ಭಾರತಕ್ಕೆ ಲಿಯೋನೆಲ್ ಮೆಸ್ಸಿ ಭೇಟಿ.. ‘ಸೆಲ್ಫಿ ವಿತ್ ಮೆಸ್ಸಿ’ಗೆ 9.95 ಲಕ್ಷ ರೂಪಾಯಿ ನಿಗಧಿ

ಪ್ರಪಂಚದಾದ್ಯಂತದ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾಗಿರೋ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ.

author-image
Ganesh Kerekuli
bengaluru auto (1)
Advertisment
  • 15 ವರ್ಷಗಳ ನಂತರ ಭಾರತಕ್ಕೆ ಎರಡನೇ ಬಾರಿಗೆ ಭೇಟಿ
  • ಮೆಸ್ಸಿ ಭಾರತ ಪ್ರವಾಸದ ಹೆಸರು ‘GOAT’ India Tour
  • ಕೋಲ್ಕತ್ತ, ಮುಂಬೈ, ಡೆಲ್ಲಿ, ಹೈದರಾಬಾದ್​​ ನಗರಗಳಿಗೆ ಭೇಟಿ

ಪ್ರಪಂಚದಾದ್ಯಂತದ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾಗಿರೋ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ. 

ಭಾರತದ ಫುಟ್ಬಾಲ್ ಪ್ರಿಯರ ಜೀವಮಾನದ ಕನಸು ನನಸಾಗಲಿದೆ. ಇಂದು ಹೈದರಾಬಾದ್​ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೆಸ್ಸಿ ತಮ್ಮ ಅದ್ಭುತ ಪ್ರದರ್ಶನ ಪ್ರದರ್ಶಿಸಲಿದ್ದಾರೆ. ಈ ಪ್ರವಾಸದ ಭಾಗವಾಗಿ, ಅವರು ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ:ಆಯ್ಕೆಗಾರರಿಗೆ ನೇರ ಸಂದೇಶ ಕೊಟ್ಟ ಜೈಸ್ವಾಲ್.. ದೊಡ್ಡ ಕನಸು ಏನು?

ಭಾರತಕ್ಕೆ ಬರುತ್ತಿರುವ ಮೆಸ್ಸಿಯೊಂದಿಗೆ ಸೆಲ್ಪಿ ಫೋಟೊ ತೆಗೆದುಕೊಳ್ಳಲು 9.95 ಲಕ್ಷ ರೂಪಾಯಿ ದರ ನಿಗದಿಪಡಿಸಲಾಗಿದೆ. ಹೈದರಾಬಾದ್‌ನ ಫಲಕ್ಷುಮಾ ಪ್ಯಾಲೇಸ್‌ನಲ್ಲಿ 100 ಜನರಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ. 

2011ರ ನಂತರ ಮೊದಲ ಬಾರಿಗೆ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಮೆಸ್ಸಿ ಅವರ ಭಾರತದ ಎರಡನೇ ಭೇಟಿಯಾಗಿದೆ. ಈ ಪ್ರವಾಸದಲ್ಲಿ ಯಾವುದೇ ಸ್ಪರ್ಧಾತ್ಮಕ ಫುಟ್​ಬಾಲ್ ಪಂದ್ಯಗಳನ್ನು ಆಯೋಜನೆ ಮಾಡಿಲ್ಲ. ಈ ಬಾರಿ, ‘ಗೋಟ್ ಇಂಡಿಯಾ ಟೂರ್ 2025’ (GOAT India Tour) ಅಡಿಯಲ್ಲಿ ಕೋಲ್ಕತ್ತಾದಲ್ಲಿ ಶನಿವಾರ ಪ್ರಾರಂಭವಾಗಿ ಸೋಮವಾರ ದೆಹಲಿಯಲ್ಲಿ ಕೊನೆಗೊಳ್ಳಲಿದೆ.  ಈ ಪ್ರವಾಸದಲ್ಲಿ ಮೆಸ್ಸಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಅವರ ಪ್ರವಾಸವು ಪ್ರಚಾರ ಮತ್ತು ವಾಣಿಜ್ಯ ಉದ್ದೇಶದಿಂದ ನಿಯೋಜನೆಗೊಂಡಿದೆ. 

ಇದನ್ನೂ ಓದಿ:ಗಿಲ್​​ಗೆ ಬಂಪರ್​ ಬಹುಮಾನ.. ಕೊಹ್ಲಿ, ರೋಹಿತ್​​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್..!

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಘಟಕರು 78,000 ಆಸನಗಳನ್ನು ತೆರೆದಿದ್ದು, ಶನಿವಾರ ಬೆಳಗ್ಗೆ 45 ನಿಮಿಷಗಳ ಪ್ರದರ್ಶನದ ಟಿಕೆಟ್ ಬೆಲೆ 7,000 ರೂಪಾಯಿಗೆ ಏರಿದೆ. ಕೋಲೊತ್ತಾ, ಹೈದರಾಬಾದ್, ಮುಂಬಯಿ ಮತ್ತು ದಿಲ್ಲಿಗೆ ಭೇಟಿ ನೀಡಲಿರುವ ಮೆಸ್ಸಿ, 72 ಗಂಟೆಗಳಿಗಿಂತ ಕಡಿಮೆ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ. 

ಉದ್ಯಮಿಗಳು, ಚಿತ್ರನಟರೊಂದಿಗೆ ಸಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯೋಜಿತ ಸಭೆ ನಡೆಸಲಿದ್ದಾರೆ. ನಾಳೆ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆಯಲಿದೆ. ಈ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಶುಬ್ಮನ್ ಗಿಲ್​​ರನ್ನು ಭೇಟಿಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ: ವಿರಾಟ್ ಕೊಹ್ಲಿ 35 ವರ್ಷ ಕಳೆದ ಮೇಲೆ.. ಇಂಟ್ರೆಸ್ಟಿಂಗ್ ಸ್ಟೋರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lionel Messi GOAT India Tour
Advertisment