/newsfirstlive-kannada/media/media_files/2025/12/12/chinnaswamy-2025-12-12-08-19-59.jpg)
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗೃಹ ಇಲಾಖೆಯ ಮೂಲಕ, ಕುನ್ಹಾ ವರದಿ ಶಿಫಾರಸು ಪ್ರಕಾರ ಅನುಮತಿ ನೀಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ.
ಹೊಸ ಷರತ್ತುಗಳೊಂದಿಗೆ ಅನ್ವಯ ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಳ್ಳಲು ಗೃಹ ಇಲಾಖೆಗೆ ಅಧಿಕಾರ ನೀಡಲಾಗಿದೆ. ಕುನ್ಹಾ ವರದಿಯಲ್ಲಿ ಸ್ಟೇಡಿಯಂ ಬಗ್ಗೆ ನೀಡಿರುವ ಸಲಹೆಗಳನ್ನ ಇಂಪ್ಲಿಮೆಂಟ್ ಮಾಡಬೇಕು ಎಂಬ ಷರತ್ತು ಆಧರಿಸಿ ಮ್ಯಾಚ್ ಆಡಿಸಲು ಸಹಮತ ಸಿಕ್ಕಿದೆ.
ಆರ್​ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ಬಳಿಕ ಕ್ರೀಡಾಂಗಣದಲ್ಲಿ ಮ್ಯಾಚ್​ಗಳನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿದ್ದು ಐಪಿಎಲ್ ಅಭಿಮಾನಿಗಳಿಗೆ ಸರ್ಕಾರ ಗುಡ್​ನ್ಯೂಸ್​ ಕೊಟ್ಟಿದೆ.
ಇದನ್ನೂ ಓದಿ: ಜಿತೇಶ್ ಏಕಾಂಗಿ ಹೋರಾಟಕ್ಕೆ ಮಣಿಯಲಿಲ್ಲ ಗೆಲುವು.. ಮುಗ್ಗರಿಸಿದ ಭಾರತ ತಂಡ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us