ಏಷ್ಯಾಕಪ್​ ಅಖಾಡದಲ್ಲೂ ಶತಕ ‘ವೈಭವ’; ಟಿ20 ವಿಶ್ವಕಪ್ ಆಯ್ಕೆಗೆ ಹೆಚ್ಚಿದ ಒತ್ತಡ

ಯಂಗ್ ವೈಭವ್ ಸೂರ್ಯವಂಶಿ ಈಗ ವಿಶ್ವ ಕ್ರಿಕೆಟ್​​ನ ಕೇಂದ್ರ ಬಿಂದು. 14 ವರ್ಷದಲ್ಲೇ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿರುವ ವೈಭವ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಎಲ್ಲಾ ಫಾರ್ಮೆಟ್​ಗಳಲ್ಲೂ ಮಿಂಚ್ತಿರುವ ಅವರು, ರಾಷ್ಟ್ರೀಯ ತಂಡದ ಸೆಲೆಕ್ಟರ್ಸ್​​ಗೆ ಮತ್ತೊಂದು ಸ್ಟ್ರಾಂಗ್​ ಮೆಸೇಜ್​ ರವಾನಿಸಿದ್ದಾರೆ.

author-image
Ganesh Kerekuli
vaibhav suryavanshi
Advertisment
  • ದುಬೈನಲ್ಲಿ ಸೆಂಚುರಿ ಸ್ಟಾರ್​​ ಸೂರ್ಯವಂಶಿ ದರ್ಬಾರ್
  • 14 ವರ್ಷಕ್ಕೆ ಸೂರ್ಯವಂಶಿಗೆ ಶತಕದ ಸರದಾರನ ಪಟ್ಟ
  • ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯಲ್ಲಿ ಶರವೇಗದ ಶತಕ

ವಯಸ್ಸು ಕೇವಲ14 ವರ್ಷ. ಆತನ ಆಟ ಮಾತ್ರ ಬೆಂಕಿ, ಬಿರುಗಾಳಿ! ಈ ಯಂಗ್​ ಬಾಯ್​ ಟೆರರ್​ ಬ್ಯಾಟಿಂಗ್​ ಮುಂದೆ ಘಟಾನುಘಟಿ ಬೌಲರ್​ಗಳೂ ಡಮ್ಮಿಯೇ. ಈತನ ಫಿಯರ್​ ಲೆಸ್ ಫೈರಿ ಬ್ಯಾಟಿಂಗ್​ ಬೌಲರ್​ ಎದೆಯಲ್ಲಿ ನಡುಕ ಹುಟ್ಟಿಸಿದೆ. ಕ್ರಿಕೆಟ್​ ಲೋಕದಲ್ಲಿ ನಡೀತಿರೋದು ಈತನದ್ದೇ ದರ್ಬಾರ್​. ಈ ಬಾಲಕನ ಹೆಸರು ವೈಭವ್​ ಸೂರ್ಯವಂಶಿ.

ಏಷ್ಯಾಕಪ್​ ಅಖಾಡದಲ್ಲೂ ಶತಕ ‘ವೈಭವ’

ಟೀಮ್​ ಇಂಡಿಯಾದ ಯಂಗ್​ ಬಾಯ್​​ ವೈಭವ್​ ಸೂರ್ಯವಂಶಿಯ ದರ್ಬಾರ್​ ದುಬೈನಲ್ಲೂ ಮುಂದುವರೆದಿದೆ. ಅಂಡರ್​ 19 ಏಷ್ಯಾಕಪ್​ ಟೂರ್ನಿಯನ್ನಾಡ್ತಿರೋ ಸೂರ್ಯವಂಶಿ ಮೊದಲ ಪಂದ್ಯದಲ್ಲಿ ಭಯಂಕರ ಇನ್ನಿಂಗ್ಸ್​ ಕಟ್ಟಿದ್ದಾರೆ. ಯುಎಇ ಬೌಲರ್​ಗಳ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ದಾರೆ. 

ಇದನ್ನೂ ಓದಿ: ಪಾಕ್​ ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ..!

Vaibha Suryavamshi

ದುಬೈನ ಐಸಿಸಿ ಅಕಾಡೆಮಿಯಲ್ಲಿ ಬೌಂಡರಿ, ಸಿಕ್ಸರ್​ಗಳನ್ನ ಚಚ್ಚಿ ಬಿಸಾಕಿದ ವೈಭವ್​ ಸೂರ್ಯವಂಶಿ ಬೌಲರ್​ಗಳನ್ನ ಹಣ್ಣು ಗಾಯಿ ನೀರುಗಾಯಿ ಮಾಡಿದ್ರು. ಮೈದಾನ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿದ ಸೂರ್ಯವಂಶಿ ಈ ವರ್ಷದಲ್ಲಿ ಮತ್ತೊಂದು ಶತಕ ಸಿಡಿಸಿ ಸಂಭ್ರಮಿಸಿದ್ರು. ಕೇವಲ ಕೇವಲ 56 ಎಸೆತಗಳಲ್ಲೇ ವೈಭವ್​ ಸೂರ್ಯವಂಶಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಒಟ್ಟು 95 ಎಸೆತ ಎದುರಿಸಿದ ವೈಭವ್​ ಸೂರ್ಯವಂಶಿ ಎದುರಿಸಿದಿದ್ರು. ರನ್ನಿಂಗ್​ ಬಿಟ್ವೀನ್​ ದ ವಿಕೆಟ್ಸ್​ಗಿಂತ ಬೌಂಡರಿ, ಸಿಕ್ಸರ್​ ಬಾರಿಸೋದ್ರಲ್ಲೇ ಸೂರ್ಯವಂಶಿ ಬ್ಯುಸಿಯಾಗಿದ್ರು. ಬರೋಬ್ಬರಿ 9 ಬೌಂಡರಿ, 14 ಭರ್ಜರಿ ಸಿಕ್ಸರ್​ ಚಚ್ಚಿದ ವೈಭವ್​ ಬರೋಬ್ಬರಿ 171 ರನ್​ಗಳ ಬೊಂಬಾಟ್​ ಇನ್ನಿಂಗ್ಸ್​ ಕಟ್ಟಿದ್ರು.

ಈ ಸೆಂಚುರಿ ಸಿಡಿಸೋಕೆ ಅದೆಷ್ಟೋ ಕ್ರಿಕೆಟ್​ ಆಡಿದ ಆಟಗಾರರೇ ಪರದಾಟ ನಡೆಸ್ತಾರೆ. ಈ ವೈಭವ್​ ಸೂರ್ಯವಂಶಿಗೆ ಇದು ನೀರು ಕುಡಿದಷ್ಟು ಸುಲಭ. ಈಗ ಏಷ್ಯಾಕಪ್​ನಲ್ಲಿ ಶತಕ ಸಾಧನೆ ಮಾಡಿರೂ ಸೂರ್ಯವಂಶಿ, ಕೆಲ ದಿನಗಳ ಹಿಂದಷ್ಟೇ ಪ್ರತಿಷ್ಟಿತ ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ದಾಖಲೆಯ ಶತಕ ಸಿಡಿಸಿದ್ರು. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಹಾರಾಷ್ಟ್ರ ಬೌಲರ್​ಗಳನ್ನ ಚಚ್ಚಿದ ವೈಭವ್, ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ರು.

ಇದನ್ನೂ ಓದಿ: ವಿರಾಟ್ ಕೊಹ್ಲಿ 35 ವರ್ಷ ಕಳೆದ ಮೇಲೆ.. ಇಂಟ್ರೆಸ್ಟಿಂಗ್ ಸ್ಟೋರಿ..!

vaibhav suryavanshi (1)

ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ T20 ಟೂರ್ನಿಯಲ್ಲೂ, ವೈಭವ್ ಶರವೇಗದ ಶತಕ ಸಿಡಿಸಿದ್ರು. ಯು.ಎ.ಇ ಬೌಲರ್​ಗಳನ್ನ ಮನಬಂದಂತೆ ಬೆಂಡೆತ್ತಿದ್ದ ಬಿಹಾರ್ ಬ್ಯಾಟ್ಸ್​ಮನ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿ ವೈಭವ್, ದಾಖಲೆ ಬರೆದಿದ್ರು. 

ಟೈಟನ್ಸ್​ ವಿರುದ್ಧ ಸೆಂಚುರಿ ಸ್ಟಾರ್..!

ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ವಾಷಿಂಗ್ಟನ್ ಸುಂದರ್​ರಂತಹ ಅಂತಾರಾಷ್ಟ್ರೀಯ ಆಟಗಾರರ ಎದುರು, ವೈಭವ್ ಸೂರ್ಯವಂಶಿ ಎಚ್ಚೆದೆಯ ಶತಕ ಸಿಡಿಸಿದ್ರು. ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಸೆಂಚೂರಿ ಬಾರಿಸಿದ್ದ ವೈಭವ್, ಐಪಿಎಲ್​ನಲ್ಲಿ ರೆಕಾರ್ಡ್ ಮಾಡಿದ್ರು.

ಇಂಗ್ಲೆಂಡ್​ನ ವೋರ್ಸೆಸ್ಟರ್​ನಲ್ಲಿ ನಡೆದ ಯೂತ್ ODI ಪಂದ್ಯದಲ್ಲಿ ವೈಭವ್, ಆಂಗ್ಲ ಬೌಲರ್​ಗಳ ಬೆವರಿಳಿಸಿದ್ರು. ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್, 143 ರನ್​ಗಳಿಸಿದ್ರು. 10 ಭರ್ಜರಿ ಸಿಕ್ಸರ್​ಗಳು ವೈಭವ್ ಬ್ಯಾಟ್​ನಿಂದ ದಾಖಲಾಗಿತ್ತು. ಅದಕ್ಕೂ ಹಿಂದೆ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಮ್ ಮತ್ತು ಬ್ರಿಸ್ಬೇನ್​​ನ ಇಯಾನ್ ಹೀಲಿ ಸ್ಟೇಡಿಯಮ್​ನಲ್ಲಿ ನಡೆದ ಯೂತ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಎದುರು ಸೆಂಚುರಿ ಬಾರಿಸಿದ್ರು.

ಇದನ್ನೂ ಓದಿ: ಭಾರತಕ್ಕೆ ಲಿಯೋನೆಲ್ ಮೆಸ್ಸಿ ಭೇಟಿ.. ‘ಸೆಲ್ಫಿ ವಿತ್ ಮೆಸ್ಸಿ’ಗೆ 9.95 ಲಕ್ಷ ರೂಪಾಯಿ ನಿಗಧಿ

ಕಳೆದೊಂದು ವರ್ಷದಿಂದ ರೆಡ್​ ಹಾಟ್​ ಫಾರ್ಮ್​​ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ವೈಭವ್, ಶತಕದ ಮೇಲೆ ಶತಕ ಸಿಡಿಸಿ ಟೀಮ್ ಇಂಡಿಯಾ ಕದವನ್ನ ಜೋರಾಗಿ ತಟ್ಟುತ್ತಿದ್ದಾರೆ. WAITING ಲಿಸ್ಟ್​ನಲ್ಲಿರೋ ವೈಭವ್, ಟಿ20 ವಿಶ್ವಕಪ್​ ಆಡೋ ಕನವರಿಕೆಯಲ್ಲಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vaibhav Suryavanshi
Advertisment