಾಡೋಕೆ ಪವರ್ ಬೇಕಾಗಿಲ್ಲ. ಕನ್ನಡ ಚಿತ್ರರಂಗ ಚೆನ್ನಾಗಿದ್ದು, ಬೇಡಿಕೆಯಿದ್ದು, ಇನ್ನಷ್ಟು ಸಿನಿಮಾ ನಿರೀಕ್ಷೆ ಮಾಡ್ತಿದ್ದಾರೆ ಅಂದರೆ ನನಗೆ ಎರಡೆರಡು ಕಡೆ ಕಾಲಿಡಲು ನನಗೆ ಇಷ್ಟ ಇಲ್ಲ. ಬರೋ ಟೈಮ್​ಗೆ ಬರ್ತೀವಿ. ಬಂದಾಗ ಸೌಂಡ್ ಆಗಿಯೇ ಆಗುತ್ತದೆ. 

ಕಿಚ್ಚ ಸುದೀಪ್

ಇದರ ಜೊತೆಗೆ ಮಾರ್ಕ್ ರಿಲೀಸ್‌, 30 ವರ್ಷದ ಜರ್ನಿ.. ಬಿಗ್‌ಬಾಸ್‌.. ಇವೆಲ್ಲದ್ರ ಬಗ್ಗೆಯೂ ನ್ಯೂಸ್‌ಫಸ್ಟ್‌ಗೆ ಕಿಚ್ಚ ಸುದೀಪ್ ಮಾತ್ನಾಡಿದ್ದು ಅವ್ರೊಂದಿಗಿನ ಎಕ್ಸ್‌ಕ್ಲೂಸೀವ್ ಇಂಟರ್‌ವ್ಯೂ ಇವತ್ತು ಸಂಜೆ 6 ಗಂಟೆಗೆ ನಿಮ್ಮ ನ್ಯೂಸ್‌ಫಸ್ಟ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:IND vs SA: ಟೀಂ ಇಂಡಿಯಾದ ಅಸಲಿ ಸಮಸ್ಯೆ ಇದು.. ಕಂಪ್ಲೀಟ್ ಮಾಹಿತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Political news kiccha sudeep
Advertisment