IND vs SA: ಟೀಂ ಇಂಡಿಯಾದ ಅಸಲಿ ಸಮಸ್ಯೆ ಇದು.. ಕಂಪ್ಲೀಟ್ ಮಾಹಿತಿ..!

ಇಂಡೋ-ಆಫ್ರಿಕಾ 3ನೇ ಟಿ20 ಕದನಕ್ಕೆ ಕೌಂಟ್​ಡೌನ್ ಆರಂಭವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದ ಗ್ರೌಂಡ್​ನಲ್ಲಿ ಮದಗಜಗಳ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಸಮಭಲ ಸಾಧಿಸಿರೋ ತಂಡಗಳು ಸರಣಿಯಲ್ಲಿ ಮುನ್ನಡೆಯ ಮೇಲೆ ಕಣ್ಣಿಟ್ಟಿವೆ.

author-image
Ganesh Kerekuli
Team India (14)
Advertisment
  • ಧರ್ಮಶಾಲಾದಲ್ಲಿ ಇಂಡೋ-​ ಆಫ್ರಿಕಾ 3ನೇ T20 ಪಂದ್ಯ
  • ತಂಡಕ್ಕೆ ನಾಯಕ-ಉಪನಾಯಕನೇ ತಲೆನೋವು
  • ನಡೆಯದ ಶಿವಂ ಆಟ, ಟ್ರ್ಯಾಕ್​ಗೆ ಮರಳ್ತಾರಾ ಬೂಮ್ರಾ?

ಇಂಡೋ-ಆಫ್ರಿಕಾ 3ನೇ ಟಿ20 ಕದನಕ್ಕೆ ಕೌಂಟ್​ಡೌನ್ ಆರಂಭವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದ ಗ್ರೌಂಡ್​ನಲ್ಲಿ ಮದಗಜಗಳ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಸಮಭಲ ಸಾಧಿಸಿರೋ ತಂಡಗಳು ಸರಣಿಯಲ್ಲಿ ಮುನ್ನಡೆಯ ಮೇಲೆ ಕಣ್ಣಿಟ್ಟಿವೆ. ಟಿ20 ಸ್ಪೆಷಲಿಸ್ಟ್​ಗಳ ದಂಡನ್ನೆ ಹೊಂದಿರೋ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ ಅಭಿಮಾನಿಗಳಲ್ಲಿದೆ. 

ಕಟಕ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ ಕಿಕ್​ ಸ್ಟಾರ್ಟ್​ ಮಾಡಿತು. 2ನೇ ಟಿ20 ಪಂದ್ಯದಲ್ಲಿ ಸಾಲಿಡ್​​ ಕಮ್​​ಬ್ಯಾಕ್​ ಮಾಡಿದ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾ ಕಿಕ್​ ಇಳಿಸಿತು. ಪ್ರವಾಸಿ ತಂಡದ ಪವರ್​ಫುಲ್​ ಪರ್ಫಾಮೆನ್ಸ್​ ಮುಂದೆ ಇಂಡಿಯನ್​ ಪ್ಲೇಯರ್ಸ್​ ಮಂಕಾದ್ರು. ಚಂಡಿಗಢದಲ್ಲಿ ಹೀನಾಯ ಸೋಲಿಗೆ ಶರಣಾದ ಸೂರ್ಯನ ಸೈನ್ಯ ಇಂದು ಗೆಲುವಿನ ಹಳಿಗೆ ಮರಳೋ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ:  ಏಷ್ಯಾಕಪ್​ ಅಖಾಡದಲ್ಲೂ ಶತಕ ‘ವೈಭವ’; ಟಿ20 ವಿಶ್ವಕಪ್ ಆಯ್ಕೆಗೆ ಹೆಚ್ಚಿದ ಒತ್ತಡ

Surya and sundar

ನಾಯಕ-ಉಪನಾಯಕನೇ ತಂಡಕ್ಕೆ ತಲೆನೋವು.!

ಕಮ್​ಬ್ಯಾಕ್​ಗೆ ಪಣತೊಟ್ಟಿರೋ ಟೀಮ್​ ಇಂಡಿಯಾಗೆ ನಾಯಕ ಸೂರ್ಯಕುಮಾರ್​ ಯಾದವ್​, ವೈಸ್ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ದೊಡ್ಡ ತಲೆನೋವಾಗಿದ್ದಾರೆ. ಸೂರ್ಯ ಹಾಗೂ ಗಿಲ್​ ವೈಫಲ್ಯದ ಸುಳಿಗೆ ಸಿಲುಕಿ ರನ್​ಗಳಿಕೆಗೆ ಪರದಾಡ್ತಿದ್ದಾರೆ. 2 ಪಂದ್ಯಗಳಿಂದ ಸೂರ್ಯ ಕೇವಲ 11 ರನ್​ಗಳಿಸಿದ್ರೆ, ಮೊದಲ ಪಂದ್ಯದಲ್ಲಿ 4 ರನ್​ಗೆ ಸುಸ್ತಾದ ಶುಭ್​ಮನ್​ ಗಿಲ್​ 2ನೇ ಟಿ20ಯಲ್ಲಿ ಡಕೌಟ್​ ಆಗಿ ನಿರ್ಗಮಿಸಿದ್ದಾರೆ. ನಾಯಕ, ಉಪನಾಯಕನ ವೈಫಲ್ಯ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿದೆ. 

ಇದನ್ನೂ ಓದಿ:  ವಿರಾಟ್ ಕೊಹ್ಲಿ 35 ವರ್ಷ ಕಳೆದ ಮೇಲೆ.. ಇಂಟ್ರೆಸ್ಟಿಂಗ್ ಸ್ಟೋರಿ..!

ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!

ಅಭಿಷೇಕ್​ ಶರ್ಮಾ ‘ಅಸಲಿ’ ಆಟವೇ ಮಾಯ.!

ಓಪನರ್​ ಅಭಿಷೇಕ್​ ಶರ್ಮಾ ಕೂಡ ತನ್ನ ಎಂದಿನ ಆಟವಾಡುವಲ್ಲಿ ಫೇಲ್​ ಆಗಿದ್ದಾರೆ. ಮೊದಲ 2 ಪಂದ್ಯಗಳಲ್ಲಿ ತಲಾ 17 ರನ್​ಗಳಿಸಿ ಪಂಜಾಬ್​ ಪುತ್ತರ್​ ನಿರ್ಗಮಿಸಿದ್ದಾರೆ. ಗುಡ್​ ಸ್ಟಾರ್ಟ್​ ಪಡೆದುಕೊಳ್ತಿರೋ ಅಭಿಷೇಕ್​, ಬಿಗ್​ ಸ್ಕೋರ್​ ಆಗಿ ಕನ್ವರ್ಟ್​ ಮಾಡುವಲ್ಲಿ ಫೇಲ್​ ಆಗಿದ್ದಾರೆ. ಬೌಂಡರಿ, ಸಿಕ್ಸರ್​ ಸಿಡಿಸಿ  ರನ್​​ ಮಳೆ ಸುರಿಸ್ತಿದ್ದ ಅಭಿಷೇಕ್​ ಅಸಲಿ ಆಟ ಮಾಯವಾಗಿರೋದು ತಂಡಕ್ಕೆ ಹಿನ್ನಡೆಯಾಗಿದೆ. ಇಂದಾದ್ರೂ ಲೆಫ್ಟಿ ಬ್ಯಾಟರ್​ ರಿಯಲ್​ ಖದರ್​ನಲ್ಲಿ ಘರ್ಜಿಸಬೇಕಿದೆ. 

ಆಲ್​​ರೌಂಡರ್​ ಶಿವಂ ದುಬೆ ಕೂಡ ಮೊದಲ 2 ಪಂದ್ಯದಲ್ಲಿ ಫೇಲ್​ ಆಗಿದ್ದಾರೆ. ಕಟಕ್​​ನಲ್ಲಿ 9 ಎಸೆತ ಎದುರಿಸಿ ಕೇವಲ 11 ರನ್​ಗಳಿಸಿ ಔಟಾದ ದುಬೆ, ಮುಲ್ಲನ್​ಪುರದಲ್ಲಿ 1 ರನ್​ಗೆ ಮಕಾಡೆ ಮಲಗಿದ್ರು. ಬೌಲಿಂಗ್​​ನಲ್ಲೂ ದುಬೆ ದುಬಾರಿಯಾದ್ರು. ಇಂದು ಕಮ್​ಬ್ಯಾಕ್​ ಮಾಡೋ ಲೆಕ್ಕಾಚಾರದಲ್ಲಿ ದುಬೆ ಇದ್ದಾರೆ. ಆದ್ರೆ, ಅದಕ್ಕೂ ಮುನ್ನ ದುಬೆಗೆ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಯೂ ಇದೆ. ದುಬೆನ ಡ್ರಾಪ್​ ಮಾಡಿ ವಾಷಿಂಗ್ಟನ್​ ಸುಂದರ್​ಗೆ ಚಾನ್ಸ್​ ನೀಡಿದ್ರೂ ಅಚ್ಚರಿಪಡಬೇಕಿಲ್ಲ. 

ಟೀಮ್​ ಇಂಡಿಯಾ ಸ್ಪೀಡ್​​ಗನ್​ಗಳಾದ ಆರ್ಷ್​​ದೀಪ್​ ಸಿಂಗ್, ಜಸ್​​ಪ್ರಿತ್​ ಬೂಮ್ರಾ 2ನೇ ಟಿ20ಯಲ್ಲಿ ಫ್ಲಾಪ್​ ಶೋ ನೀಡಿದ್ರು. ವೈಡ್​ ಮೇಲೆ ವೈಡ್​ ಎಸೆದ ಆರ್ಷ್​​ದೀಪ್​ ಬರೋಬ್ಬರಿ 54 ರನ್​ ಬಿಟ್ಟುಕೊಟ್ರೆ, ಬೂಮ್ರಾ 45 ರನ್​ಗಳ ಗಿಫ್ಟ್​ ನೀಡಿದ್ರು. ದುಬಾರಿ ಬೌಲಿಂಗ್​ ಮಾಡಿದ್ದಲ್ಲದೇ ವಿಕೆಟ್​ಲೆಸ್​​ ಆಗಿ ನಿರ್ಗಮಿಸಿದ್ರು. ಮುಲ್ಲನ್​ಪುರದಲ್ಲಿ ಲೈನ್​ & ಲೆಂಥ್​ ಕಂಡುಕೊಳ್ಳುವಲ್ಲಿ ಫೇಲ್​ ಆದ ಆರ್ಷ್​​ದೀಪ್​ ಸಿಂಗ್​, ಜಸ್​​​ಪ್ರೀತ್​ ಬೂಮ್ರಾ ಧರ್ಮಶಾಲಾದಲ್ಲಿ ರೈಟ್​ ಟ್ರ್ಯಾಕ್​ಗೆ ಮರಳಬೇಕಿದೆ.

ಇದನ್ನೂ ಓದಿ: ಮೆಸ್ಸಿ ನೋಡಲು ಬಂದು ನಿರಾಸೆ.. ಮೈದಾನಕ್ಕೆ ಸಿಕ್ಕ ಸಿಕ್ಕ ವಸ್ತುಗಳ ಎಸೆದು ಫ್ಯಾನ್ಸ್ ಆಕ್ರೋಶ..! 

ಬ್ಯಾಟಿಂಗ್​ನಲ್ಲಿ ಡಿಸೆಂಟ್​ ಪರ್ಫಾಮೆನ್ಸ್​ ನೀಡಿರೋ ಅಕ್ಷರ್​​ ಪಟೇಲ್​, ಬೌಲಿಂಗ್​ನಲ್ಲಿ ರಿಧಮ್​ ಕಂಡುಕೊಂಡ್ರೆ ತಂಡದ ಸ್ಟ್ರೆಂಥ್​ ಮತ್ತಷ್ಟು ಹೆಚ್ಚಲಿದೆ. ಈ ಹಿನ್ನಡೆಗಳ ಹೊರತಾಗಿ ತಿಲಕ್​ ವರ್ಮಾ, ಹಾರ್ದಿಕ್​ ಪಾಂಡ್ಯ, ವರುಣ್​ ಚಕ್ರವರ್ತಿ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​​ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಸದ್ಯ ಸಮಾಧಾನ ತರಿಸಿದೆ. 

ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಇನ್​​ಕನ್ಸಿಸ್ಟೆನ್ಸಿ ಸಮಸ್ಯೆ ಎದುರಾಗಿದ್ರೆ, ಸೌತ್​ ಆಫ್ರಿಕಾ ತಂಡ ಫುಲ್​ ಕಾನ್ಪಿಡೆನ್ಸ್​ನಲ್ಲಿದೆ. 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್​, ಬೌಲಿಂಗ್ ಎರಡರಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿ ರಿಧಮ್​ ಕಂಡುಕೊಂಡಿದೆ. ಬಲಿಷ್ಠ ಬ್ಯಾಟಿಂಗ್​, ಭರ್ಜರಿ ಬೌಲಿಂಗ್​ ಅಟ್ಯಾಕ್​ ಹೊಂದಿರೋ ಸೌತ್​ ಆಫ್ರಿಕಾ ಇಂದು ಟೀಮ್​ ಇಂಡಿಯಾಗೆ ಟಫ್​ ಫೈಟ್​ ಕೊಡೋದು ಪಕ್ಕಾ.! ಇದನ್ನ ಟೀಮ್​ ಇಂಡಿಯಾ ಹೇಗೆ ಹ್ಯಾಂಡೆಲ್​ ಮಾಡುತ್ತೆ ಅನ್ನೋದ್ರ ಮೇಲೆ ಸೋಲು-ಗೆಲುವು ನಿರ್ಧಾರವಾಗಲಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gautam Gambhir Surya kumar Yadav Ind vs SA T20I India vs South Africa
Advertisment