ಗಿಲ್​​ಗೆ ಬಂಪರ್​ ಬಹುಮಾನ.. ಕೊಹ್ಲಿ, ರೋಹಿತ್​​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್..!

ಟೀಮ್​ ಇಂಡಿಯಾದ ಜೋಡೆತ್ತುಗಳಾದ ರೋಹಿತ್​ ಶರ್ಮಾ-ವಿರಾಟ್​​ ಕೊಹ್ಲಿಗೆ ಮತ್ತೊಂದು ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ. ಪ್ರಿನ್ಸ್​ ಶುಭ್​ಮನ್​ ಮೇಲೆ ವಿಶೇಷ ಒಲವು ಹೊಂದಿರೋ ಬಾಸ್​ಗಳು ಗಿಲ್​ ಪ್ರಮೋಷನ್​ ನೀಡಿ ಕೊಹ್ಲಿ-ರೋಹಿತ್​ಗೆ ಡಿಮೋಷನ್​ ನೀಡಲು ಸಜ್ಜಾಗಿದ್ದಾರೆ.

author-image
Ganesh Kerekuli
Virat kohli (3)
Advertisment
  • BCCI ನೂತನ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಪಟ್ಟಿ ಫೈನಲ್​
  • ಗಿಲ್​ಗೆ ಪ್ರಮೋಷನ್​, ರೋಹಿತ್​-ಕೊಹ್ಲಿಗೆ ಡಿಮೋಷನ್​.?
  • ಮೊಹಮ್ಮದ್​ ಶಮಿ ಹಿಂಬಡ್ತಿ..! ಜಡೇಜಾ ಕಥೆ ಏನು..?

ಇಂಡೋ-ಆಫ್ರಿಕಾ ಟಿ20 ಸರಣಿ, ಐಪಿಎಲ್​ ಮಿನಿ ಆಕ್ಷನ್​ ಸಿದ್ಧತೆಗಳ ನಡುವೆ ಬಿಸಿಸಿಐ ವಲಯದಲ್ಲಿ ಹೊಸ ಚಟುವಟಿಕೆ ಗರಿಗೆದರಿದೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಯಲ್ಲಿ ಆಟಗಾರರ ಸೆಂಟ್ರಲ್​ ಕಾಂಟ್ರ್ಯಾಕ್ಟ್​​ ರಿನ್ಯೂವಲ್​ಗೆ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆದಿವೆ. ಫೈನಲ್​ ನಿರ್ಧಾರಕ್ಕೆ ಮಹೂರ್ತ ಫಿಕ್ಸ್​ ಆಗಿದ್ದು, ಡಿಸೆಂಬರ್​ 22ಕ್ಕೆ ಅಪೆಕ್ಸ್​ ಕೌನ್ಸಿಲ್​ ಮೀಟಿಂಗ್​ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಾಸ್​ಗಳು ನಿರ್ಧರಿಸಿದ್ದಾರೆ. ಕಾಂಟ್ರ್ಯಾಕ್ಟ್​ ವಿಚಾರದಲ್ಲಿ ಕೆಲ ಸರ್​​ಪ್ರೈಸ್​​ ನಿರ್ಧಾರ ತೆಗೆದುಕೊಳ್ಳಲು ಬಾಸ್​​ಗಳು ಮುಂದಾಗಿದ್ದಾರೆ. 

ಶುಭ್​ಮನ್​ಗೆ​ BCCI ಬಾಸ್​ಗಳ ಬಂಪರ್​ ಬಹುಮಾನ

ಟೀಮ್​ ಇಂಡಿಯಾದ ಟೆಸ್ಟ್​ ಹಾಗೂ ಒನ್​ ಡೇ ಟೀಮ್​ನ ಕ್ಯಾಪ್ಟನ್​, ಟಿ20 ಫಾರ್ಮೆಟ್​ನ ವೈಸ್ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಬಂಪರ್​ ಬಹುಮಾನ ನೀಡಲು ಬಿಸಿಸಿಐ ಬಾಸ್​ಗಳು ಮುಂದಾಗಿದ್ದಾರೆ. ಆಲ್​​​ ಫಾರ್ಮೆಟ್​ ಪ್ಲೇಯರ್​ ಶುಭ್​ಮನ್​ ಗಿಲ್​ಗೆ ಟಾಪ್​ ಲೆವೆಲ್​ಗೆ ಪ್ರಮೋಷನ್​ ನೀಡಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಹಾಲಿ A ಗ್ರೇಡ್​ನಲ್ಲಿರೋ ಗಿಲ್​, A+ ಗ್ರೇಡ್​ಗೆ ಪ್ರಮೋಟ್​ ಆಗಲಿದ್ದಾರೆ.

ರೋಹಿತ್​-ಕೊಹ್ಲಿಗೆ ಡಿಮೋಷನ್​?

ಒಂದೆಡೆ ಶುಭ್​ಮನ್​ ಗಿಲ್​ಗೆ ಪ್ರಮೋಷನ್​ ನೀಡೋಕೆ ಸಜ್ಜಾಗಿರೋ ಬಿಸಿಸಿಐ ಬಾಸ್​ಗಳು, ಮಾಜಿ ನಾಯಕರ ಡಿಮೋಷನ್​ಗೂ ಮುಂದಾಗಿದ್ದಾರೆ. ಟಿ20 ಹಾಗೂ ಟೆಸ್ಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿ ಏಕದಿನಕ್ಕೆ ಮಾತ್ರ ಸೀಮಿತವಾಗಿರೋ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ A+ ಗ್ರೇ​ಡ್​ನಿಂದ ಎತ್ತಂಗಡಿಯಾಗೋದು ಕನ್​​ಫರ್ಮ್​.! ಬಿಸಿಸಿಐ ನಿಯಮದ ಪ್ರಕಾರ ಆಲ್​​ಫಾರ್ಮೆಟ್​ ಪ್ಲೇಯರ್ಸ್​ಗೆ ಮಾತ್ರ A+ ಗ್ರೇಡ್​ನಲ್ಲಿ ಸ್ಥಾನ ಸಿಗಲಿದೆ. ಹೀಗಾಗಿ ರೋಹಿತ್​​, ಕೊಹ್ಲಿ ಬಿ ಗ್ರೇಡ್​ಗೆ ಡಿಮೋಟ್​ ಆಗೋ ಸಾಧ್ಯತೆಯಿದೆ. 

ಇದನ್ನೂ ಓದಿ: ವಿದೇಶದಲ್ಲಿ ಕ್ರಿಕೆಟಿಗರು ತಪ್ಪು ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದ ರಿವಾಬಾ ಜಡೇಜಾ !: ಪತಿ ಹೊಗಳುವ ಭರದಲ್ಲಿ ಯಡವಟ್ಟು

BCCI (2)

ಶಮಿಗೆ ಹಿಂಬಡ್ತಿ.. ಜಡೇಜಾ ಕಥೆ ಏನು.?

ಸೀನಿಯರ್​ ವೇಗಿ ಮೊಹಮ್ಮದ್​ ಶಮಿಗೂ ಹಿಂಬಡ್ತಿಯ ಶಾಕ್​ ಕಾದಿದೆ. ಈಗಾಗಲೇ ಸೆಲಕ್ಟರ್ಸ್​ ಶಮಿಯನ್ನ ಸೈಡ್​ಲೈನ್​ ಮಾಡಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಮ್​ ಇಂಡಿಯಾದಿಂದ ಶಮಿ ಹೊರಬಿದ್ದಿದ್ದಾರೆ. ಹೀಗಾಗಿ ಕಾಂಟ್ರ್ಯಾಕ್ಟ್​ ರಿನ್ಯೂವಲ್​ ಮಾಡೋದು ಅನುಮಾನವೇ. ರವೀಂದ್ರ ಜಡೇಜಾ ಟೆಸ್ಟ್​ ಮತ್ತು ಏಕದಿನ ಮಾದರಿಯಲ್ಲಿ ಸಕ್ರಿಯವಾಗಿರೋದಿಂದ A+ ಗ್ರೇಡ್​ನಲ್ಲೇ ಮುಂದುವರೆಯೋ ಸಾಧ್ಯತೆಯಿದೆ. 

ಯಶಸ್ವಿ ಜೈಸ್ವಾಲ್​ಗೆ ಬಡ್ತಿ

B ಕೆಟಗೆರಿಯಲ್ಲಿರೋ ಶ್ರೇಯಸ್​​ ಅಯ್ಯರ್​ ಹಾಗೂ ಯಶಸ್ವಿ ಜೈಸ್ವಾಲ್​ಗೆ ಬಡ್ತಿ ಸಿಗೋ ಸಾಧ್ಯತೆ ದಟ್ಟವಾಗಿದೆ. ಏಕದಿನ ತಂಡ ವೈಸ್​ ಕ್ಯಾಪ್ಟನ್​ ಆಗಿರೋ ಶ್ರೇಯಸ್​​ ಅಯ್ಯರ್​ ಹಾಗೂ ಆಲ್​ ಫಾರ್ಮೆಟ್​​ ಪ್ಲೇಯರ್​ ಯಶಸ್ವಿ ಜೈಸ್ವಾಲ್​ ಸದ್ಯ ಬಿ ಕೆಟಗೆರಿಯಲ್ಲಿದ್ದಾರೆ. ಬಿನಿಂದ ಎ ಗ್ರೇಡ್​ಗೆ ಪ್ರಮೋಟ್​ ಮಾಡಲು ಚರ್ಚೆಗಳು ನಡೆದಿದೆ. ಅಪೆಕ್ಸ್​ ಕೌನ್ಸಿಲ್ ಮೀಟಿಂಗ್​ನಲ್ಲಿ ಅಂತಿಮ ನಿರ್ಧಾರವಾಗಲಿದೆ. ಜೊತೆಗೆ ಸಿ ಗ್ರೇಡ್​ನಲ್ಲಿರೋ ಕೆಲ ಯುವ ಆಟಗಾರರಿಗೂ ಬಡ್ತಿ ನೀಡಲು ಬಿಸಿಸಿಐ ಚಿಂತಿಸಿದೆ. 

ಇದನ್ನೂ ಓದಿ: ಗಾಡಿ ಓಡಿಸಿದ್ದು ಮಗ ಅಲ್ಲ, ಚಾಲಕ.. ಮೃತನ ಕುಟುಂಬಸ್ಥರ ಭೇಟಿ ಮಾಡ್ತೀನಿ -H.M.ರೇವಣ್ಣ

Yashaswi Jaiswal (1)

ಬಿಸಿಸಿಐ ಗುತ್ತಿಗೆ ಒಪ್ಪಂದದ ಪ್ರಕಾರ A+ಗ್ರೇಡ್​ನ ಆಟಗಾರಿಗೆ ವಾರ್ಷಿಕವಾಗಿ 7 ಕೋಟಿ ಹಣ ಸಿಗಲಿದೆ. ಎ ಗ್ರೇಡ್​ನ ಆಟಗಾರರಿಗೆ 5 ಕೋಟಿ, ಬಿ ಗ್ರೇಡ್​ನ ಆಟಗಾರರಿಗೆ 3 ಕೋಟಿ, ಸಿ ಗ್ರೇಡ್​ನ ಆಟಗಾರರಿಗೆ 1 ಕೋಟಿ ಹಣವನ್ನ ಸಂದಾಯವಾಗಲಿದೆ. ಕಾಂಟ್ರಾಕ್ಟ್​ನ ಹೊರತಾಗಿ ಟೀಮ್​ ಇಂಡಿಯಾ ಆಟಗಾರರಿಗೆ ಪ್ರತಿ ಟೆಸ್ಟ್​ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯವೊಂದಕ್ಕೆ 3 ಲಕ್ಷ ರೂಪಾಯಿ ಹಣ ಮ್ಯಾಚ್​ ಫೀ ರೂಪದಲ್ಲಿ ಆಟಗಾರರಿಗೆ ಸಿಗಲಿದೆ. 

ಒಟ್ಟಿನಲ್ಲಿ ಬಿಸಿಸಿಐ ಬಾಸ್​​ಗಳು ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಲ್ಲಿ ಹಲವು ಬದಲಾವಣೆ ತರೋದಕ್ಕಂತೂ ಮುಂದಾಗಿದ್ದಾರೆ. ಸದ್ಯಕ್ಕೆ ಶುಭ್​ಮನ್​ ಗಿಲ್​ ಪ್ರಮೋಷನ್​, ರೋಹಿತ್​-ಕೊಹ್ಲಿಯ ಡಿಮೋಷನ್​ ಬಹುತೇಕ ಕನ್​ಫರ್ಮ್​ ಆಗಿದೆ. ಉಳಿದಂತೆ ಬಿಸಿಸಿಐ ಯಾವೆಲ್ಲಾ ಸರ್​​ಪ್ರೈಸ್​ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದಕ್ಕೆ ಅಪೆಕ್ಸ್​ ಕೌನ್ಸಿಲ್​ ಮೀಟಿಂಗ್​ ಬಳಿಕ ಆನ್ಸರ್​ ಸಿಗಲಿದೆ. 

ಇದನ್ನೂ ಓದಿ: ವಿದೇಶದಲ್ಲಿ ಕ್ರಿಕೆಟಿಗರು ತಪ್ಪು ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದ ರಿವಾಬಾ ಜಡೇಜಾ !: ಪತಿ ಹೊಗಳುವ ಭರದಲ್ಲಿ ಯಡವಟ್ಟು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohith Sharma Virat Kohli BCCI Ravindra Jadeja Mohammed Shami
Advertisment