/newsfirstlive-kannada/media/media_files/2025/12/12/yashaswi-jaiswal-1-2025-12-12-09-23-17.jpg)
ಟೀಮ್ ಇಂಡಿಯಾದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ತನ್ನ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ. ಟೆಸ್ಟ್ ಮತ್ತು ಏಕದಿನ ಫಾರ್ಮೆಟ್​ನಲ್ಲಿ ತಂಡದ ಪರ ಬ್ಯಾಟ್ ಬೀಸ್ತಿರುವ ಜೈಸ್ವಾಲ್, ಟಿ-20 ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡುವ ಕನಸು ವ್ಯಕ್ತಪಡಿಸಿದ್ದಾರೆ.
ಅಗ್ರೆಸಿವ್, ಫಿಯರ್​ಲೆಸ್, ಟೆಕ್ನಿಕಲಿ ಸೌಂಡೆಡ್ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್, ಟೀಮ್ ಇಂಡಿಯಾ ಪರ ಆಲ್​ ಫಾರ್ಮೆಟ್ ಪ್ಲೇಯರ್ ಆಗುವ ಕನಸು ಕಾಣ್ತಿದ್ದಾರೆ. ಸದ್ಯ ಲಾಂಗರ್ ಫಾರ್ಮೆಟ್​ನಲ್ಲಿ ಸಕ್ಸಸ್​​ ಕಂಡಿರುವ ಮುಂಬೈಕರ್, ಇದೀಗ ಶಾರ್ಟರ್ ಫಾರ್ಮೆಟ್​ನಲ್ಲೂ ಸ್ಥಾನಕ್ಕಾಗಿ ಪರೋಕ್ಷ ಬೇಡಿಕೆ ಇಟ್ಟಿದ್ದಾರೆ. ಆ ಮೂಲಕ ಮುಂಬೈಕರ್ ಜೈಸ್ವಾಲ್, ಟೀಮ್ ಇಂಡಿಯಾ ಸೆಲೆಕ್ಟರ್ಸ್​ಗೆ, ಡೈರೆಕ್ಟ್ ಮಸೇಜ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಿತ್ತಾಡ್ತಿದ್ದ ‘ರಾಜಕುಮಾರಿ’ ಗಗನಾಗೆ ಮದುವೆ.. ಇಬ್ಬರ ಪತ್ನಿಯರ ಮುದ್ದಿನ ಗಂಡ
/filters:format(webp)/newsfirstlive-kannada/media/media_files/2025/10/10/yashasvi_jaiswal-2025-10-10-18-19-40.jpg)
ಆಯ್ಕೆಗಾರರಿಗೆ ನೇರ ಸಂದೇಶ ಕೊಟ್ಟ ಮುಂಬೈಕರ್
ಯಶಸ್ವಿ ಜೈಸ್ವಾಲ್ ಅಗ್ರೆಸಿವ್ ಬ್ಯಾಟರ್. ಜೈಸ್ವಾಲ್ ಬ್ಯಾಟಿಂಗ್ ಸ್ಟೈಲ್, ಟಿ-20 ಫಾರ್ಮೆಟ್​​ಗೆ ಸಖತ್ ಸೂಟ್ ಆಗುತ್ತೆ. ಜೈಸ್ವಾಲ್​ರನ್ನ ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್, ಪದೇ ಪದೇ ಕಣೆಗಣಿಸುತ್ತಿದ್ದಾರೆ. ಇದು ಜೈಸ್ವಾಲ್​ಗೆ ಭಾರೀ ಬೇಸರ ತರಿಸಿದೆ. ಆದ್ರೆ ಟಿ-20 ವಿಶ್ವಕಪ್​​ಗೆ ಒಂದುವರೆ ತಿಂಗಳು ಬಾಕಿ ಇದೆ. ಆಗಲೇ ಜೈಸ್ವಾಲ್, ತನಗೆ ಟಿ-20 ವಿಶ್ವಕಪ್ ಆಡುವ ಕನಸಿದೆ ಅಂತ ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ತನ್ನನ್ನೂ ಟಿ-20 ತಂಡಕ್ಕೆ ಪರಿಗಣಿಸಿ ಅಂತ ಸೆಲೆಕ್ಟರ್ಸ್​ಗೆ ನೇರ ಮೆಸೇಜ್ ಕೊಟ್ಟಿದ್ದಾರೆ.
ಜೈಸ್ವಾಲ್​ಗೆ ಸ್ಥಾನ ಸಿಗುತ್ತಾ..?
ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಕೋಚ್ ಟಿ-20 ವಿಶ್ವಕಪ್ ಟೂರ್ನಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಕೋಚ್ ಗಂಭೀರ್ ಮತ್ತು ಸೆಲೆಕ್ಟರ್ಸ್​, ಕೋರ್ ಟೀಮ್ ಸಹ ರೆಡಿ ಮಾಡಿಕೊಂಡಿದ್ದಾರೆ. ವಿಶ್ವಕಪ್​​ಗೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನಾಡುವ ತಂಡದಿಂದಲೇ ತಂಡವನ್ನ ಪಿಕ್ ಮಾಡೋ ಸಾಧ್ಯತೆ ಹೆಚ್ಚಿದೆ. ಆಫ್ರಿಕಾ ಸರಣಿಗೆ ಜೈಸ್ವಾಲ್ ಆಯ್ಕೆಯಾಗದ ಕಾರಣ ವಿಶ್ವಕಪ್​ಗೂ ಅನುಮಾನವಾಗಿದೆ.
ಇದನ್ನೂ ಓದಿ:ಜಿತೇಶ್ ಏಕಾಂಗಿ ಹೋರಾಟಕ್ಕೆ ಮಣಿಯಲಿಲ್ಲ ಗೆಲುವು.. ಮುಗ್ಗರಿಸಿದ ಭಾರತ ತಂಡ..!
/filters:format(webp)/newsfirstlive-kannada/media/post_attachments/wp-content/uploads/2024/07/JAISWAL-5.jpg)
ಜೈಸ್ವಾಲ್​ಗೆ ಆ ತ್ರಿಮೂರ್ತಿಗಳೇ ದೊಡ್ಡ ಸವಾಲು
ಎಡಗೈ ಬ್ಯಾಟರ್ ಜೈಸ್ವಾಲ್​​ಗೆ ಟೀಮ್ ಇಂಡಿಯಾ ಟಿ-20 ತಂಡದಲ್ಲಿ ಸ್ಥಾನ ಪಡೆಯೋದು, ಅಷ್ಟು ಸುಲಭವಲ್ಲ. ತಂಡದಲ್ಲಿ ಸ್ಥಾನ ಪಡೆಯಬೇಕಾದ್ರೆ ಜೈಸ್ವಾಲ್, ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್​ರನ್ನ ಓವರ್ ಟೇಕ್ ಮಾಡಬೇಕು. ಆದ್ರೆ ಅದು ಅದಷ್ಟು ಈಸೀ ಅಲ್ಲ. ಆ ತ್ರಿಮೂರ್ತಿಗಳು, ಟಿ-ಟ್ವೆಂಟಿ ತಂಡದ ಖಾಯಂ ಸದಸ್ಯರಾಗಿರೋದ್ರಿಂದ, ಜೈಸ್ವಾಲ್​​ ಡೋರ್ ಕ್ಲೋಸ್ ಆಗಿದೆ.
T20 ಫಾರ್ಮೆಟ್​​ನಲ್ಲಿ ಜೈಸ್ವಾಲ್ ಫಸ್ಟ್​ಕ್ಲಾಸ್ ಪಾಸ್
ಟಿ-20 ಇಂಟರ್​​ನ್ಯಾಷನಲ್​​​​​​​​​​​​ನಲ್ಲಿ ಜೈಸ್ವಾಲ್ ಯಶಸ್ಸು ಕಂಡಿದ್ದಾರೆ. ಆಡಿರೋ 23 ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕಗಳನ್ನ ಸಿಡಿಸಿರುವ ಜೈಸ್ವಾಲ್, 165ರ ಅದ್ಭುತ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಇನ್ನು ಐಪಿಎಲ್​ನಲ್ಲೂ ಜೈಸ್ವಾಲ್ ಫಸ್ಟ್​ಕ್ಲಾಸ್ ಪಾಸ್. 2 ಶತಕ ಮತ್ತು 15 ಅರ್ಧಶತಕಗಳನ್ನ ಬಾರಿಸಿರುವ ಜೈಸ್ವಾಲ್, 150ಕ್ಕಿಂತ ಹೆಚ್ಚು ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಟಿ-ಟ್ವೆಂಟಿ ಫಾರ್ಮೆಟ್​ನಲ್ಲಿ ಎಕ್ಸಲೆಂಟ್ ರೆಕಾರ್ಡ್ ಹೊಂದಿದ್ರೂ, ಜೈಸ್ವಾಲ್​ಗೆ ತಂಡದಲ್ಲಿ ಯಾಕೆ ಸ್ಥಾನ ಇಲ್ಲ ಅನ್ನೋದೇ ಗೊತ್ತಿಲ್ಲ.
ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳ ನಡೆಸಲು ಗ್ರೀನ್ ಸಿಗ್ನಲ್..!
ಒಂದೇ ತಿಂಗಳಲ್ಲಿ ಜೈಸ್ವಾಲ್ ಹಣೆಬರಹ ನಿರ್ಧಾರ
ಸದ್ಯ ಸೌತ್ ಆಫ್ರಿಕಾ ವಿರುದ್ಧ ಟಿ-20 ಸೀರಿಸ್ ಆಡ್ತಿರುವ ಟೀಮ್ ಇಂಡಿಯಾ, 2026 ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-ಟ್ವೆಂಟಿ ಸರಣಿಯನ್ನ ಆಡಲಿದೆ. ಕಿವೀಸ್ ವಿರುದ್ಧ ಆಡುವ ತಂಡವೇ, ವಿಶ್ವಕಪ್​​ನಲ್ಲೂ ಆಡಲಾಗುತ್ತೆ ಅಂತ ಹೇಳಲಾಗ್ತಿದೆ. ಆದ್ರೆ ನ್ಯೂಜಿಲೆಂಡ್ ಸರಣಿಗೆ ಜೈಸ್ವಾಲ್ ಆಯ್ಕೆಯಾಗ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಒಟ್ನಲ್ಲಿ ಜೈಸ್ವಾಲ್ ಆಲ್​ ಫಾರ್ಮೆಟ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಜೈಸ್ವಾಲ್​ಗೆ ತನ್ನ ಕನಸಿನಂತೆ, ಟಿ-20 ವಿಶ್ವಕಪ್ ಆಡುವ ಅದೃಷ್ಟ ಸಿಗೊತ್ತೋ ಇಲ್ವೋ ಅನ್ನೋದನ್ನ ಕಾದುನೋಡಬೇಕಷ್ಟೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us