/newsfirstlive-kannada/media/media_files/2025/12/13/lionel-messi-2025-12-13-13-23-44.jpg)
ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ಕಾರ್ಯಕ್ರಮದಲ್ಲಿ ದೊಡ್ಡ ದಾಂಧಲೆ ನಡೆದಿದೆ. ನೆಚ್ಚಿನ ಆಟಗಾರನ ನೋಡಲು ಅವಕಾಶ ಸಿಗದಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು, ದೊಡ್ಡ ಗಲಾಟೆ ಮಾಡಿದ್ದಾರೆ.
ಏನೆಲ್ಲ ಆಯ್ತು..?
ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಅರ್ಜೆಂಟೀನಾ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ (Lionel Messi) ಭಾರತ ಪ್ರವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಕೋಲ್ಕತ್ತಾ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಮೆಸ್ಸಿ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತಕ್ಷಣ, ಅಭಿಮಾನಿಗಳು ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಖುಷಿಯಿಂದ ಅಭಿಮಾನಿಗಳು ಮೆಸ್ಸಿ-ಮೆಸ್ಸಿ ಎಂದು ಜಪಿಸಲು ಪ್ರಾರಂಭಿಸಿದ್ದರು. ಅಲ್ಲಿಂದ ಮೆಸ್ಸಿ ಹೋಟೆಲ್‌ಗೆ ಹೋದರು. ಹೋಟೆಲ್​​ನಲ್ಲಿ ವಿಶ್ರಾಂತಿ ಪಡೆದ ಬಳಿಕ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಬರಬೇಕಾಗಿತ್ತು.
ಇದನ್ನೂ ಓದಿ: ಏಷ್ಯಾಕಪ್​ ಅಖಾಡದಲ್ಲೂ ಶತಕ ‘ವೈಭವ’; ಟಿ20 ವಿಶ್ವಕಪ್ ಆಯ್ಕೆಗೆ ಹೆಚ್ಚಿದ ಒತ್ತಡ
ಅಂತೆಯೇ ಕೋಲ್ಕತ್ತಾದ ಲೇಕ್ ಸಿಟಿಯಲ್ಲಿ ಲಿಯೋನೆಲ್ ಮೆಸ್ಸಿ, ತಮ್ಮ 70 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದರು. ನಂತರ ಬಾಲಿವುಡ್ ಸ್ಟಾರ್​ ಶಾರುಖ್ ಖಾನ್ ಮತ್ತು ಆರ್‌ಪಿಜಿಎಸ್ ಗ್ರೂಪ್ ಮಾಲೀಕ ಸಂಜೀವ್ ಗೋಯೆಂಕಾರನ್ನು ಭೇಟಿಯಾದರು.
ಬಳಿಕ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಹೋದರು. ಅಲ್ಲಿ ಅಭಿಮಾನಿಗಳು ಅವರನ್ನು ನೋಡಲು ಉತ್ಸುಕರಾಗಿದ್ದರು. ಭಾರೀ ಜನಸಮೂಹವಿತ್ತು. ಮೆಸ್ಸಿ ಆಗಮಿಸುತ್ತಿದ್ದಂತೆಯೇ ಎಲ್ಲರಿಗೂ ಕೈ ಬೀಸಿದರು. ಅನೇಕರು ಅವರ ಬಳಿಗೆ ನುಗ್ಗಲು ಪ್ರಾರಂಭಿಸಿದರು. ಇದರಿಂದಾಗಿ ಅವರು ಕ್ರೀಡಾಂಗಣದಿಂದ ಬೇಗ ನಿರ್ಗಮಿಸಿದರು.
ಬರೀ 10 ನಿಮಿಷ ಇದ್ದರು
ಇದರಿಂದ ಅಭಿಮಾನಿಗಳು ಕೋಪಗೊಂಡಿರು. ಅನೇಕ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಇದರಿಂದ ದೊಡ್ಡ ಅವ್ಯವಸ್ಥೆ ಉಂಟಾಗಿದೆ. ಅಭಿಮಾನಿಗಳು ಕ್ರೀಡಾಂಗಣದ ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ಕಲ್ಲು, ಬಾಟಲಿಗಳನ್ನು ಮೈದಾನಕ್ಕೆ ಎಸೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಮೊಟ್ಟೆಗಳಿಗೂ ‘Expiry date’! ಕೆಟ್ಟು ಹೋದ ಮೊಟ್ಟೆಗಳನ್ನು ಗುರುತಿಸೋದು ಹೇಗೆ..?
ಒಂದು ಟಿಕೆಟ್​ಗೆ 12 ಸಾವಿರ
ಘಟನೆ ಬಗ್ಗೆ ಲಿಯೋನೆಲ್ ಮೆಸ್ಸಿ ಅಭಿಮಾನಿಯೊಬ್ಬ ಮಾತನ್ನಾಡಿ.. ಖಂಡಿತ ಇದು ನಿರಾಶಾದಾಯಕ. ಅವರು ಕೇವಲ 10 ನಿಮಿಷಗಳ ಕಾಲ ಇದ್ದರು. ಎಲ್ಲಾ ರಾಜಕಾರಣಿಗಳು ಮತ್ತು ಮಂತ್ರಿಗಳು ಅವರನ್ನು ಸುತ್ತುವರೆದಿದ್ದರು. ನಮಗೆ ಏನೂ ಕಾಣಿಸಲಿಲ್ಲ. ಅವರು 10 ನಿಮಿಷಗಳ ಕಾಲ ಇದ್ದು, ಅಲ್ಲಿಂದ ಹೊರಟು ಹೋದರು. ನಾವು ಇದಕ್ಕಾಗಿ ತುಂಬಾ ಹಣ ಹಾಗೂ ಎಮೋಷನ್​​ನಿಂದ ಬಂದಿದ್ದೇವು. 12,000 ರೂಪಾಯಿ ಟಿಕೆಟ್ ಖರೀದಿಸಿದ ನಂತರವೂ ಮೆಸ್ಸಿ ನೋಡಲು ಸಾಧ್ಯವಾಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us