/newsfirstlive-kannada/media/media_files/2025/10/12/kohli-2025-10-12-12-36-38.jpg)
ಆಸಿಸ್​ ಪ್ರವಾಸದಲ್ಲಿ ಆಡಿದ ಸತತ ಬಾರಿ ಸೊನ್ನೆ ಸುತ್ತಿದ ಬಳಿಕ ಕೊಹ್ಲಿ ಕರಿಯರ್​ ಕ್ಲೋಸ್​ ಎಂದು ಹಲವರು ನಿರ್ಧರಿಸಿಬಿಟ್ಟಿದ್ರು. ಹಾಗೇ ನಿರ್ಧಾರ ಮಾಡಿದವರಿಗೆ ನಂತರದ 4 ಇನ್ನಿಂಗ್ಸ್​ಗಳಲ್ಲಿ ಮುಟ್ಟಿನೋಡಿಕೊಳ್ಳೋ ಆನ್ಸರ್​ ಕೊಟ್ಟಿದ್ದಾರೆ. ಅನುಮಾನಿಸಿ, ಅವಮಾನಿಸಿದವರಿಗೆ ಮಾಸ್​ ಆಟದಿಂದಲೇ ಆನ್ಸರ್​ ಕೊಟ್ಟಿದ್ದಾರೆ. 2027ರ ವಿಶ್ವಕಪ್​ ಆಡೋಕೆ ಪಣ ತೊಟ್ಟಿರೋ ಕಿಂಗ್​ ಕೊಹ್ಲಿ, ವಯಸ್ಸಾದಂತೆ ಮತ್ತಷ್ಟು ಶೈನ್​ ಆಗ್ತಿದ್ದಾರೆ.
ವಿರಾಟ್​ ಕೊಹ್ಲಿ.. ಕ್ರಿಕೆಟ್​ನಲ್ಲಿ ಈ ಹೆಸರಿಗಿರೋ ಗತ್ತು, ಗೈರತ್ತೇ ಬೇರೆ. ಮಾಡ್ರನ್​ ಕ್ರಿಕೆಟ್​ನ ದೊರೆ, ಕಿಂಗ್​, ರನ್​ಮಷೀನ್​, ರೆಕಾರ್ಡ್​ ಬ್ರೇಕರ್​, ಶತಕದ ಸರದಾರ.. ಒಂದಾ? ಎರಡಾ? ಕ್ರಿಕೆಟ್​​ ಜಗತ್ತಿಗೆ ಕಾಲಿಟ್ಟ ಕಳೆದೊಂದು ದಶಕದಲ್ಲಿ ಈ ವಿರಾಟ್​ ಕೊಹ್ಲಿ ಮಾಡದ ಸಾಧನೆಯೇ ಇಲ್ಲ.. ಮುರಿಯದ ದಾಖಲೆಯಿಲ್ಲ.. ಮಾಡ್ರನ್​ ಡೇ ಕ್ರಿಕೆಟ್​ನ ದೊರೆ ಅನ್ನೋ ಪಟ್ಟ ಸುಖಾ ಸುಮ್ಮನೇ ಬಂದಿದ್ದಾ?
/filters:format(webp)/newsfirstlive-kannada/media/media_files/2025/12/06/kohli-2025-12-06-10-02-51.jpg)
ಸೌತ್​ ಆಫ್ರಿಕಾ ಸರಣಿಯಲ್ಲಿ ಪ್ರೈಮ್​ ಕೊಹ್ಲಿ ದರ್ಶನ
ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಏಕದಿನ ಪಂದ್ಯದಲ್ಲಿ ಬೊಂಬಾಟ್​​ ಹಾಫ್​​ ಸೆಂಚುರಿ ಸಿಡಿಸಿ ಜಸ್ಟ್​ ಟ್ರೈಲರ್​​​ ತೋರಿಸಿದ್ದ ವಿರಾಟ್​​, ಸೌತ್​ ಆಫ್ರಿಕಾ ಸರಣಿಯಲ್ಲಿ ಫುಲ್​ ಪಿಚ್ಚರ್​ ತೋರಿಸಿದ್ದಾರೆ. ರಾಂಚಿ, ರಾಯ್​​ಪುರದಲ್ಲಿ ರಣಾರ್ಭಟ ಸೃಷ್ಟಿಸಿ ಸೆಂಚುರಿ ಚಚ್ಚಿ ಬಿಸಾಕಿದ ವಿರಾಟ್​ ಕೊಹ್ಲಿ, ವೈಜಾಗ್​ನಲ್ಲಿ ರನ್​ ಸುನಾಮಿ ಸೃಷ್ಟಿಸಿ ಅಬ್ಬರದ ಅರ್ಧಶತಕ ಸಿಡಿಸಿದ್ರು. 3 ಪಂದ್ಯಗಳಲ್ಲಿ ಬರೋಬ್ಬರಿ 151ರ ಸರಾಸರಿಯಲ್ಲಿ, 302 ರನ್​ಗಳಿಸಿ ಸರಣಿ ಶ್ರೇಷ್ಠ ಪರ್ಫಾಮೆನ್ಸ್​ ನೀಡಿದ್ರು.
ಇದನ್ನೂ ಓದಿ:
35 ವರ್ಷ ದಾಟಿದ ಮೇಲೆ ವಿರಾಟ್..
ವಯಸ್ಸಾದಂತೆ ಕ್ರಿಕೆಟಿಗರ ಖದರ್​ ಕಡಿಮೆಯಾಗುತ್ತೆ. ವಯಸ್ಸಾದಂತೆ ವಿರಾಟ್​ ಕೊಹ್ಲಿ ಸಿಂಹ ಘರ್ಜನೆ ಮತ್ತಷ್ಟು ಜೋರಾಗ್ತಿದೆ. ಅದ್ರಲ್ಲೂ 35 ವರ್ಷ ದಾಟಿದ ಬಳಿಕವಂತೂ ವಿರಾಟ್​ ಆರ್ಭಟ ಜೋರಾಗಿದೆ. 2023ರಲ್ಲಿ 2 ಸೆಂಚುರಿ ಸಿಡಿಸಿದ ಕೊಹ್ಲಿ, 2024ರಲ್ಲಿ ಒಂದು ಸೆಂಚುರಿ ಬಾರಿಸಿದ್ರು, ಈ ವರ್ಷ ಬರೋಬ್ಬರಿ 3 ಶತಕ ಸಿಡಿಸಿದ್ದಾರೆ. ವೈಟ್​ ಬಾಲ್​ ಫಾರ್ಮೆಟ್​ನಲ್ಲಂತೂ ಕಿಂಗ್​ ಕೊಹ್ಲಿ ದರ್ಬಾರ್​ ನಡೆಸಿದ್ದಾರೆ. ವರ್ಷದ ಬಳಿಕ ವೈಟ್​ಬಾಲ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳನ್ನಾಡಿರೋ ಕೊಹ್ಲಿ 2545 ರನ್​ ಬಾರಿಸಿದ್ದಾರೆ. ಬರೋಬ್ಬರಿ 50.90ರ ಸರಾಸರಿಯಲ್ಲಿ 19 ಅರ್ಧಶತಕ, 6 ಸೆಂಚುರಿ ಸಿಡಿಸಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಕ್ರಿಕೆಟಿಗರು ತಪ್ಪು ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದ ರಿವಾಬಾ ಜಡೇಜಾ !: ಪತಿ ಹೊಗಳುವ ಭರದಲ್ಲಿ ಯಡವಟ್ಟು
/filters:format(webp)/newsfirstlive-kannada/media/media_files/2025/11/30/virat-kohli-2025-11-30-15-54-12.jpg)
ವಯಸ್ಸಾದಂತೆ ಹೆಚ್ಚಾಗ್ತಿದೆ ರನ್​ ದಾಹ
ಮಾಡ್ರನ್​ ಡೇ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಗಿರೋವಷ್ಟು ರನ್​ ದಾಹ ಬೇರೆ ಯಾವ ಆಟಗಾರನಿಗೂ ಇರಲಿಲ್ಲ. 35 ವರ್ಷವಾದ ಬಳಿಕ ಕೂಡ ಅದೇ ಫ್ಯಾಷನ್​, ಅದೇ ಹಂಗರ್​ ಕೊಹ್ಲಿಯಲ್ಲಿದೆ. ಟಿ20, ಟೆಸ್ಟ್​ಗೆ ಗುಡ್​ ಬೈ ಹೇಳಿ ಒನ್​ ಡೇ ಫಾರ್ಮೆಟ್​ನಲ್ಲಿ ಮಾತ್ರ ಸಕ್ರೀಯವಾಗಿರೋ ವಿರಾಟ್​ ರನ್​ ಮಷೀನ್​ ಅನ್ನೋ ಹೆಸರಿಗೆ ತಕ್ಕಂತೆ ರನ್​ಹೊಳೆ ಹರಿಸಿದ್ದಾರೆ. 35 ವರ್ಷ ದಾಟಿದ ಬಳಿಕ ಏಕದಿನ ಕ್ರಿಕೆಟ್​ ಹೆಚ್ಚು ಸರಾಸರಿ ಹೊಂದಿದ ಬ್ಯಾಟರ್​ ಎನಿಸಿದ್ದಾರೆ. 35 ವರ್ಷದ ನಂತರದ ಏಕದಿನ ಕ್ರಿಕೆಟ್​​ನಲ್ಲಿ ಹೆಚ್ಚು ಸರಾಸರಿ ಹೊಂದಿರೋ ಬ್ಯಾಟರ್ಸ್​​ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 60.43ರ ಸರಾಸರಿ ಹೊಂದಿದ್ರೆ, ಕುಮಾರ್​ ಸಂಗಾಕ್ಕರ 57.49, ಡೇವಿಡ್​ ಮಲಾನ್​ 56.55, ಮ್ಯಾಥ್ಯೂ ಹೆಡೆನ್​ 54.55ರ ಸರಾಸರಿ ಹೊಂದಿದ್ರು.
2027ರ ಏಕದಿನ ವಿಶ್ವಕಪ್​ ಆಡೋ ಸ್ಪಷ್ಟವಾದ ಗುರಿ ಹೊಂದಿರೋ ಕೊಹ್ಲಿ, ದಿಟ್ಟವಾದ ಹೆಜ್ಜೆಯನ್ನ ಇಡ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಸೂಪರ್-ಡೂಪರ್​ ಪ್ರದರ್ಶನ ನೀಡ್ತಾ ಸ್ಥಾನವನ್ನ ಭದ್ರಪಡಿಸಿಕೊಳ್ತಿದ್ದಾರೆ. ಸಾಮರ್ಥ್ಯವನ್ನ ಪ್ರಶ್ನಿಸಿ ಅನುಮಾನಿಸಿದವರಿಗೆ ತನ್ನ ಆಟದಿಂದಲೇ ಮುಟ್ಟಿ ನೋಡಿಕೊಳ್ಳೋ ಆನ್ಸರ್​ ಕೊಡ್ತಿದ್ದಾರೆ. ಡ್ರಾಪ್​ ಮಾಡ್ತಿನಿ ಎಂದ ಮ್ಯಾನೇಜ್​ಮೆಂಟ್​ಗೆ DROP ME IF YOU CAN ಅಂತಾ ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಆಯ್ಕೆಗಾರರಿಗೆ ನೇರ ಸಂದೇಶ ಕೊಟ್ಟ ಜೈಸ್ವಾಲ್.. ದೊಡ್ಡ ಕನಸು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us